ರಾಮನವಮಿ | 50 ಲಕ್ಷ ಭಕ್ತರಿಂದ ಅಯೋಧ್ಯೆ ಶ್ರೀರಾಮನ ದರ್ಶನ ಸಾಧ್ಯತೆ



ಲಕ್ನೋ
: ರಾಮನವಮಿ (Ram Navami) ಹಿನ್ನೆಲೆ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ (Ram Mandir) ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇಂದು ಒಂದೇ ದಿನ ಐವತ್ತು ಲಕ್ಷ ಭಕ್ತರು ಬಾಲರಾಮನ ದರ್ಶನ ಪಡೆಯುವ ಸಾಧ್ಯತೆಯಿದೆ

ಅಯೋಧ್ಯೆಯಲ್ಲಿ (Ayodhya) ಜನದಟ್ಟಣೆ ಹಿನ್ನೆಲೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕುಂಭಮೇಳದ ಮಾದರಿಯಲ್ಲಿ ಭದ್ರತೆ, ಡ್ರೋನ್ ಕಣ್ಗಾವಲು ಕಲ್ಪಿಸಲಾಗಿದೆ. ರಾಮನವಮಿ ಹಿನ್ನೆಲೆ ಪ್ರಭು ಶ್ರೀರಾಮನಿಗೆ ವಿಶೇಷ ಪೂಜೆ ನಡೆಯಲಿದೆ. 

ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಎಲ್ಲಾ ವಿಶೇಷ ಪಾಸ್‌ಗಳನ್ನು ರದ್ದುಗೊಳಿಸಲಾಗಿದೆ. ದೇವಸ್ಥಾನ, ಸರಯೂ ನದಿ ಸೇರಿ ಎಲ್ಲ ಕಡೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. 

ಮಧ್ಯಾಹ್ನದ ವೇಳೆಗೆ ಬಾಲರಾಮನ ವಿಗ್ರಹದ ಹಣೆ ಮೇಲೆ ಸೂರ್ಯ ರಶ್ಮಿ ಬೀಳಲಿದ್ದು, ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ .ಸಂಜೆ ಸರಯೂ ನದಿ ತೀರದ ರಾಮಕೀ ಪೌಡಯಲ್ಲಿ ಎರಡು ಲಕ್ಷ ಹಣತೆಗಳು ಬೆಳಗಲಿದೆ.