ಹಿತ್ತಲಿನಲ್ಲಿ ಗಾಂಜಾ ಬೆಳೆದ ಟಿಬೇಟಿಯನ್.! ಆರೋಪಿ ಕಂಬಿ ಹಿಂದೆ.!

ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂ.4ರ ಟಿಬೇಟಿಯನ್ ವ್ಯಕ್ತಿಯೋರ್ವ ಮನೆಯ ಹಿತ್ತಲಲ್ಲಿ ಬೆಳೆಸಿದ್ದ 52 ಗಾಂಜಾ ಗಿಡಗಳನ್ನು ಪೊಲೀಸರು ವಶ ಪಡಿಸಿಕೊಂಡ ಘಟನೆ ಸೋಮವಾರ ಜರುಗಿದೆ.

ಕ್ಯಾಂಪ್ ನಂ.4ರ ನಾಮಗೇಲ್ ಚೋಪೇಲ್ ಎಂಬ ಟಿಬೇಟಿಯನ್ ವ್ಯಕ್ತಿ ಆಕ್ರಮವಾಗಿ ತನ್ನ ಮನೆಯ ಹಿಂಬದಿ ಹಿತ್ತಲಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ. ಎರಡರಿಂದ ಆರು ಫೂಟ್ ಎತ್ತರದವರೆಗೆ ಗಿಡಗಳನ್ನು ಬೆಳೆಸಲಾಗಿತ್ತು. 6.9 ಕೆಜಿ ತೂಕದ ತೊಂಬತ್ತು ಸಾವಿರ ರೂ ಮೌಲ್ಯದ ಗಾಂಜಾ ಗಿಡಗಳನ್ನು ವಶ ಪಡಿಸಿಕೊಂಡಿದ್ದು ಗಾಂಜಾ ಬೆಳೆಸಿದ್ದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.

ಎಸ್.ಪಿ. ಸುಮನ್ ಪೇನ್ನೆಕರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ, ಡಿವೈಎಸ್ಪಿ ರವಿ ನಾಯ್ಕ, ಮಾಗ೯ದಶ೯ನದಲ್ಲಿ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ ಮಬನೂರ, ಪಿಎಸ್ಐ ನಿಂಗಪ್ಪ ಜಕ್ಕಣ್ಣವರ, ಪೋಪಶನರಿ ಪಿಎಸ್ಐ ಮಹೇಶ ನಾಳೆ, ಸಿಬ್ಬಂದಿಗಳಾದ ಸೋಮಶೇಖರ ಮೇತ್ರಿ, ಗಣಪತಿ ಹೊಸಳ್ಳಿ, ತಿರುಪತಿ ಚೌಡಣ್ಣವರ, ಅಣ್ಣಪ್ಪ ಬಡಿಗೇರ, ಬಸವರಾಜ ಲಮಾಣಿ, ಸಂಜು ರಾಠೋಡ, ಮಾದೇವ, ಅರುಣ, ಶಂಭು, ನಾಗರಾಜ, ಶಾಲಿನಿ ಕಾಯಾ೯ಚರಣೆಯಲ್ಲಿ ಭಾಗವಹಿಸಿದ್ದರು.