ಹೊಸ ವರ್ಷದಂದು ಈ ರಾಶಿಗಳ ಲಕ್​ ಫುಲ್​​ ಚೇಂಜ್!

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಶ್ರವಣಾ, ಯೋಗ: ವ್ಯಾಘಾತ, ಕರಣ:ಬಾಲವ , ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:36 ರಿಂದ 02:01ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 08:23 ರಿಂದ 09:48 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 11:12 ರಿಂದ 12:36 ರವರೆಗೆ.

2025 ಆರಂಭವಾಗುತ್ತಿದೆ. ಹೊಸ ಯೋಚನೆ, ಯೋಜನೆಗಳಿಂದ ಈ ವರ್ಷವನ್ನು ಬಹಳ ಸುಂದರವಾಗಿಸಿ. ಸಂಪತ್ತು ಯಶಸ್ಸು ವಿದ್ಯೆ ಸ್ಥಾನ ಎಲ್ಲವನ್ನೂ ಪಡೆದು ಸುಖದಿಂದ ಜೀವಿಸಿ. ಸಮಸ್ತ ಓದುಗರಿಗೂ ಈ ವರ್ಷ ಶುಭವನ್ನು ತರಲಿ.

ಮೇಷ ರಾಶಿ: ಯಾರನ್ನಾದರೂ ಮಾತಿನಿಂದ ಗೆಲ್ಲುವುದು ಕಷ್ಟವಾದೀತು. ಕಾನೂನಿಗೆ ಯೋಗ್ಯವಾದ ದಾರಿಯಲ್ಲಿ ಸಂಪಾದನೆಯನ್ನು ಆಲೋಚಿಸಿ. ನಿಮ್ಮನ್ನೇ ನೀವು ಪರೀಕ್ಷೆಗೆ ಒಡ್ಡಿಕೊಳ್ಳುವಿರಿ. ದೂರದ ಮಿತ್ರರ ಸಂಪರ್ಕದಿಂದ ಕೆಲವು ಸಮಸ್ಯೆಗಳು ಬಗೆಹರಿಯಬಹುದು. ಮಾಧ್ಯಮದಲ್ಲಿ ಕೆಲಸ ಮಾಡುವವರು ಸ್ವಲ್ಪ ಜಾಗರೂಕತೆಯಿಂದ ವ್ಯವಹರಿಸಿ. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು. ಅತಿಯಾದ ಸುಖದಿಂದ ನಿಮ್ಮ ಕ್ರಿಯಾಶೀಲತೆ ನಿಂತುಹೋಗುವುದು. ದುಷ್ಟಶಕ್ತಿಯ ಬಗ್ಗೆ ನಮಗೆ ಸಂದೇಹ ಬರಬಹುದು. ಉಪಕಾರಕ್ಕೆ ಕೃತಜ್ಞತೆಯಾದರೂ ಇರಲಿ. ವಾಹನ ಖರೀದಿಯಲ್ಲಿ ಗೊಂದಲ ಉಂಟಾಗಬಹುದು. ತಾಯಿಯ ಜೊತೆ ಜಗಳ ಮಾಡಿಕೊಂಡು ಬೇಸರಗೊಳ್ಳುವಿರಿ. ಬಿಡಿಸಲಾಗದ ಸಮಸ್ಯೆಗಳು ನಿಮ್ಮನ್ನು ಇಬ್ಬಂದಿ ಮಾಡಬಹುದು. ಸರ್ಕಾರದಿಂದ ಬರುವ ಸೌಲಭ್ಯವನ್ನು ಪಡೆಯುವ ಕಡೆ ಕೆಲಸ ಮಾಡುವಿರಿ.

