ಹೊನ್ನಾವರ: ಜುಲೈ 16, ಬುಧವಾರದಂದು ಹೊನ್ನಾವರ ತಾಲೂಕಿನಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

110 ಕೆ.ವಿ. ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ 10 ಎಂ.ವಿ.ಎ. ಟ್ರಾನ್ಸ್‌ಫಾರ್ಮರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, ಇದರ ಪರಿಣಾಮವಾಗಿ ಕೆಲವೆಡೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
- ಹೊನ್ನಾವರ ಪಟ್ಟಣ ಶಾಖೆ ವ್ಯಾಪ್ತಿಯಲ್ಲಿ: ಬಂದರು, ಕೆ.ಎಚ್.ಬಿ ಕಾಲೋನಿ, ಎಲ್.ಐ.ಸಿ ಹಾಗೂ ಕರ್ಕಿ ಫೀಡರ್ ಪ್ರದೇಶಗಳು
- ಕಾಸರಕೋಡ 33 ಕೆ.ವಿ ಉಪಕೇಂದ್ರ ವ್ಯಾಪ್ತಿಯಲ್ಲಿ: ಕೆಳಗಿನೂರು, ಟೊಂಕಾ, ಬಳ್ಳೂರು, ದೇವರಗದ್ದೆ ಮತ್ತು ಇಡಗುಂಜಿ ಫೀಡರ್ ವ್ಯಾಪ್ತಿಯ ಪ್ರದೇಶಗಳು
ಸಾಮಾನ್ಯ ಸೇವೆಗಳ ನಿರ್ವಹಣೆಗೆ ಈ ತಾತ್ಕಾಲಿಕ ವ್ಯತ್ಯಯ ಅನಿವಾರ್ಯವಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಮನವಿ ಮಾಡಿದೆ.


