ಹೊನ್ನಾವರ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ

ಹೊನ್ನಾವರ ಜೂನ್‌ 27 : ಹೊನ್ನಾವರದ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ತಾಲೂಕಾಡಳಿತ, ತಾ.ಪಂ ಹಾಗೂ ಪ.ಪಂ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಹೊನ್ನಾವರ ತಾಲೂಕು ದಂಡಾಧಿಕಾರಿ ರವೀರಾಜ್ ದೀಕ್ಷಿತ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ರು. ಬಳಿಕ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ರು..

ಈ ವೇಳೆ ಅಳ್ಳಂಕಿ ಪ.ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಜಿ.ಎಸ್‌ ಹೆಗಡೆ ಮಾತನಾಡಿ, ಕೆಂಪೇಗೌಡರ ಜೀವನ ಹಾಗೂ ಅವರ ಸಾಧನೆ, ಆದರ್ಶ, ವ್ಯಕ್ತಿತ್ವ ಆಡಳಿತದ ಬಗ್ಗೆ ಸ್ವವಿವರವಾಗಿ ಹೇಳಿದ್ರು. ಈ ನಾಡನ್ನು ಸಾಕಷ್ಟು ಅರಸರು-ಸಾಮ್ರಾಟರು ಆಳ್ವಿಕೆ ಮಾಡಿ, ಈ ನಾಡನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಕಾರ್ಯಗಳನ್ನು ನಾವು ಸ್ಮರಿಸಿಕೊಳ್ಳಬೇಕು. ಹಾಗೂ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದ್ರು..

ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್ ನಾಯ್ಕ ಮಾತನಾಡಿ, ಬೆಂಗಳೂರು ಎಂದರೇ ನಮಗೆ  ನೆನಪಿಗ ಬರೋದೆ ಕೆಂಪೇಗೌಡರು.ಆಗಿನ ಕಾಲದಲ್ಲಿ ಬೆಂಗಳೂರನ್ನು ನಿರ್ಮಾಣ ಮಾಡೋಕೆ ಅವರು ಮಾಡಿದ ಕಾರ್ಯ‌ ನಿಜಕ್ಕೂ ಶ್ಲಾಘನೀಯ. ಅದರ ಫಲವಾಗಿ ಇಂದು ಬೆಂಗಳೂರು ರಾಜ್ಯದ ರಾಜಧಾನಿಯಾಗಿ, ಸಿಲಿಕಾನ್ ಸಿಟಿಯಾಗಿ ಬೆಳೆದಿದೆ. ಅವರ ಸಾಧನೆ ಹಾಗೂ ವ್ಯಕ್ತತ್ವಗಳನ್ನು ನಮ್ಮ ಜೀವನದಲ್ಲಿ ಅಳಡಿಸಿಕೊಳ್ಳೋಣ ಎಂದು ಹೇಳಿದ್ರು ಹಾಗೂ ಎಲ್ಲರಿಗೂ ಕೆಂಪೇಗೌಡರ ಜಯಂತಿಯ ಶುಭಾಶಯಗಳನ್ನು ಕೋರಿದರು..

ಇನ್ನೂ ಈ ವೇಳೆ ಒಕ್ಕಲಿಗರ ಸಂಘದ ತಾಲೂಕಾ ಅಧ್ಯಕ್ಷರಾದ ತಿಮ್ಮಪ್ಪಗೌಡ ಮಾತನಾಡಿ, ಕೆಂಪೇಗೌಡರ ದಿನಾಚರಣೆ ಕೋರಿದ್ರು. ಹಾಗೂ ನಮ್ಮ ಒಕ್ಕಲಿಗರ ತಾಲೂಕಾ ಘಟಕದ ವತಿಯಿಂದ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೆಂಪೇಗೌಡರ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುವುದು‌ ಎಂದು ಹೇಳಿದ್ರು..

ಇನ್ನೂ ತಾಲೂಕಾ ದಂಡಾಧಿಕಾರಿಗಳಾದ ರವಿರಾಜ್ ಧೀಕ್ಷಿತ್, ದೂರದೃಷ್ಠಿಯಿಂದ ನಾಡಿಗೆ ನೀಡುವ ಕೊಡುಗೆಯಿಂದಾಗುವ ಪ್ರಯೋಜನಕ್ಕೆ ಉದಾಹರಣೆಯೇ ಕೆಂಪೇಗೌಡರು. ಕೆಂಪೇಗೌಡರ ಆದರ್ಶ ಅವರ ವ್ಯಕ್ತಿತ್ವ ನಮ್ಮೆಲ್ಲರಿಗೂ ಬರಲಿ ಎಂದು ಹೇಳಿದ್ರು… ಇನ್ನೂ ಈ ವೇಳೆ ಕೆಂಪೇಗೌಡರ ಜಯಂತಿಯ ಆಚರಣೆ ಪ್ರಯುಕ್ತ ನಗರದ ವಿವಿಧ ಶಾಲಾ ಹಾಗೂ ಕಾಲೇಜುಗಳಲ್ಲಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯ್ತು..

ಈ ವೇಳೆ ಕಾರ್ಯಕ್ರಮದಲ್ಲಿ ತಾಲೂಕ ದಂಡಾಧಿಕಾರಿ ರವಿರಾಜ್ ಧೀಕ್ಷಿತ್,  ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್ ನಾಯ್ಕ, ತಾಲೂಕಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮಪ್ಪಗೌಡ, ತಾ.ಪಂ, ಜಿ.ಪಂ ಆಡಳಿತ ಸಿಬ್ಬಂದ, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು..

ವಿರೇಶ ಜೊತೆಗೆ ರಾಜೇಶ ನುಡಿಸಿರಿ‌ ನ್ಯೂಸ್, ಹೊನ್ನಾವರ…