ವೃಷಭ ರಾಶಿ: ಕಾಯುವಿಕೆಯಿಂದ ಸಿಟ್ಟಾಗುವ ಸಂಭವವಿದೆ. ನಿಮಗೆ ಆಗದವರಿಂದಲೇ ಸಹಕಾರವನ್ನು ಪಡೆಯಬೇಕಾಗಬಹುದು. ನಿಮ್ಮದಾದ ಕಾರ್ಯಗಳೇ ಬಹಳ ಇರುವಾಗ ಬೇರೆಯ ಕಡೆ ನಿಮ್ಮ ಗಮನ ಹೋಗದು. ಕೋಪವನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ಸತತ ಪ್ರಯತ್ನವು ಫಲಿಸೀತು. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯ. ನಿಮ್ಮಿಂದ ಆಗದ ಕೆಲಸಕ್ಕೆ ಸಮಯವನ್ನು ಕೊಡುವುದು ಬೇಡ. ಸಹೋದರರ ಶೀತಲ ಸಮರವು ತಿಳಿಯಾಗಬಹುದು ವ್ಯಾಪಾರದ ನಿರ್ಲಕ್ಷ್ಯದಿಂದ ಅಲ್ಪ ನಷ್ಟವು ಸಂಭವಿಸಬಹುದು. ಇಂದು ಬಂಧುಗಳ ಮನೆಯಲ್ಲಿ ವಾಸಮಾಡಬೇಕಾಗಬಹುದು. ಉತ್ಸಾಹದ ಭರದಲ್ಲಿ ಏನ್ನಾದರೂ ಮಾಡಿಕೊಂಡೀರ. ದಾಂಪತ್ಯದಲ್ಲಿ ಪರಸ್ಪರ ಅನುರಾಗದ ಕೊರತೆ ಕಾಣಿಸಬಹುದು. ನಿಮ್ಮ ಕ್ಷಮಾಗುಣವು ಇಂದು ನಿಮ್ಮನ್ನು ದೊಡ್ಡವರನ್ನಾಗಿ ಮಾಡುವುದು. ಉದ್ವೇಗಕ್ಕೆ ಒಳಗಾಗದೇ ಇರಲು ನೀವು ಪ್ರಯತ್ನಿಸುವಿರಿ. ಸ್ನೇಹಿತರ ಇಚ್ಛೆಯನ್ನು ಪೂರೈಸಲು ನೀವು ಸಮರ್ಥರಾಗುವಿರಿ. ಸರಿಯಾದ ಹೂಡಿಕೆಯಿಂದ ನಿಮಗೆ ಲಾಭವಾಗುವುದು.

ಮಿಥುನ ರಾಶಿ; ನಿಮ್ಮ ಮುಕ್ತತೆಯು ಇನ್ನೊಬ್ಬರ ಹೊಟ್ಟೆಯನ್ನು ಉರಿಸುವುದು. ಕಾರ್ಯವನ್ನು ನೋಡಿಕೊಂಡು ಬೇರೆಯವರಿಗೆ ಸಮಯವನ್ನು ಕೊಡಿ. ಮನಸ್ತಾಪವನ್ನು ಹೇಗಾದರೂ ಮಾಡಿ ಹೊರಹಾಕಬೇಕು ಎಂದುಕೊಂಡಿರುವಿರಿ. ನಿಮ್ಮ ವಸ್ತುಗಳು ಕಾಣಿಸದೇ ನೀವು ಆತಂಕಪಡುವಿರಿ. ಸಿಕ್ಕ ಅವಕಾಶವನ್ನು ನೀವೇ ಬಿಟ್ಟುಕೊಂಡು ನಿಮ್ಮನ್ನೇ ಹಳಿದುಕೊಳ್ಳುವಿರಿ. ಅನ್ಯರ ಕುರಿತಾಗಿ ಸಂತಾಪವನ್ನು ವ್ಯಕ್ತಪಡಿಸುವುದು ವ್ಯರ್ಥವಾಗಬಹುದು. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು. ವಿದ್ಯಾಭ್ಯಾಸದಲ್ಲಿ ಸಾಮಾನ್ಯ ಪ್ರಗತಿಯನ್ನು ಕಾಣಬಹುದು. ತುರ್ತಾಗಿ ಹಣದ ಹೊಂದಾಣಿಕೆಯು ಕಷ್ಟವಾಗಬಹುದು. ವ್ಯಾವಹಾರಿಕ ವಿಭಾಗದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಮಕ್ಕಳ ಯಶಸ್ಸು ನೀವು ನಿರೀಕ್ಷಿಸಿದಂತೆ ಆಗುವುದು ಕಷ್ಟ. ಕೃಷಿ‌ಗೆ ಚಟುವಟಿಕೆಗಲ್ಲಿ ಆಸಕ್ತಿ ಹೆಚ್ಚಿರುವುದು. ನಿಮಗೆ ಸಂಬಂಧಿಸಿದ ಕಾರ್ಯವನ್ನು ಮಾತ್ರ ಮಾಡಿ. ಬಹಳ ದಿಮಗಳ ಅನಂತರ ನಿಮ್ಮ ಮನಸ್ಸು ಎಲ್ಲಿಲ್ಲದ ಉತ್ಸಾಹದಲ್ಲಿ ಇರುವುದು. ತಂದೆಯಿಂದ ನಿಮಗೆ ಅಲ್ಪ ಧನಸಹಾಯವಾಗಲಿದೆ.

