ಶಿವಮೊಗ್ಗ: ಶಿವಮೊಗ್ಗದಲ್ಲಿ 5 ಲಕ್ಷ ಮನೆಗಳ ಮೇಲೆ ಧ್ವಜ ಹಾರಾಟವಾಗಿದೆ. ಸಂಭ್ರಮಾಚರಣೆ ಸಂದರ್ಭದಲ್ಲಿ ಹಲ್ಲೆ ನಡೆಸಿದ್ದಾರೆ. ಇಂತಹ ಮಾನಸಿಕತೆ ಬದಲಾಗಬೇಕುಬೇಕು ಎಂದು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.
ಹಿಂದಿನ ಸರ್ಕಾರಗಳ ಅವಧಿಯಲ್ಲಿ ತಿಂಗಳುಗಳೇ ನಡೆದರೂ ಕ್ರಮ ಆಗುತ್ತಿರಲಿಲ್ಲ. ಪ್ರೇಮಸಿಂಗ್ ಪ್ರಕರಣದಲ್ಲಿ ಒಂದೇ ದಿನದಲ್ಲಿ ನಾಲ್ಕು ಆರೋಪಿಗಳ ಬಂಧನವಾಗಿದೆ. ನೆಟ್ಟಾರು ಹತ್ಯೆ, ಹಿಂದು ಹರ್ಷ ಹತ್ಯೆ ಪ್ರಕರಣಗಳಲ್ಲೂ ತಕ್ಷಣ ಆರೋಪಿಗಳ ಬಂಧನವಾಗಿದೆ. ಈಗ ಎನ್ ಐ ಎ ತನಿಖೆ ನಡೆಯುತ್ತಿದೆ ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಹೇಗಿತ್ತು ಈಗ ಹೇಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹಿಂದೂ ಕಾರ್ಯಕರ್ತರು ದಯಮಾಡಿ ಗಮನಿಸಬೇಕು. ಹಿಂದೆ ಹಿಂದೂ ಕಾರ್ಯಕರ್ತ ಕೊಲೆಯಾದರೆ ಆರು ತಿಂಗಳಾದರೂ ಆರೋಪಿಗಳನ್ನು ಬಂಧನ ಮಾಡುತ್ತಿರಲಿಲ್ಲ. ನಮ್ಮ ಸರ್ಕಾರದಲ್ಲಿ ಒಂದೆರಡು ದಿನಗಳಲ್ಲಿ ಆರೋಪಿಗಳ ಬಂಧನವಾಗಿ ಶಿಕ್ಷೆ ಕೊಡಿಸಲಾಗುತ್ತಿದೆ ಎಂದರು.
ಸಿದ್ದರಾಮಯ್ಯ ವಿರುದ್ದ ಬಿವೈ ರಾಘವೇಂದ್ರ ವಾಗ್ದಾಳಿ
ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಬಿವೈ ರಾಘವೇಂದ್ರ, ಅವರ ಮನಸ್ಥಿತಿ ಬಗ್ಗೆ ನಾನು ಮಾತನಾಡುವುದಿಲ್ಲ. ಸಿದ್ದರಾಮಯ್ಯ ಹೇಳಿಕೆ ಇಂತಹ ಗಲಭೆಗಳಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ರಾಜಕಾರಣ ಬಿಟ್ಟು ನಾಡಿನಲ್ಲಿ ಶಾಂತಿ ನೆಲೆಸಲು ಮುಂದಾಗಬೇಕು ಎಂದು ವಾಗ್ದಾಳಿ ನಡೆಸಿದರು.