ಪಹಲ್ಗಾಮ್‌ನಲ್ಲೇ ಒಮರ್ ಅಬ್ದುಲ್ಲಾ ಸಂಪುಟ ಸಭೆ! ಗಾಲ್ಛ್ ಆಟ ಆಡಿ ಪ್ರವಾಸಿಗರಿಗೆ ಧೈರ್ಯ ತುಂಬಿದ ಕಾಶ್ಮೀರ ಸಿಎಂ

ಪಹಲ್ಗಾಮ್‌​: ಪಾಕಿಸ್ತಾನ ಮೂಲದ ಉಗ್ರರಿಂದ ಪಹಲ್ಗಾಮ್‌ನಲ್ಲಿ ಅಮಾಯಕರ ಹತ್ಯಾಕಾಂಡ ನಡೆದ ನಂತರ ಮೊದಲ ಭಾರಿಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮಹತ್ವದ ಕಾರ್ಯ ನಡೆಸಿದ್ದಾರೆ. ಪಹಲ್ಗಾಮ್‌ನಲ್ಲಿ ಹತ್ಯಾಕಾಂಡ ನಡೆದ ನಂತರ ಪಹಲ್ಗಾಮ್‌ನ ಸುಂದರ ಕಣಿವೆಯ ಸೌಂದರ್ಯ ಸವಿಯಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಓಮರ್​ ಅಬ್ದುಲ್ಲಾ ಅವರು ಪಹಲ್ಗಾಮ್‌ನಲ್ಲಿ ಸಚಿವ ಸಂಪುಟ ಸಭೆ ನಡೆಸುವುದರೊಂದಿಗೆ, ಸ್ಥಳೀಯರ ಆಹವಾಲು ಸ್ವೀಕರಿಸುವುದರೊಂದಿಗೆ ಪಹಲ್ಗಾಮ್‌ ಸುರಕ್ಷಿತವಾಗಿದೆ ಎನ್ನುವ ಮೂಲಕ ಪ್ರವಾಸಿಗರನ್ನು ಪಹಲ್ಗಾಮ್‌ನ ಸೌಂದರ್ಯ ಸವಿಯಲು ಆಹ್ವಾನಿಸಿದ್ದಾರೆ.


ಈ ಕುರಿತು ಮಾತನಾಡಿರುವ ಓಮರ್ ಅಬ್ದುಲ್ಲಾ ಅವರು, “ಇದು ಕೇವಲ ನಿಯಮಿತ ಆಡಳಿತಾತ್ಮಕ ವ್ಯಾಯಾಮವಲ್ಲ, ಬದಲಾಗಿ ಸ್ಪಷ್ಟ ಸಂದೇಶವಾಗಿದ್ದು, ನಾವು ಹೇಡಿತನದ ಭಯೋತ್ಪಾದಕ ಕೃತ್ಯಗಳಿಗೆ ಹೆದರುವುದಿಲ್ಲ” ಜೊತೆಗೆ “ಶಾಂತಿಯ ಶತ್ರುಗಳು ನಮ್ಮ ಸಂಕಲ್ಪವನ್ನು ಎಂದಿಗೂ ನಿರ್ದೇಶಿಸುವುದಿಲ್ಲ. ಜಮ್ಮು ಮತ್ತು ಕಾಶ್ಮೀರ ದೃಢವಾಗಿ, ಬಲವಾಗಿ ಮತ್ತು ನಿರ್ಭಯವಾಗಿ ನಿಂತಿದೆ” ಎಂದು ಹೇಳಿದ್ದಾರೆ.