ಕರ್ಕಾಟಕ ರಾಶಿ: ಹೊಸ ಮನೆಯಿಂದ ಕಿರಿಕಿರಿಯಾಗುವ ಸಾಧ್ಯತೆ ಇದೆ. ಮಾತುಗಾರರಿಗೆ ಒಳ್ಳೆಯ ಅವಕಾಶಗಳು ಲಭ್ಯವಾಗುವುದು. ಹಿರಿಯರ ಸಮ್ಮುಖದಲ್ಲಿ ನೂತನ ಗೃಹನಿರ್ಮಾಣವನ್ನು ಮಾಡುವಿರಿ. ಅಧಿಕಾರಿಗಳ ನಡವೆ ಕಲಹವಾಗಬಹುದು. ಉದ್ವೇಗದಿಂದ ಏನನ್ನಾದರೂ ಅನೀತಿ ಮಾರ್ಗದಲ್ಲಿ ಹೋಬೇಕಾದೀತು. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಹಳೆಯ ಸ್ನೇಹವನ್ನು ಮರಳಿ ಪಡೆಯುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ಆರಂಭಿಸಿದ ಕಾರ್ಯವು ಪೂರ್ಣ ಸಫಲವಾಗುವವರೆಗೂ ನೀವು ನಿಲ್ಲಿಸುವುದಿಲ್ಲ. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು. ನೀವು ನಿಮ್ಮ ಪರಿಸ್ಥಿತಿಯನ್ನು ಇತರರಿಗೆ ತಿಳಿಸುವುದು ಕಷ್ಟವಾಗುವುದು. ಸಂತಾನದ ಖುಷಿಯು ಇರಲಿದೆ. ಸಹೋದರರ ಬಗ್ಗೆ ನಿಮ್ಮಲ್ಲಿ ನಕಾರಾತ್ಮಕ ಗುಣಗಳು ಕಾಣಿಸಿಕೊಳ್ಳಬಹುದು. ನೀವು ಕೈಗೊಂಡ ಕಾರ್ಯಗಳು ಸಫಲವಾಗಲಿಲ್ಲ ಎಂಬ ಹತಾಶಭಾವವೂ ಸಿಟ್ಟೂ ಏಕಕಾಲಕ್ಕೆ ಬರಲಿದೆ.

