
ನವದೆಹಲಿ, ಮಾರ್ಚ್ 30: ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಮನ್ ಕಿ ಬಾತ್(Mann Ki Baat)ನ 120 ನೇ ಸಂಚಿಕೆಯಲ್ಲಿ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಕನ್ನಡ, ಮರಾಠಿ, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಹೊಸ ವರ್ಷವನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿ ವಿಶಿಷ್ಟ ಹೆಸರುಗಳೊಂದಿಗೆ ಬರಮಾಡಿಕೊಳ್ಳುತ್ತಾರೆ. ಇದನ್ನೇ ವಿವಿಧತೆಯಲ್ಲಿ ಏಕತೆ ಎನ್ನುತ್ತೇವೆ ಎಂದರು.
ಇಷ್ಟು ದಿನ ಮಕ್ಕಳಿಗೆ ಪರೀಕ್ಷೆಗಳ ಬಗ್ಗೆ ಸಲಹೆಗಳನ್ನು ಕೊಡಲಾಗುತ್ತಿತ್ತು, ಈಗ ಪರೀಕ್ಷೆಗಳು ಮುಗಿದಿವೆ ಬೇಸಿಗೆ ರಜೆ ಶುರುವಾಗುತ್ತಿದೆ. ಹೊಸ ಹವ್ಯಾಸವನ್ನು ಅಳವಡಿಸಿಕೊಳ್ಳುವ ಜೊತೆಗೆ ತಮ್ಮ ಕೌಶಲ್ಯಗಳನ್ನು ಮತ್ತಷ್ಟು ಬೆಳೆಸಿಕೊಳ್ಳುವ ಸಮಯ ಇದು. ಇಂದು ಕಲಿಯಲು ಸಾಕಷ್ಟು ವೇದಿಕೆಗಳಿವೆ. ಕೇವಲ ಶಾಲೆಯಲ್ಲಿ ಮಾತ್ರ ಕಲಿಯಬೇಕು ಎಂದೇನಿಲ್ಲ.ಯಾವುದೇ ಸಂಸ್ಥೆ, ಶಾಲೆ, ಸಾಮಾಜಿಕ ಸಂಸ್ಥೆ ಅಥವಾ ಕೇಂದ್ರಗಳು ಬೇಸಿಗೆ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದರೆ ಅದನ್ನು #MYHOLIDAYS ನೊಂದಿಗೆ ಹಂಚಿಕೊಳ್ಳಿ ಎಂದಿದ್ದಾರೆ.