ಪೆದ್ರು ಪೊವೆಡ್ ವಿಶೇಷ ಶಾಲಾ ಮಕ್ಕಳಿಗೆ ಯೋಗಾಸನ ಮ್ಯಾಟ್ ವಿತರಣೆ

ಹೊನ್ನಾವರ ಜೂ.10 : ಹೊನ್ನಾವರದ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ತಾಲೂಕ ಘಟಕದ ಕೇಂದ್ರ ಕಚೇರಿ ಕಟ್ಟಡದ ಪ್ರಥಮ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗಾಗಿ ಪೆದ್ರು ಪೊವೆಡ್ ವಿಶೇಷ ಶಾಲಾ ಮಕ್ಕಳಿಗೆ ಯೋಗಾಸನ ಮ್ಯಾಟ್ ಗಳನ್ನು ಸವಿನೆನಪಿಗಾಗಿ ಕಾಣಿಕೆಯಾಗಿ ನೀಡಿದ್ರು…

ಶಾಲೆಗೆ ಭೇಟಿ ನೀಡಿ ವಿಶೇಷ ಚೇತನಾ ಮಕ್ಕಳಿಗೆ ಯೋಗಾಸನ ಮಾಡಲು ಅನುಕೂಲವಾಗುವಂತೆ ಯೋಗಾಸನ ಮ್ಯಾಟ್ ಗಳನ್ನು ಸವಿನೆನಪಿಗಾಗಿ ಕಾಣಿಕೆಯಾಗಿ ನೀಡಿದರು. ಈ ವೇಳೆ ಶಿರಸ್ತೇದಾರ ಕೃಷ್ಣ ಗೊಂಡ ಮಾತನಾಡಿ, ಶಾಲೆಯ ಶಿಕ್ಷಕರ ತಾಳ್ಮೆ ಅವರ್ ಸಹನೆ ಬಗ್ಗೆ ಮಾತನಾಡಿ ವಿಶೇಷ ಚೇತನಾ ಮಕ್ಕಳ ಬಗ್ಗೆ ಮಾತನಾಡಿ ಶುಭ ಹಾರೈಸಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದೇಣಿಗೆ ನೀಡಿದರು.

ಸಂಘದ ಅಧ್ಯಕ್ಷರಾದ ವೈಭವಿ ಭಂಡಾರಿ ಮಾತನಾಡಿ, ಇನ್ನೂ ಸಂಘದಿಂದ ಶಾಲಾ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವದಾಗಿ ತಿಳಿಸಿದರು. ಸದರಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ಕೆ ಶಾಲಾ  ಶಿಕ್ಷಕರು ಹರ್ಷವ್ಯಕ್ತಪಡಿಸಿ ಸಂಘದ ಎಲ್ಲರಿಗೂ ಧನ್ಯವಾದ ತಿಳಿಸಿದ್ರು….

ಈ ವೇಳೆ ಸಂಘದ ಅಧ್ಯಕ್ಷರಾದ ಮಹೇಂದ್ರ ಗೌಡ, ನಿಕಟಪೂರ್ವ ಅಧ್ಯಕ್ಷರಾದ ಜ್ಞಾನೇಶ್ ಎಂ.ಎಲ್ ಮತ್ತು ಸಂಘದ ಪ್ರಧಾನ ಕಾರ್ಯದರ್ಶಿ ಉಪಾಧ್ಯಕ್ಷರು, ಎಲ್ಲ ಪದಾಧಿಕಾರಿಗಳು ಮತ್ತು ಎಲ್ಲಾ ಗ್ರಾಮ ಆಡಳಿತ ಅಧಿಕಾರಿ ಮಿತ್ರರು ಸಹದ್ಯೋಗಿಗಳು ಉಪಸ್ಥಿತರಿದ್ದರು…