ಕಾರವಾರ(Karwar) : ಗ್ರಾಮಸ್ಥರ ಮತ್ತು ಕಾರ್ಮಿಕರ ಪ್ರತಿಭಟನೆಗೆ ಬಿಣಗಾದಲ್ಲಿರುವ ಆದಿತ್ಯ ಬಿರ್ಲಾ ಗ್ರೂಪ್ಸ್ ನ(Aditya Birla) ಗ್ರಾಸಿಂ ಇಂಡಸ್ಟ್ರೀ (Grasim Industry) ಕಂಪನಿ ಮಣಿದಿದೆ.
ಕಾರ್ಖಾನೆಯನ್ನ ತಾತ್ಕಾಲಿಕವಾಗಿ ಬಂದ್ ಮಾಡಿದೆ. ಶನಿವಾರ ಮಧ್ಯಾಹ್ನ ಕಾರ್ಖಾನೆಯಲ್ಲಿ ಕ್ಲೋರಿನ್ ಸೋರಿಕೆ(Chlorin Leakage) ಉಂಟಾಗಿ 19 ಕಾರ್ಮಿಕರು ಅಸ್ವಸ್ಥರಾಗಿದ್ದರು. ಕಳೆದ 20 ದಿನಗಳ ಹಿಂದೆ ಇಲ್ಲಿ ಬಾಯರ್ನಲ್ಲಿ ಸೋರಿಕೆ ಉಂಟಾಗಿ ಕಾರ್ಮಿಕನೊರ್ವ ಸಾವನ್ನಪ್ಪಿದ್ದ. ಮತ್ತೆ ಇಲ್ಲಿ ಕ್ಲೋರಿನ್ ಸೋರಿಕೆ ಉಂಟಾಗಿರೋದು ಆತಂಕ ಉಂಟು ಮಾಡಿದೆ. ಯಾವುದೇ ನಿರ್ವಹಣೆ ಇಲ್ಲದೇ, ಕೌಶಲ್ಯ(Skilled) ಇಲ್ಲದ ಕಾರ್ಮಿಕರು, ಅಧಿಕಾರಿಗಳನ್ನ ಇಟ್ಟು ಕಂಪನಿ ಜನರ ಜೊತೆ ಚೆಲ್ಲಾಟ ಆಡುತ್ತಿದೆ. ಹೀಗಾಗಿ ಕಂಪನಿ ಬಂದ್ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದು ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಅಧಿಕಾರಿಗಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸ್ಥಳಿಯರಿಗೆ ಯಾವುದೇ ಮಾಹಿತಿ ನೀಡದೇ, ಕಾರ್ಮಿಕರ ಬಗ್ಗೆ ಕಾಳಜಿ ವಹಿಸದ ಕಂಪನಿಯ ನಡೆಗೆ ಸಂಶಯ ವ್ಯಕ್ತವಾಗಿದೆ. ಸಾರ್ವಜನಿಕರಿಗೆ ಪರಿಪೂರ್ಣವಾದ ಮಾಹಿತಿ ನೀಡುವವರೆಗೆ ಪ್ಯಾಕ್ಟರಿ ಬಂದ್ ಮಾಡುವಂತೆ ಸ್ಥಳಿಯರು ಆಗ್ರಹಿಸಿದ್ದರು. ಹೀಗಾಗಿ ಕಂಪನಿ ಬಂದ್ ಮಾಡಲಾಗಿದೆ. ಇನ್ನೂ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಿಂದ ಕಂಪನಿಯ ಸುರಕ್ಷತೆ(Saftey) ದೃಢಿಕರಣಗೊಳ್ಳುವವರೆಗೆ ಆರಂಭ ಮಾಡಬಾರದೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ
