ಉತ್ತರ ಕನ್ನಡ, ಜುಲೈ 08: ಕುಡಿದ ಮತ್ತಿನಲ್ಲಿ ಸಮುದ್ರಕ್ಕಿಳಿಯಲು ಮುಂದಾದವರಿಗೆ ಲೈಫ್ ಗಾರ್ಡ್ ಹಾಗೂ ಪೊಲೀಸ್ ಸಿಬ್ಬಂದಿಯಿಂದ ಥಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಠಾಗೋರ ಕಡಲ ತೀರದಲ್ಲಿ ನಡೆದಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನೆಲೆ ಯಾರಿಗೂ ಸಮುದ್ರಕ್ಕಿಳಿಯಲು ಕೊಡುತ್ತಿಲ್ಲ. ಆದರೆ, ಬೆಳಂಬೆಳಿಗ್ಗೆ ಕುಡಿದು ಸಮುದ್ರಕ್ಕಿಳಿಯಲು ಇಬ್ಬರು ಇಳಿದರು. ಲೈಫ್ ಗಾರ್ಡ್ ಎಷ್ಟೆ ಕೂಗಿದರೂ ಕೆಳಿಸಿಕೊಳ್ಳಲಿಲ್ಲ. ಸಮುದ್ರಕ್ಕಿಳಿಯಲು ಮುಂದಾದವರನ್ನು ದಡಕ್ಕೆ ಕರೆತಂದು ಲೈಫ್ ಗಾರ್ಡ್ ಹಾಗೂ ಪೊಲೀಸ್ ಸಿಬ್ಬಂದಿ ಥಳಿಸಿ ಬುದ್ದಿ ಹೇಳಿದರು. ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನೆಲೆ ಸಡನ್ ಆಗಿ ಒಳಗೆ ಎಳೆದುಕೊಳ್ಳುವ ಸಾಧ್ಯತೆ ಇದೆ. ಮುಂಜಾಗೃತ ಕ್ರಮವಾಗಿ ಕಡಲ ತೀರದಲ್ಲೂ ಮೀನುಗಾರಿಕೆಗೆ ನಿಷೇಧ ಮಾಡಲಾಗಿದೆ.