ಸಿಂಹ ರಾಶಿ: ಎಂದೋ ಆದ ಪರಿಚಯದಿಂದ ನಿಮಗೆ ಸಹಾಯವಾಗಲಿದೆ. ಅಪಹಾಸ್ಯಕ್ಕೆ ಆಸ್ಪದ ಕೊಡಲಾರಿರಿ. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು. ಅರಿವಿಲ್ಲದೇ ಎಲ್ಲರೆದುರು ಅಸಭ್ಯ ವರ್ತನೆಯನ್ನು ನೀವು ತೋರಿಸುವಿರಿ. ಹೊಂದಾಣಿಕೆಯಿಂದ ಇರುವುದು ಒಳ್ಳೆಯದು. ಉದ್ಯೋಗದಲ್ಲಿ ನಿರಂತರ ಯಾವುದಾದರೂ ಸಮಸ್ಯೆಯು ಬಾಧಿಸುತ್ತಿದ್ದು ದೈವಜ್ಞರಿಂದ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಾಗಬಹುದು. ನಂಬಿ ಬಂದವರನ್ನು ಬರಿಗೈಯಲ್ಲಿ ಕಳುಹಿಸಲಾರಿರಿ. ಸಂಗಾತಿಯ ಮಾತುಗಳು ನಿಮ್ಮ‌ ಅಭಿಮಾನಕ್ಕೆ ತೊಂದರೆ ಕೊಡಬಹುದು. ನೀವು ಅಪಮಾನವನ್ನೂ ನುಂಗಿಕೊಂಡು ಕಾರ್ಯದಲ್ಲಿ ಮಗ್ನರಾಗುವಿರಿ. ನಿಮ್ಮ ಉದ್ಯಮವನ್ನು ವಿಸ್ತಾರಗೊಳಿಸುವ ಆಲೋಚನೆಯು ಬೇರೆಯವರಿಂದ ಸಿಗಬಹುದು. ನಿಮ್ಮ ಶ್ರೇಯಸ್ಸಿನಲ್ಲಿ ಬಂಧುಗಳ‌ ಪಾತ್ರವು ಇರುವುದು. ಇಂದು ಮನಸ್ಸಿಗೆ ಒಪ್ಪಿಗೆಯಾಗುವ ಕೆಲಸವನ್ನು ಮಾಡಿ. ಕಾಕತಾಳೀಯವನ್ನೇ ನಿಜವೆಂದು ನಂಬುವಿರಿ.

ಕನ್ಯಾ ರಾಶಿ: ಪುಣ್ಯ ಕರ್ಮಗಳು ನಿಮಗೆ ಫಲವನ್ನು ಕೊಡಲಿವೆ. ವಿಶ್ವಾಸವನ್ನು ಗಳಿಸದೇ ನೀವು ವ್ಯವಹಾರದಲ್ಲಿ ಯಶಸ್ಸು ಸಾಧ್ಯವಾಗದು. ವಿದೇಶ ಪ್ರಯಾಣದಿಂದ ಆಯಾಸ ಹೆಚ್ಚು. ಬೆಳಗಿನಿಂದಲೇ ಮನಸ್ಸು ಸರಿ ಇಲ್ಲದ ಕಾರಣ ಎಲ್ಲದಕ್ಕೂ ಸಿಟ್ಟು ಮಾಡುವಿರಿ. ಇಲ್ಲವೇ ಸುಮ್ಮನೆ ಇರುವಿರಿ. ಅಮೂಲ್ಯ ವಸ್ತುಗಳನ್ನು ಪಡೆದುಕೊಳ್ಳುವ ಹಂಬಲವಿರುವುದು. ಮಕ್ಕಳಿಗಾಗಿ ಹಣವನ್ನು ಇಡುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ರೂಢಿಯಾಗಬಹುದು. ಆಲಸ್ಯದಿಂದ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಬೆನ್ನು ನೋವಿಗೆ ಸರಿಯಾದ ಚಿಕಿತ್ಸೆಯನ್ನು ಮಾಡಿಕೊಳ್ಳುವುದು ಉಚಿತ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಬರಲಿದ್ದು ಹಿರಿಯರಿಂದ ಕೇಳಿಪಡೆಯುವಿರಿ. ವೃತ್ತಿಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಕಲಹವಾಗುವ ಕಾರಣ ಸ್ಥಾನವು ಬದಲಾಗಬಹುದು. ಭವಿಷ್ಯದ ಕುರಿತ ನಿಮ್ಮ ಯೋಜನೆಗಳು ಸುರಕ್ಷಿತವೇ ಎಂದು ತಿಳಿಯಿರಿ.

