ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಇನ್ನಿಲ್ಲ

ನವದೆಹಲಿ: ಪ್ರಸಿದ್ಧ ತಬಲಾ ಮಾಂತ್ರಿಕ ಮತ್ತು ಸಂಯೋಜಕ ಜಾಕಿರ್ ಹುಸೇನ್ ಅವರು ಭಾನುವಾರದಂದು 73 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಭಾನುವಾರ ಮುಂಜಾನೆ ಹುಸೇನ್ ಹೃದಯ ಸಂಬಂಧಿ ಸಮಸ್ಯೆಗಳಿಂದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದರು ಎಂದು ಅವರ ಸ್ನೇಹಿತ ರಾಕೇಶ್ ಚೌರಾಸಿಯಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಜಾಕೀರ್ ಹುಸೇನ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಸಂಗೀತ ಲೋಕದಲ್ಲಿ ಅಪಾರ ಹೆಸರು ಮಾಡಿದ ತಬಲ ಮಾಂತ್ರಿಕ. ಇದೀಗ ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್‌ ಅನಾರೋಗ್ಯದ ಕಾರಣ ಇಂದು (ಡಿ.15) ಅಮೆರಿಕದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇದೀಗ ತಬಲಾ ಲೋಕದ ಮಾತ್ರಿಕ ಉಸ್ತಾದ್‌ ಜಾಕೀರ್‌‌ ಹುಸೇನ್ (73) ಕೊನೆಯುಸಿರೆಳೆದಿದ್ದಾರೆ.

ಸಂಗೀತ ಲೋಕದಲ್ಲಿ ಸಾಧನೆ!

ಉಸ್ತಾದ್ ಜಾಕೀರ್ ಹುಸೇನ್ 1951 ರಲ್ಲಿ ಮುಂಬೈನಲ್ಲಿ ಜನಿಸಿದರು. ಇನ್ನು ಇವರನ್ನು ವಿಶ್ವದ ಶ್ರೇಷ್ಠ ತಬಲಾವಾದಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಜಾಕೀರ್‌ ಹುಸೇನ್‌ ಕೊಡುಗೆ ಅಪಾರ. ಅಸಾಧಾರಣ ಪ್ರತಿಭೆಯಿಂದಾಗಿ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಕೊಡಮಾಡುವ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದ ಕೀರ್ತಿ ಇವರಿಗಿದೆ.

ಜಾಕೀರ್ ಹುಸೇನ್ ಅವರಿಗೆ 1999 ರಲ್ಲಿ US ನ್ಯಾಷನಲ್ ಎಂಡೋಮೆಂಟ್ ಫಾರ್ ದಿ ಆರ್ಟ್ಸ್‌ನಿಂದ ನ್ಯಾಷನಲ್ ಹೆರಿಟೇಜ್ ಫೆಲೋಶಿಪ್ ಅವಾರ್ಡ್‌‌ ನೀಡಲಾಯಿತು. ಭಾರತೀಯ ಶಾಸ್ತ್ರೀಯ ಸಂಗೀತದ ಜಾಗತಿಕ ರಾಯಭಾರಿಯಾಗಿಯೂ ಇವರು ಗುರುತಿಸಿಕೊಂಡಿದ್ದರು.