ಮೊಬೈಲ್ ಅಂಗಡಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ

ಅಂಕೋಲಾ: ತಾಲೂಕಿನ ಅವರ್ಸಾದ ಮೊಬೈಲ್ ಅಂಗಡಿಯೊಂದರಲ್ಲಿ ನಿನ್ನೆ ರಾತ್ರಿ ಸುಮಾರು 12 ಗಂಟೆಗೆ ಕಳ್ಳತನ ನಡೆದಿದ್ದು, ಕಳ್ಳರಿಬ್ಬರು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಸಿದ್ಧಾರ್ಥ ನಾಯ್ಕ ಹಾಗೂ ರಮಾಕಾಂತ ಘನಶ್ಯಾಮ ನಾಯ್ಕ ಅವರ್ಸಾ ಕಳ್ಳತನ ನಡೆಸಿದ ಆರೋಪಿಗಳು.

ಹಾರವಾಡದ ಸಂಜೀವ ನಾಯ್ಕಗೆ ಸೇರಿದ ಮೊಬೈಲ್ ಅಂಗಡಿಯಲ್ಲಿ ನಿನ್ನೆ ರಾತ್ರಿ ಸುಮಾರು 12 ಗಂಟೆಗೆ ಮೊಬೈಲ್ ಅಂಗಡಿಯ ಮೇಲ್ಛಾವಣಿ ಹಾರಿ ಒಳಗೆ ಪ್ರವೇಶಿಸಿದ ಸಿದ್ಧಾರ್ಥ ನಾಯ್ಕ ಅಂಗಡಿಯಲ್ಲಿದ್ದ 1000 ರೂಪಾಯಿ ಹಣ ಹಾಗೂ 2 ಸ್ಮಾರ್ಟ್ ಫೋನ್ ಗಳನ್ನು ಕದ್ದಿದ್ದಾನೆ. ಈ ಕಳ್ಳತನಕ್ಕೆ ರಮಾಕಾಂತ ಘನಶ್ಯಾಮ ನಾಯ್ಕ ಹೊರಗಡೆ ನಿಂತು ಸಹಾಯ ಮಾಡಿದ್ದಾನೆ ಎಂದು ಮಾಲಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿದ್ಧಾರ್ಥ ನಾಯ್ಕ ಮೇಲೆ ಈ ಹಿಂದೆ ಅವರ್ಸಾದಲ್ಲಿ ನಡೆದ ಅನೇಕ ಕಳ್ಳತನದಲ್ಲಿ ಭಾಗಿಯಾಗಿದ್ದ ಕುರಿತು ಆರೋಪವಿದೆ.