ತುಲಾ ರಾಶಿ: ನಿಮ್ಮ ದ್ವಂದ್ವಗಳಿಗೆ ಕೂಡಲೇ ಪರಿಹಾರ ಸಿಗುತ್ತದೆ. ಆದೇ ಅದನ್ನು ಕಾಣುವ ದೃಷ್ಟಿ ಬೇಕು. ನಿಮ್ಮ ಜಾಣ್ಮೆಯಿಂದ ಭೂಮಿಯ ಕಲಹವನ್ನು ಸರಿ‌ಮಾಡಿಕೊಳ್ಳುವಿರಿ. ಮಿತ್ರನ ಬಗ್ಗೆ ಯಾರಾದರೂ ಸಲ್ಲದ ಮಾತನಾಡಬಹುದು. ಕಾರ್ಯದ ವಿಳಂಬದಿಂದ ಮನೆಗೆ ಬರುವುದು ವಿಳಂಬವಾಗುವುದು. ಲೆಕ್ಕ ಪರಿಶೋಧಕರು ಒತ್ತಡದಲ್ಲಿ ಇರುವರು. ನಾಜೂಕಿನಿಂದ‌ ಇಂದಿನ ಕಾರ್ಯವನ್ನು ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬೇಕಾಗಬಹುದು. ಮನೆಯಿಂದ ದೂರದಲ್ಲಿ ನಿಮ್ಮ ಹೊಸ ಜೀವನವನ್ನು ನಡೆಸಬಹುದು. ಇಂದು ಅಧಿಕ ಮಾತನ್ನು ಆಡುವುದು ಬೇಡ. ಕಲಾವಿದು ಕೆಲವು ಅವಕಾಶದಿಂದ ವಂಚಿತರಾಗಬಹುದು. ಖರ್ಚಿನ ಬಗ್ಗೆ ಅಂದಾಜಿರಲಿ.‌ ನಿಮ್ಮ ಅಭಿರುಚಿಗೆ ಪ್ರೋತ್ಸಾಹವು ಸಿಗಲಿದೆ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ. ಉದ್ಯಮದಲ್ಲಿ ನಿಮಗೆ ಆಗದವರನ್ನು ಕೈ ಬಿಡುವಿರಿ.

ವೃಶ್ಚಿಕ ರಾಶಿ: ಭೂ ವ್ಯವಹಾರದಲ್ಲಿ ಒಬ್ಬರಿಗೂ ಹೊಂದಾಣಿಕೆ ಆಗದೇ ತಪ್ಪು ಹೋಗಬಹುದು. ಸಮಯವನ್ನು ಸುಮ್ಮನೇ ವ್ಯರ್ಥವಾಗಿ ಕಳೆಯುವಿರಿ. ಆಲಸ್ಯದಿಂದ ಏನನ್ನೂ ಮಾಡಲಾಗದು. ಮೇಲಧಿಕಾರಿಗಳ ಮಾತುಗಳಿಂದ ನಿಮಗೆ ಅವಮಾನವಾಗಿದ್ದು ಮುಂದೇನು ಎಂಬುದರ ಬಗ್ಗೆ ನಿಮಗೆ ಚಿಂತೆ ಬರಬಹುದು. ಅಧಿಕ‌ ಲಾಭದ ನಿರೀಕ್ಷೆಯಲ್ಲಿ ಹೊರಟ ನಿಮಗೆ ಅಲ್ಪ ಲಾಭವಾಗಬಹುದು. ಜಾಣ್ಮೆಯಿಂದ ಸರ್ಕಾರದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಮ್ಮಲ್ಲಿ ವಿದ್ಯೆ ಇರುವ ಕಾರಣ ಯಾವ ಸಂದರ್ಭಕ್ಕೂ ಹೆದರುವುದಿಲ್ಲ. ನಿಮ್ಮನ್ನು ಅತಿಥಿಗಳಾಗಿ ಆಹ್ವಾನಿಸಬಹುದು. ನಿಮ್ಮ ಪ್ರೇಮ‌ಸಂಬಂಧವು ಸಡಿಲಾಗಬಹುದು. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು. ದಾಂಪತ್ಯದಲ್ಲಿ ಉಂಟಾದ ಕಲಹವು ಮಕ್ಕಳ‌ ಮೇಲೆ ಪ್ರಭಾವವನ್ನು ಬೀರುವುದು.

