
ಹೊನ್ನಾವರ ತಾಲೂಕಿನ ಚಂದಾವರ ಚರ್ಚ್ ಬಳಿ ರಸ್ತೆ ದಾಟುತ್ತಿದ್ದ ಚಿರತೆಯೊಂದಕ್ಕೆ ವಾಹನ ಬಡಿದ ಪರಿಣಾಯ ಗಾಯಗೊಂಡು ರಸ್ತೆ ಪಕ್ಕದಲ್ಲೇ ಕುಳಿತ ಘಟನೆ ನಡೆದಿದೆ. ಶನಿವಾರ ಚಂದಾವರ ಚರ್ಚ್ ಬಳಿ ಚಿರತೆಯೊಂದು ರಸ್ತೆ ದಾಟಲು ಮುಂದಾಗಿದ್ದು, ಈ ವೇಳೆ ರಸ್ತೆಯಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಚಿರತೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಿರತೆಯ ಸೊಂಟಕ್ಕೆ ತೀವ್ರ ಗಾವವಾಗಿದ್ದು, ನಡೆಯಲಾಗದೇ ಒದ್ದಾಡಿದ ಚಿರತೆ ರಸ್ತೆ ಪಕ್ಕದಲ್ಲಿಯೇ ಗಿಡಗಳ ಬಳಿ ಕುಳಿತಿದೆ.
ಚಿರತೆ ರಸ್ತೆ ಬಳಿ ಕುಳಿತ ಹಿನ್ನೆಲೆ ವಾಹನ ಸವಾರರು ಭಯದಿಂದ ಸಂಚರಿಸದೇ ರಸ್ತೆಯಲ್ಲೇ ನಿಂತಿದ್ದಾರೆ. ಇದರಿಂದಾಗಿ ಕುಮಟಾ-ಸಿದ್ದಾಪುರ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಇನ್ನೂ ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದು ಚಿಕಿತ್ಸೆ ನೀಡಲಾಗುತ್ತಿದೆ.
ಒಟ್ನಲ್ಲಿ ಗಾಯಗೊಂಡಿದ್ದು ನಡೆಯಲಾಗದೇ ಒದ್ದಾಡುತ್ತಿರುವ ಚಿರತೆ ಪರಿಸ್ಥಿತಿ ನೋಡಿ ಕೆಲವರು ಪಾಪ ಎಂದು ಕೊಂಡರೆ. ಮತ್ತು ಕೆಲವರು ಅದರ ಘರ್ಜನೆಗೆ ಭಯ ಪಟ್ಟಿದ್ದಾರೆ. ಇನ್ನೂ ಚಿರತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸುತ್ತಮುತ್ತಲಿನ ಜನರು ಚಿರತೆ ಕಂಡು ಮತ್ತೇ ಆತಂಕಗೊಂಡಿದ್ದಾರೆ..