ಕಾರವಾರದ ಬಿಣಗಾದಲ್ಲಿರುವ ಆದಿತ್ಯಾ ಬಿರ್ಲಾ ಕಂಪನಿ (Adity Birla Company) ಸುಮಾರು 50 ವರ್ಷಗಳ ಹಿಂದ ಆರಂಭವಾಗಿತ್ತು ಹಿಂದೊಮ್ಮೆ ಸಾವಿರಾರು ಕಾರ್ಮಿಕರನ್ನ ಒಳಗೊಂಡು ನಡೆಯುತ್ತಿರುವ ಕಾರ್ಖಾನೆ ಈಗ ಆದಿತ್ಯ ಬಿರ್ಲಾ ಗ್ರಾಸಿಂ ಇಂಡಸ್ಟ್ರೀ ಲಿಮಿಟಿಡ್ ಹೆಸರಲ್ಲಿ ಕಳೆದ ಕೆಲ ವರ್ಷಗಳಿಂದ ವಿವಿಧ ರಾಸಾಯನಿಕ ಉತ್ಪನ್ನಗಳನ್ನ ತಯಾರು ಮಾಡಲಾಗುತ್ತಿದೆ. ಇನ್ನೂ ಬಿಣಗಾದ ಗ್ರಾಸಿಂ ಇಂಡಸ್ಟ್ರೀಯಲ್ಲಿ ಒಟ್ಟು 120 ಖಾಯಂ ಕಾರ್ಮಿಕರು ಸುಮಾರು ನಾಲ್ಕುನೂರರಷ್ಟು ಗುತ್ತಿಗೆ ಆಧಾರದ ಕಾರ್ಮಿಕರಿದ್ದಾರೆ. ಇಲ್ಲಿ ಕಾರ್ಮಿಕರಿಗಿಂತ ಅಧಿಕಾರಿಗಳ ಸಂಖ್ಯೆ ಜಾಸ್ತಿ ಇದೆ. ಕಾರ್ಖಾನೆಯಲ್ಲಿ ಕಾಸ್ಟಿಕ್ ಸೋಡಾ, ಕ್ಲೋರಿನ್, ಹೈಡೋಕ್ಲೋರಿಕ್ ಆ್ಯಸಿಡ್, ಲಿಕ್ವಿಡ್ ಕ್ಲೋರಿನ್, ಸೋಡಿಯಂ ಹೈಪೋಕ್ಲೋರೈಟ್, ಕಂಪ್ರೆಸ್ಟ್ ಹೈಡೋಜನ್, ಡೈಲುಟ್ ಸಲ್ಪುರಿಕ್ ಆ್ಯಸಿಡ್ ಮತ್ತು ಫಾಸ್ಪರಿಕ್ ಆ್ಯಸಿಡ್ ಉತ್ಪಾದಿಸಲಾಗುತ್ತಿದೆ. ಹೀಗಾಗಿ ಕಂಪನಿಯಲ್ಲಿ ನುರಿತ ಅಧಿಕಾರಿಗಳು ಮತ್ತು ಕಾರ್ಮಿಕರಿಲ್ಲದೇ ಪದೇಪದೇ ಇಲ್ಲಿ ಬಾಯರನಲ್ಲಿ ಅವಘಡ, ಕ್ಲೋರಿನ್ ಸೋರಿಕೆಯಂಥ ಘಟನೆ ನಡೆದು ಸುತ್ತಮುತ್ತಲಿನ ನಾಗರಿಕರು ಭಯಬೀಳುವಂತ ಸ್ಥಿತಿ ನಿರ್ಮಾಣವಾಗುತ್ತದೆ. ಕಡಿಮೆ ಸಂಖ್ಯೆಯ ಕಾರ್ಮಿಕರನ್ನ ಇಡ್ಕೊಂಡು ಕಂಪನಿ ನಡೆಸುತ್ತಿದ್ದಾರೆಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಅನುಭವಿ ಅಧಿಕಾರಿಗಳು ಮತ್ತು ಕಾರ್ಮಿಕರಿಲ್ಲದೇ ಇಲ್ಲಿ ಪದೇಪದೇ ಅವಘಡಗಳು ಸಂಭವಿಸುತ್ತಿದೆ.
ಇಂದಲ್ಲ ನಾಳೆ ಭೂಪಾಲ್ ದುರಂತದಂತ(Bhoopal Incident) ಘಟನೆ ನಡೆಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಸಹ ಕಂಪನಿಯ ಅಧಿಕಾರಿಗಳು ಏನು ಆಗಿಲ್ಲ ಎಂದು ವರ್ತಿಸುತ್ತಿದ್ದಾರೆ. ಕಂಪನಿ ಅಧಿಕಾರಿಗಳ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂಪನಿ ಅಧಿಕಾರಿಗಳು ಮುಂದೆ ಸ್ಥಳೀಯರ ಮತ್ತು ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಯಾವ ರೀತಿಯಾಗಿ ಮುಂಜಾಗೃತೆ ತೆಗೆದುಕೊಂಡು ಕಂಪನಿ ಆರ್ಭಸುತ್ತಾರೆ ನೋಡಬೇಕಾಗಿದೆ.