ಗ್ರೆಗೋರಿ ಗೊನ್ಸಾಲ್ವಿಸ್‌ರಿಗೆ ಲೆಫ್ಟಿನೆಂಟ್‌ ಕರ್ನಲ್‌ ಬಡ್ತಿ

ಹೊನ್ನಾವರ ಜೂ. 11: ಹೊನ್ನಾವರದ ದುರ್ಗಾಕೇರಿಯಲ್ಲಿ ಜನಿಸಿದ ಗ್ರೆಗೋರಿ ಗೊನ್ಸಾಲ್ವಿಸ್ ಭಾರತೀಯ ಭೂಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಹೋದರ ಮೈಕಲ್ ಸಹ ಭೂಸೈನ್ಯದ ಸಿಗ್ನೆಲ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅರಣ್ಯ ಇಲಾಖೆಯಲ್ಲಿ ನೌಕರರಾಗಿದ್ದ ತಂದೆ ತಮ್ಮ ಇಬ್ಬರು ಗಂಡು ಮಕ್ಕಳನ್ನು ಸೈನ್ಯದ ಸೇವೆಗೆ ನೀಡಿದ್ದಾರೆ.

ಸದ್ಯ ಗ್ರೆಗೋರಿ ಪಾಕಿಸ್ತಾನದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಮೈಕಲ್ ಚೈನಾ ಗಡಿಯಲ್ಲಿದ್ದಾರೆ. ಗ್ರೆಗೋರಿ ಗೊನ್ಸಾಲ್ವಿಸ್ ಇವರ ಸೇವೆಯನ್ನು ಗುರುತಿಸಿದ ಇಲಾಖೆ ಆಗಾಗ ಬಡ್ತಿ ನೀಡುತ್ತಾ ಬಂದಿದೆ. ಇತ್ತೀಚೆ ನಡೆದ ಸಮಾರಂಭ ಒಂದರಲ್ಲಿ ಗ್ರೆಗೋರಿಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿದೆ.

ಉತ್ತರ ಕನ್ನಡದಿಂದ ಸಾಕಷ್ಟು ಜನ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದು ಕೆಲವರಿಗೆ ಉನ್ನತ ಪದವಿ ದೊರಕಿದೆ. ಗ್ರೆಗೋರಿ ಮತ್ತು ಮೈಕಲ್ ಸಹೋದರರು ಬಹುಕಾಲ ದೇಶ ಸೇವೆ ಮಾಡಿ ಮರಳಲಿ ಎಂದು ಅವರ ಸ್ನೇಹಿತರಾದ ಬಾಲಕೃಷ್ಣ ಬಾಳೇರಿ ಮತ್ತು ಇತರರು ಹಾರೈಸಿದ್ದಾರೆ.