ಶರಾವತಿಯಲ್ಲಿ ದೋಣಿವಿಹಾರ ಸವಿದ ಸಂಸದ ಕಾಗೇರಿ

ಹೊನ್ನಾವರ : ಶರಾವತಿ ನದಿಯಲ್ಲಿ ಪ್ರವಾಸಿದೋಣಿ ಮೂಲಕ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಪ್ರಕೃತಿ ಸೌಂದರ್ಯ ವೀಕ್ಷಿಸಿದರು. ಶರಾವತಿ ನದಿಯಲ್ಲಿ ಸಂಚರಿಸುವಾಗ ಪ್ರಕೃತಿ ಸೌಂದರ್ಯ ಹಾಗೂ ಕಾಂಡ್ಲಾ ವನ, ಪಕ್ಷಿ ಸಂಕುಲಗಳ ಮಾಹಿತಿ ಮತ್ತು ನದಿ ತೀರದ ಜನರ ಸಮಸ್ಯೆಗಳನ್ನು ಆಲಿಸಿದ್ರು.. ಬೋಟಿಂಗ್‌ ಮತ್ತಿತರ ವಿಧಾನದ ಮೂಲಕ ಪ್ರವಾಸೋದ್ಯಮ ಉತ್ತೇಜನಕ್ಕೆ ಇರುವ ಅವಕಾಶವನ್ನು ಚರ್ಚಿಸಿದ್ರು..

ಈ ವೇಳೆ ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ನಾಯ್ಕ, ಮುಖಂಡರಾದ ಗಣಪತಿ ಗೌಡ ಚಿತ್ತಾರ, ಗಣಪತಿ ನಾಯ್ಕ ಬಿಟಿ, ಎಚ್‌ ಆರ್.‌ ಗಣೇಶ, ಬಾಲಕೃಷ್ಣಗೌಡ ಹಾಗೂ ಇತರರು ಉಪಸ್ಥಿತರಿದ್ರು….