ಐಐಟಿ ಪ್ರವೇಶದ ಸಾಧನೆ ಮಾಡಿದ ಅಂಕೋಲಾದ ಶೆಟಗೇರಿಯ ತೇಜಸ್ ವಿ ನಾಯಕ

ಅಂಕೋಲಾ : ತಾಲೂಕಿನ ಶೆಟಗೇರಿ ಗ್ರಾಮದ ಪ್ರಸ್ತುತ ಉಡುಪಿ ಜಿಲ್ಲೆ ಕುಂದಾಪುರದಲ್ಲಿ ನಿವಾಸಿಯಾಗಿರುವ ತೇಜಸ್ ವಿ ನಾಯಕ್ ಅವರು ಬಿಟೆಕ್ ಪದವಿ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣ ಪರೀಕ್ಷೆ ಜೆಇಇ ಅಡ್ವಾನ್ಸ್ ನಲ್ಲಿ 1661 ನೇ Rank ಪಡೆದು ಅತ್ಯುತ್ತಮ ಸಾಧನೆ ಮಾಡಿರುತ್ತಾರೆ.

ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ವೆಂಕಟರಮಣ ಬಿ. ನಾಯಕ ಹಾಗೂ ಕುಂದಾಪುರದ ಬಸ್ರೂರಿನ ಪೌಢಶಾಲಾ ಗಣಿತ ಶಿಕ್ಷಕಿಯಾಗಿರುವ ಜಯಲಕ್ಷ್ಮಿ ನಾಯಕ ಇವರ ಪುತ್ರನಾದ ತೇಜಸ್ ವಿ ನಾಯಕ್ 10ನೇ ತರಗತಿಯಲ್ಲಿ 8 ನೇ Rank ಪಡೆದಿದ್ದರು. ನಂತರ ಕಾರ್ಕಳದ ಕ್ರಿಯೇಟಿವ್ ಪಿ ಯು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದು, ಇದೀಗ ಪಿಯುಸಿ ಯಲ್ಲಿ 590 ಅಂಕಗಳೊಂದಿಗೆ ರಾಜ್ಯಕ್ಕೆ 10 ನೇ Rank ಪಡೆದು, ರಾಷ್ಟ್ರೀಯ ಮಟ್ಟದ ಜೆಇಇ ಮೇನ್ಸ್ ನಲ್ಲಿ  98.71 ಪರ್ಸಂಟೈಲ್, ಜೆಇಇ ಆರ್ಕಿಟೆಕ್ಚರ್ ಆಲ್ ಇಂಡಿಯಾ 101ನೇ Rank ಜೆಇಇ ಪ್ಲಾನಿಂಗ್ 33 Rank ಕರ್ನಾಟಕ ಯುಜಿಸಿಇಟಿ ಯಲ್ಲಿ 434 Rank ಕಾಮೆಡ್ ಕೆ 392 Rank ತಮಿಳುನಾಡಿನ ಪ್ರತಿಷ್ಟಿತ ವೆಲ್ಲೂರಿನ  ವಿ ಐ ಟಿ- ಯಲ್ಲಿ ಕಂಪ್ಯೂಟರ್ ಸಯನ್ಸ್ ಗೆ ಆಯ್ಕೆ, ಐಐಟಿ ಮದ್ರಾಸ್‌ ನಲ್ಲಿ ಆನ್ಲೈನ್ ಡಾಟಾ ಸಯನ್ಸ್ ಮತ್ತು ಸ್ಟೆಟಸ್ಟಿಕ್ ಕೋರ್ಸ್ ಗೆ ಆಯ್ಕೆ, ಭಾರತೀಯ ವಿಜ್ಞಾನ ಮತ್ತು ಸಂಶೋಧನಾ ವಿಭಾಗಕ್ಕೆ ಐಐ ಎಸ್ ಆರ್ನಲ್ಲಿ 460 ನೇ Rank ಪಡೆದು ಆಯ್ಕೆಯಾಗಿರುತ್ತಾರೆ.

ರಾಷ್ಟ್ರಮಟ್ಟದ ಅತೀ ಕಠಿಣ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ ನಲ್ಲಿ 1661 ನೇ Rank ಪಡೆದು ಅತ್ಯುತ್ತಮ ಸಾಧನೆ ಮಾಡಿ IIT HYDARABAD ಇಂಜಿನಿಯರಿಂಗ್ ಸಯನ್ಸ್ ಕೋರ್ಸ್ ಗೆ ಆಯ್ಕೆಯಾಗಿದ್ದು, ಪ್ರತಿಷ್ಠಿತ ಬಿಟೆಕ್ ಪದವಿ ಹಾಗೂ ಐಐಟಿ ಮದ್ರಾಸ್‌ ನ ಸ್ಟೆಟಾಸ್ಟಿಕ್- ಡಾಟಾ ಸಯನ್ಸ್- ಆನ್ಲೈನ್ ಕೋರ್ಸ್ ಪಡೆದು ಮುಂದಿನ ಸಾಧನೆ ಮಾಡಬೇಕೆನ್ನುವ ಆಸಕ್ತಿ ಹೊಂದಿರುತ್ತಾರೆ.

ತೇಜಸ್ ನ ಈ ಸಾಧನೆ ಉಡುಪಿ ಹಾಗೂ ಉತ್ತರಕನ್ನಡಕ್ಕೆ ಹೆಮ್ಮೆ ತಂದಿದ್ದು , ಸಾಧನೆಯ ಗುರಿಯಿಟ್ಟುಕೊಂಡಿರುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ತೇಜಸ್ ನ ಈ ಸಾಧನೆಗೆ ಅಭಿನಂದನೆಗಳು.