ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾ ಆಟಗಾರರಾದ ಡೇವಿಡ್ ವಾರ್ನರ್, ಡೇನಿಯಲ್ ಸ್ಯಾಮ್ಸ್ ಸೇರಿದಂತೆ ಅನೇಕರು ಆಟಗಾರರು ಅನ್ಸೋಲ್ಡ್ ಆಗಿದ್ದರು. ಇದೀಗ ಬಿಕರಿಯಾಗದೇ ಉಳಿದಿರುವ ಆಸ್ಟ್ರೇಲಿಯಾ ಪ್ಲೇಯರ್ಸ್ ಪಾಕಿಸ್ತಾನ್ ಸೂಪರ್ ಲೀಗ್ನತ್ತ ಮುಖ ಮಾಡಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಆಸ್ಟ್ರೇಲಿಯಾದ 13 ಆಟಗಾರರು ಪಿಎಸ್ಎಲ್ಗಾಗಿ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2025) ಅವಕಾಶ ವಂಚಿತರಾಗಿರುವ ಆಸ್ಟ್ರೇಲಿಯಾ ಆಟಗಾರರು ಇದೀಗ ಪಾಕಿಸ್ತಾನ್ ಸೂಪರ್ ಲೀಗ್ನತ್ತ ಮುಖ ಮಾಡಿದ್ದಾರೆ. ಅದರಂತೆ ಇದೀಗ ಜನವರಿ 11 ರಂದು ನಡೆಯಲಿರುವ ಡ್ರಾಫ್ಟ್ ಪ್ರಕ್ರಿಯೆಗಾಗಿ ಆಸ್ಟ್ರೇಲಿಯಾದ 13 ಆಟಗಾರರು ಹೆಸರು ನೀಡಿದ್ದಾರೆ. ಈ ಆಟಗಾರರಲ್ಲಿ ಡೇವಿಡ್ ವಾರ್ನರ್ ಕೂಡ ಇರುವುದು ವಿಶೇಷ.
ಡೇವಿಡ್ ವಾರ್ನರ್ ಕಳೆದ ಸೀಸನ್ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದರು. ಆದರೆ ಈ ಬಾರಿಯ ಮೆಗಾ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ವಾರ್ನರ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ. ಹೀಗಾಗಿ ಇದೀಗ ಪಿಎಸ್ಎಲ್ನಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಇನ್ನು ಡೇವಿಡ್ ವಾರ್ನರ್ ಅಲ್ಲದೆ ಈ ಹಿಂದೆ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದ ಮ್ಯಾಥ್ಯೂ ಶಾರ್ಟ್, ಶಾನ್ ಅಬಾಟ್, ಡೇನಿಯಲ್ ಸ್ಯಾಮ್ಸ್, ಕ್ರಿಸ್ ಲಿನ್, ಮೊಯ್ಸೆನ್ ಹೆನ್ರಿಕ್ಸ್, ರಿಲೆ ಮೆರೆಡಿತ್, ಜೇಸನ್ ಬೆಹ್ರೆನ್ಡಾರ್ಫ್ ಕೂಡ ಪಾಕಿಸ್ತಾನ್ ಸೂಪರ್ ಲೀಗ್ಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಹಾಗೆಯೇ ಐಪಿಎಲ್ ಟೂರ್ನಿಯ ಭಾಗವಾಗಿದ್ದ ಇಂಗ್ಲೆಂಡ್ ಆಟಗಾರರಾದ ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸ್ಯಾಮ್ ಬಿಲ್ಲಿಂಗ್ಸ್, ಜೇಸನ್ ರಾಯ್, ಜೋ ಕ್ಲಾರ್ಕ್, ಟಾಮ್ ಕರನ್, ಟೈಮಲ್ ಮಿಲ್ಸ್, ಅಲೆಕ್ಸ್ ಹೇಲ್ಸ್, ಲಾರಿ ಇವಾನ್ಸ್, ಡೇವಿಡ್ ಮಲಾನ್, ಲ್ಯೂಕ್ ವುಡ್ ಹೆಸರು ಕೂಡ ಪಿಎಸ್ಎಲ್ ಡ್ರಾಫ್ಟ್ ಪಟ್ಟಿಯಲ್ಲಿದೆ.
ಪಿಎಸ್ಎಲ್ಗೆ ಹೆಸರು ನೀಡಿರುವ ಆಸ್ಟ್ರೇಲಿಯನ್ನರು: ಡೇವಿಡ್ ವಾರ್ನರ್, ಕೂಪರ್ ಕೊನೊಲಿ, ಮ್ಯಾಥ್ಯೂ ಶಾರ್ಟ್, ರಿಲೆ ಮೆರೆಡಿತ್, ಶಾನ್ ಅಬಾಟ್, ವಿಲಿಯಂ ಸದರ್ಲ್ಯಾಂಡ್, ಆಶ್ಟನ್ ಸದರ್ಲ್ಯಾಂಡ್ , ಡೇನಿಯಲ್ ಸ್ಯಾಮ್ಸ್, ಜೇಸನ್ ಬೆಹ್ರೆನ್ಡಾರ್ಫ್, ಕ್ರಿಸ್ ಲಿನ್, ಮೊಯ್ಸೆಸ್ ಹೆನ್ರಿಕ್ಸ್, ಆಷ್ಟನ್ ಟರ್ನರ್, ಅಲೆಕ್ಸ್ ಕ್ಯಾರಿ, ಜೋಶ್ ಫಿಲಿಪ್, ಬೆಂಜಮಿನ್ ದ್ವಾರ್ಶುಯಿಸ್, ತನ್ವೀರ್ ಸಂಘ, ಜೇಕ್ ಲೆಹ್ಮನ್.