ಸಿದ್ದಾಪುರ: ಹೊಳೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ತಾಲೂಕಿನ ಬಿಳಗಿಯ ಚಿದಂಬರ ಕೆರಿಯಾ ಗೌಡ ಮನೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಸಾಂತ್ವನ ಹೇಳಿ ಸರ್ಕಾರದ ಪರಿಹಾರದ ಚೆಕ್ ನೀಡಿದರು.
ಬಹಿರ್ದೆಸೆಗೆ ಹೋದಾಗ ಬಿಳಗಿಯ ನೆಲಗುತ್ತಿ ಬೈಲಿನ ಬಳಿ ಹೊಳೆಯಲ್ಲಿ ಕಾಲು ಜಾರಿ ಬಿದ್ದು ಚಿದಂಬರ ಗೌಡ ಸಾವನ್ನಪ್ಪಿದ್ದರು. ಬುಧವಾರ ಚಿದಂಬರ ಗೌಡ ಮನೆಗೆ ಭೇಟಿ ನೀಡಿ ಪತ್ನಿ ಹಾಗೂ ಮಕ್ಕಳಿಗೆ ಸರ್ಕಾರದ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಈ ವೇಳೆ ತಾಲೂಕಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ಉಪ ತಹಶೀಲ್ದಾರ ಎನ್.ಐ.ಗೌಡ, ಸ್ಥಳೀಯರಾದ ಆದರ್ಶ ಪೈ ಮತ್ತಿತರರು ಹಾಜರಿದ್ದರು.