ಮುರುಡೇಶ್ವರ, ಇಡಗುಂಜಿಗೆ ಪೂಜಾ ಗಾಂಧಿ ಭೇಟಿ

ಭಟ್ಕಳ : ಜಗತ್ತಿನ ಪ್ರಸಿದ್ದ ಧಾರ್ಮಿಕ ಮತ್ತು ಪ್ರವಾಸಿ ತಾಣವಾದ ಮುರ್ಡೇಶ್ವರ ಮತ್ತು ಇಡಗುಂಜಿಗೆ ಸ್ಯಾಂಡಲ್ವುಡ್ ತಾರೆ ಪೂಜಾ ಗಾಂಧಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಮಾಹಿತಿ ಹಂಚಿಕೊಂಡ ಅವರು ಖುಷಿ ಹಂಚಿಕೊಂಡಿದ್ದಾರೆ. ಉತ್ತರಪ್ರದೇಶ ಮೂಲದ ನಟಿ ಪೂಜಾ ಗಾಂಧಿ ಕನ್ನಡ ಕಲಿತು, ಕನ್ನಡದ ಹುಡುಗನನ್ನೇ ವಿವಾಹವಾಗಿ ಪಕ್ಕ ಕನ್ನಡತಿಯಾಗಿದ್ದಾರೆ. ಸದ್ಯ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಕನ್ನಡ ಸಾಹಿತ್ಯದ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ತಮ್ಮ ಸಹೋದರಿ ಹಾಗೂ ಸ್ನೇಹಿತೆಯೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಹಾಗೂ ಇಡಗುಂಜಿ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ತಮ್ಮ ಭೇಟಿಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲ ತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.