
ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಂಗಳವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಭೂಮಿಗೆ ಮರಳಲಿದ್ದಾರೆ. ಸ್ಪೇಸ್ಎಕ್ಸ್ನ ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಟಿದೆ. ಇಬ್ಬರೂ ಗಗನಯಾತ್ರಿಗಳು ಹಿಂದಿರುಗಿದ ನಂತರ, ಒಂಬತ್ತು ತಿಂಗಳ ಬಾಹ್ಯಾಕಾಶ ಪ್ರಯಾಣವು ಕೊನೆಗೊಳ್ಳುತ್ತದೆ.
ಸುನಿತಾ ವಿಲಿಯಮ್ಸ್, ವಿಲ್ಮೋರ್ ಮತ್ತು ಇತರ ಇಬ್ಬರು ಕ್ರೂ-9 ಸದಸ್ಯರೊಂದಿಗೆ, ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳುತ್ತಿದ್ದಾರೆ. ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಜೂನ್ 5, 2024 ರಂದು ಭೂಮಿಯನ್ನು ಬಿಟ್ಟು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಹೆಜ್ಜೆ ಹಾಕಿದ್ದರು.
ಕೆಲವು ಸಮಯದವರೆಗೆ ಅಲ್ಲಿ ಇರಬೇಕಾಗಿತ್ತು. ಆದರೆ ತಾಂತ್ರಿ ದೋಷದಿಂದಾಗಿ ಅದು ವಿಳಂಬವಾಯಿತು. ನಾಸಾಗೆ ಅವರನ್ನು ಕರೆತರಲು ಸಾಧ್ಯವಾಗಲಿಲ್ಲ. ಆದರೆ ಸ್ಪೇಕ್ಸ್ ಎಕ್ಸ್ ಈ ಕಾರ್ಯವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಬಾಹ್ಯಾಕಾಶದಲ್ಲಿ ದೀರ್ಘಕಾಲ ಕಳೆಯುವ ಗಗನಯಾತ್ರಿಗಳು ತಮ್ಮ ಸ್ನಾಯುಗಳು ಮತ್ತು ಮೂಳೆಗಳನ್ನು ಬಲವಾಗಿಡಲು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಆದರೂ, ಸ್ನಾಯು ಮತ್ತು ಮೂಳೆ ನಷ್ಟ ಸಂಭವಿಸುತ್ತದೆ ಏಕೆಂದರೆ ದೇಹವು ಬಾಹ್ಯಾಕಾಶದಲ್ಲಿ ನಡೆಯಲು, ನಿಲ್ಲಲು ಅಥವಾ ಗುರುತ್ವಾಕರ್ಷಣೆಯ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ.
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕ್ರೂ-9 ಕಾರ್ಯಾಚರಣೆಯ ಭಾಗವಾಗಿದ್ದರು. ಅವರೊಂದಿಗೆ ನಾಸಾದ ನಿಕ್ ಹೇಗ್ ಮತ್ತು ರಷ್ಯಾದ ಅಲೆಕ್ಸಾಂಡರ್ ಗೋರ್ಬುನೋವ್ ಕೂಡ ಐಎಸ್‌ಎಸ್‌ಗೆ ಹೋದರು. ಮೊದಲಿಗೆ, ವಿಲಿಯಮ್ಸ್ ಮತ್ತು ವಿಲ್ಮೋರ್ ಅವರ ಧ್ಯೇಯವು ಕೆಲವು ವಾರಗಳ ಕಾಲ ಉಳಿಯಬೇಕಿತ್ತು. ಆದರೆ ಅವರ ಬೋಯಿಂಗ್ ಸ್ಟಾರ್‌ಲೈನರ್ ಕ್ಯಾಪ್ಸುಲ್ ತಾಂತ್ರಿಕ ದೋಷವನ್ನು ಉಂಟುಮಾಡಿತು.