
ಶಿರಸಿ: ಅರಣ್ಯವಾಸಿಗಳಿಗೆ ಪರಿಸರ ಜ್ಞಾನ ಮತ್ತು ಜಾಗೃತೆ ಮೂಡಿಸುವ ಉದ್ದೇಶದಿಂದ ಸತತವಾಗಿ 5 ನೇ ವರ್ಷದ ದಶಲಕ್ಷ ಗಿಡ ನೆಡುವ ಅಭಿಯಾನ ಜಿಲ್ಲಾದ್ಯಂತ ಐತಿಹಾಸಿಕ ಕಾರ್ಯಕ್ರಮ ಉತ್ತರಕನ್ನಡ ಜಿಲ್ಲಾದ್ಯಂತ 147 ಗ್ರಾಮ ಪಂಚಾಯತ್ ವ್ಯಾಪ್ತಿಯ 650 ಕ್ಕೂ ಮಿಕ್ಕ ಗ್ರಾಮದಲ್ಲಿ ಎಕಕಾಲದಲ್ಲಿ ಚಾಲನೆ ಇಂದು ನೀಡಲಾಯಿತು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ,ಮುಂಡಗೋಡ, ಜೋಯಿಡಾ, ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ, ಮತ್ತು ಕಾರವಾರ ತಾಲೂಕಾದ್ಯಂತ ಸಹಸ್ರಾರು ಗ್ರೀನ್ ಕಾರ್ಡ ಪ್ರಮುಖರು ಮತ್ತು ಅರಣ್ಯವಾಸಿಗಳ ಸಹಬಾಗಿತ್ವದಲ್ಲಿ ಸಕ್ರಿಯವಾಗಿ ಗಿಡ ನೆಡುವ ಐತಿಹಾಸಿಕ ಕಾರ್ಯ ಜಿಲ್ಲೆಯಲ್ಲಿ ಜರುಗಿದವು ಎಂದು ಅವರು ಹೇಳಿದರು.

ತುಂತುರು ಮಳೆಯಲ್ಲಿಯು ಅರಣ್ಯವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೊಂದಿಗೆ ಆಸಕ್ತಿಯಿಂದ ಗಿಡ ನೆಡುವ ಅಭಿಯಾನದಲ್ಲಿ ಭಾಗವಹಿಸಿ 100 ಕ್ಕೂ ಮಿಕ್ಕಿ ವಿವಿಧ ಪ್ರಭೇದಗಳ ಗಿಡಗಳನ್ನ ಅರಣ್ಯವಾಸಿಗಳು ನೆಟ್ಟರಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದರು.

ಶಿರಸಿ ತಾಲೂಕಿನಲ್ಲಿ ಜರುಗಿದ ಅಭಿಯಾನದಲ್ಲಿ ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ರಪೀಕ ಗೌಡಳ್ಳಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತಾ ವಾಮನ್ ನಾಯ್ಕ, ನೆಹರು ಪಾಟೀಲ್, ಎಮ್ ಆರ್ ನಾಯ್ಕ, ಹೇಮಂತ ನಾಯ್ಕ, ಮಾದೇವ ಹನುಮಂತ ನಾಯ್ಕ, ಕುಶಲವ ಈಶ್ವರ ನಾಯ್ಕ, ಅಣ್ಣಪ್ಪ ಬಿ ನಾಯ್ಕ, ಲಕ್ಕಪ್ಪ ನಾಯ್ಕ, ಜಟ್ಟು ದುರ್ಗ ನಾಯ್ಕ, ಸುರೇಶ್ ಆರ್ ನಾಯ್ಕ, ಗಂಗೂಬಾಯಿ ರಜಪೂತ್, ಕಲ್ಪನಾ ಪಾವಸ್ಕರ್, ಪರಮೇಶ್ವರ ಶಿವು ಗೌಡ, ಅಕ್ಷತಾ ಗಣಪತಿ ಗೌಡ,ಭಾರತಿ ರಾಮ ಗೌಡ, ಹುಲಿಯಾ ಸುಬ್ಬ ಗೌಡ,ರಾಮ ಮರಿಯಾ ಗೌಡ, ಹುಲಿಯಾ ಶಿವು ಗೌಡ ಮುಂತಾದವರು ನೇತೃತ್ವವಹಿಸಿದರು.

ಐತಿಹಾಸಿಕ ಕಾರ್ಯ :
ಜಿಲ್ಲಾದ್ಯಂತ ಸ್ವಪ್ರೇರಣೆಯಿಂದ ಸಹಸ್ರಾರು ಅರಣ್ಯವಾಸಿಗಳು ಲಕ್ಷಕ್ಕೂ ಮೀರಿ ಗಿಡಗಳನ್ನ 650ಕ್ಕೂ ಮಿಕ್ಕಿ ವಿವಿಧ ತಾಲೂಕಿನ ಮತ್ತು ವಿವಿಧ ಸ್ಥಳಗಳಲ್ಲಿ ಗಿಡನೆಡವ ಅಭಿಯಾನವು ಐತಿಹಾಸಿಕ ಕಾರ್ಯ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳುತ್ತಾ, ಯಶಸ್ವಿ ಚಾಲನೆಯ ಪ್ರೇರಕರಾಗಿರುವ ಗ್ರೀನ್ ಕಾರ್ಡ ಪ್ರಮುಖರಿಗೆ ಅವರು ಅಭಿನಂದಿಸಿದರು.


