ಸ್ವಾತಂತ್ರ್ಯೋತ್ಸವದ ವೇಳೆ ಸನ್ಮಾನಿತರನ್ನು ಗುರುತಿಸುವಲ್ಲಿ ಭಟ್ಕಳ ತಾಲೂಕಾಡಳಿತ ವಿಫಲ: ಸಾರ್ವಜನಿಕರಿಂದ ಅಸಮಾಧಾನ

ಭಟ್ಕಳ: ನೆರೆಹಾವಳಿ ಸಮಯದಲ್ಲಿ ಶ್ರಮಿಸಿದವರನ್ನು ಗುರುತಿಸಿ ತಾಲೂಕಾ ಆಡಳಿತ  ಸನ್ಮಾನಿಸುವ ವಿಚಾರದಲ್ಲಿ ತಾರತಮ್ಯ ಮಾಡಿದೆ ಎನ್ನುವ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಆ.2 ರಂದು ಸುರಿದ ಭಾರಿ ಮಳೆಗೆ ಭಟ್ಕಳ ತಾಲೂಕು ಅಕ್ಷರಶಃ ನೀರಿನಿಂದ ಜಲಾವೃತಗೊಂಡಿತ್ತು. ಈ ಸಂದರ್ಭದಲ್ಲಿ ಪ್ರಾಣದ ಹಂಗನ್ನು ತೋರಿದು ಹೋರಾಟ ಮಾಡಿದ ಕೆಳ ಮಟ್ಟದ ನೌಕರರನ್ನು ಹಾಗೂ ಮುಟ್ಟಳ್ಳಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿದ ವೇಳೆ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರನ್ನು   ಗುರುತಿಸುವಲ್ಲಿ ತಾಲೂಕಾಡಳಿತ ವಿಫಲವಾಗಿದೆ.

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಟ್ಕಳ ತಾಲೂಕಾ ಆಡಳಿತ ನೆರೆ ಹಾವಳಿಯಲ್ಲಿ ಶ್ರಮಸಿದವರ ಪಟ್ಟಿಯಲ್ಲಿ ಮೇಲ್ದರ್ಜೆಯ ನೌಕರರನ್ನು ಮಾತ್ರ ಸನ್ಮಾನ ಮಾಡಿದೆ. ಇದು ಸಾರ್ವಜನಿಕವಲಯದಲ್ಲಿ ಅಸಾಮಾಧಾನಕ್ಕೆ ಕಾರಣವಾಗಿದೆ.

ಸುರಿದ ರುದ್ರ ಮಳೆಯಲ್ಲಿ ಪೊಲೀಸ್ ಇಲಾಖೆಯ ಅನೇಕ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ಲೆಕ್ಕಿಸದೆ ಪ್ರವಾಹದ ನೀರಿನಲ್ಲಿ ಇಳಿದು ಅನೇಕ ಕುಟುಂಬಗಳನ್ನು ರಕ್ಷಣೆ ಮಾಡುವಲ್ಲಿ ಶ್ರಮ ಪಟ್ಟಿದ್ದಾರೆ. ಅದೇ ರೀತಿ ಮನೆಯ ಮೇಲೆ ಗುಡ್ಡ ಕುಸಿದ ವೇಳೆ ಅನೇಕ ಸಾರ್ವನಿಕರು ಪಾಲ್ಗೊಂಡಿದ್ದರು. ಅದರಲ್ಲಿ ಮುಖ್ಯವಾಗಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಜೆ.ಸಿ.ಬಿ ಚಾಲಕರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಆದರೆ ತಾಲೂಕಾ ಆಡಳಿತ ಮಾತ್ರ ಇದೆಲ್ಲವನ್ನು ಗಮನಿಸದೇ ಮೇಲ್ದರ್ಜೆ ನೌಕರನ್ನು ಗುರುತುಸಿ ಸನ್ಮಾನಿಸಿದೆ.

ಮೇಲ್ದರ್ಜೆ ನೌಕರರನ್ನು ಗುರುತಿಸಿ ಸನ್ಮಾನಿಸಿರುವುದು ತಪ್ಪು ಎಂದಲ್ಲ. ಆ ವೇಳೆಯಲ್ಲಿ ನಿಜವಾಗಿ ಶ್ರಮಿಸಿದವರನ್ನು ಗುರುತಿಸಿ ಸನ್ಮಾನಿಸಿದರೆ ಮುಂದೆ ಇನ್ನಷ್ಟು ಕೆಲಸ ಮಾಡಲು ಸ್ಫೂರ್ತಿಯಾಗಬಹುದು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.