ದೇವರಾಜ ಅರಸು ಸ್ಮರಣಾರ್ಥ ಆ. 20 ರಂದು ‘ಅರಸು ಸ್ಮರಣೆ’ ಪ್ರಶಸ್ತಿ ಪ್ರದಾನ

ಹೊನ್ನಾವರ: ದಿ. ಡಿ. ದೇವರಾಜ ಅರಸು 107ನೇ ಜನ್ಮ ದಿನಾಚರಣೆ ನಿಮಿತ್ತ ದಿ. ಡಿ. ದೇವರಾಜ ಅರಸು ವಿಚಾರ ವೇದಿಕೆ ಹೊನ್ನಾವರ, ಉತ್ತರ ಕನ್ನಡ ಇವರ ವತಿಯಿಂದ ಸತತ 25 ವರ್ಷಗಳ ಕಾಲ ಗ್ರಾ.ಪಂ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಪ್ರತಿನಿಧಿಗಳಿಗೆ ‘ಅರಸು ಸ್ಮರಣೆ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಗಸ್ಟ್ 20 ರಂದು ಹೊನ್ನಾವರ ಪಟ್ಟಣದ ನಾಮಧಾರಿ ವಿದ್ಯಾರ್ಥಿ ನಿಲಯದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿಗಳಾದ ಡಾ. ಎಂ. ವೀರಪ್ಪ ಮೊಯ್ಲಿ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಆರ್.ಎನ್.ನಾಯ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪತ್ರಿಕೆಯ ಸಂಪಾದಕರಾದ ಶಶಿಧರ ಭಟ್ಟ, ಮಾಜಿ ಜಿ.ಪಂ ಅಧ್ಯಕ್ಷ ಆರ್.ಎಸ್.ರಾಯ್ಕರ್ ಉಪ್ಪೋಣಿ ಪಾಲ್ಗೊಳ್ಳುವರು.

ಕಾರ್ಯಕ್ರಮದಲ್ಲಿ ಸತತ 25 ವರ್ಷಗಳ ಕಾಲ ಗ್ರಾ.ಪಂ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಭಟ್ಕಳ ಬೆಂಗ್ರೆಯ ವಿ.ಜೆ.ಬೈರುಮನೆ, ಭಟ್ಕಳ ಕಾಯ್ಕಿಣಿಯ ವೆಂಕಟೇಶ ನಾಗಪ್ಪ ನಾಯ್ಕ, ಹೊನ್ನಾವರ ಮುಗ್ವಾದ ಐ.ವಿ.ನಾಯ್ಕ, ಕುಮಟಾ ಗೋಕರ್ಣದ ಪ್ರಭಾಕರ ಗಂಗಾಧರ ಪ್ರಸಾದ ಹಾಗೂ ಭಟ್ಕಳ ಹೆಬಳೆಯ ಅಲಿ ಆದಾಂ ಇಬ್ಬು ರನ್ನು ಸನ್ಮಾನಿಸಿ ಗೌರವಿಸಲಾಗುವುದು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ದಿ. ಡಿ. ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.