ನಗರಾಭಿವೃದ್ಧಿ ಇಲಾಖೆಯ ಸಿಬ್ಬಂದಿಗಳಿಂದಲೂ ಪರ್ಸೇಂಟೇಜ್ ವಸೂಲಿ.? ಗುತ್ತಿಗೆದಾರರ ಸಂಘದಿಂದ ಇಲಾಖೆಗೆ ಪತ್ರ.!

ಬೆಂಗಳೂರು: ರಾಜ್ಯದಲ್ಲಿ 40% ಪರ್ಸೇಂಟೇಜ್ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದ ಗುತ್ತಿಗೆದಾರರ ಸಂಘ ಇದೀಗ ನಗರಾಭಿವೃದ್ಧಿ ಇಲಾಖೆಗೂ ಪತ್ರ ಬರೆದು ಪರ್ಸೆಂಟೇಜ್ ಹಾಗೂ ಸಿಬ್ಬಂದಿಗಳ ವಿರುದ್ಧ ಕಿರುಕುಳದ ಆರೋಪ ಮಾಡಿದೆ.

ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ರಾಜ್ಯ ಗುತ್ತಿಗೆದಾರರ ಸಂಘ ನಗರಾಭಿವೃದ್ಧಿ ಇಲಾಖೆಯ ಸಿಬ್ಬಂದಿಗಳಿಂದ ಗುತ್ತಿಗೆದಾರರಿಗೆ ಶೋಷಣೆ ಆಗುತ್ತಿದೆ. ಟೆಂಡರ್ ಅಪ್ರ್ಯೂವಲ್ ಗೆ ಹೋಗುವ ಪ್ರತಿ ಕಡತಕ್ಕೆ ಸಂಬಂಧಿಸಿದಂತೆ ಕೇಸ್ ವರ್ಕರ್ಸ್ ಗಳಿಂದ ಗುತ್ತಿಗೆದಾರರಿಗೆ ಕರೆ ಮಾಡಲಾಗುತ್ತಿದೆ.

ಕೆಲಸ ಮಾಡಲು ಗುತ್ತಿಗೆದಾರರಿಗೆ ಆಮಿಷ ಒಡ್ಡುತ್ತಿದ್ದು ಕೆಲ ಪ್ರಕರಣಗಳಲ್ಲಿ ನಗರಾಭಿವೃದ್ಧಿ ಇಲಾಖೆ ಸಿಬ್ಬಂದಿ ಗುತ್ತಿಗೆದಾರರಿಗೆ ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬಿಬಿಎಂಪಿಯಿಂದ ಟೆಂಡರ್ ಅನುಮೋದನೆ ನಗರಾಭಿವೃದ್ಧಿ ಇಲಾಖೆಗೆ ಕಡತಗಳು ರವಾನೆಯಾಗುತ್ತವೆ. ಕಡತಗಳನ್ನ ಸಿಎಂ ಕಚೇರಿಗೆ ಕಳುಹಿಸಲು ನಗರಾಭಿವೃದ್ಧಿ ಇಲಾಖೆಯ ಕೇಸ್ ವರ್ಕರ್ಸ್ ಗಳಿಂದ ಪರ್ಸೇಂಟೇಜ್ ವಸೂಲಿ ಮಾಡುತ್ತಿದ್ದು ಲಂಚ ನೀಡದೆ ಹೋದರೆ ಕಡತಗಳನ್ನ ಮೂವ್ ಮಾಡುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಅಲ್ಲದೇ ಗುತ್ತಿಗೆದಾರರಿಗೆ ನೇರವಾಗಿ ಕರೆ ಮಾಡಿ ನಗರಾಭಿವೃದ್ಧಿ ಇಲಾಖೆಯ ಸಿಬ್ಬಂದಿ ಲಂಚ ವಸೂಲಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.