ಧನು ರಾಶಿ: ಯಾವ ಗಾಯವೇ ಆದರೂ ಆರಲು ದಿನ ಬೇಕು. ಅದನ್ನು ಕೆರಳಿಸಲು ಹೋಗುವುದು ಬೇಡ. ಯಾರ ಜೊತೆ ಸ್ಪರ್ಧಿಸಲೂ ನೀವು ತಯಾರಿರುವಿರಿ. ಎಲ್ಲರ ಪ್ರಶ್ನೆಗಳಿಗೂ ಉತ್ತರವನ್ನೇ ಕೊಡಬೇಕೆಂದಿಲ್ಲ.‌ ಕಾರ್ಯವನ್ನೂ ಮಾಡಿ ತೋರಿಸಲೂಬಹುದು. ಗಂಭೀರವಾದ ಸಣ್ಣ ವಿಚಾರವೂ ಮುಂದೆ ದೊಡ್ಡದಾಗಬಹುದು. ನಿಂತಲ್ಲಿ ನಿಲ್ಲುವುದು ಕಷ್ಟವಾಗಿ ಸುಮ್ಮನೇ ಅಡ್ಡಾಡುವಿರಿ. ಸಂಗಾತಿಯ ವಿರುದ್ಧ ಸಿಟ್ಟಾಗಬಹುದು. ಮಹಿಳೆಯರಿಗೆ ನಿಮ್ಮಿಂದ ಹೆಚ್ಚಿನ ಸಹಕಾರವು ಸಿಕ್ಕಬಹುದು. ಉನ್ನತ ಅಧಿಕಾರದ ಆಸೆಯನ್ನು ಸಹೋದ್ಯೋಗಿಗಳು ನಿಮಗೆ ತಿಳಿಸಬಹುದು. ಅನಪೇಕ್ಷಿತ ಮಾತುಗಳಿಂದ ನಿಮ್ಮ ಸಮಯವು ವ್ಯರ್ಥವಾಗುವುದು. ವಿವಾಹಕ್ಕೆ ಅಪರಿಚಿತರಿಂದ ತಡೆ ಬರಬಹುದು. ನಿಮ್ಮ ಕನಸುಗಳಿಗೆ ನೀರೆರೆಯುವ ಅವಶ್ಯಕತೆ ಇದೆ. ನಿಮ್ಮ ಉದ್ದೆಶವು ದಾರಿ ತಪ್ಪುವ ಸಾಧ್ಯತೆ ಇದೆ. ಖುಷಿಪಡುವ ಸಂಗತಿಗಳಿದ್ದರೂ ದುಃಖಿಗಳಾಗುವ ಸಾಧ್ಯತೆ ಇದೆ.

ಮಕರ ರಾಶಿ: ಪ್ರಯತ್ನಿಸಿದ ಕಾರ್ಯದಲ್ಲಿ ನಿಮಗೆ ಸಮಾಧಾನ ಇರುವುದು. ಅವಕಾಶಗಳನ್ನು ನೀವು ಪರೀಕ್ಷಿಸಿ ಒಪ್ಪಿಕೊಳ್ಳುವಿರಿ. ಹೊಸ ಮನೆಯ ಖರೀದಿಗೆ ಆಪ್ತರಿಂದ ಹಣವನ್ನು ಪಡೆಯಬೇಕಾಗಬಹುದು. ಹಿತಶತ್ರುಗಳು ನಿಮ್ಮ ಅವನತಿಯನ್ನು ನಿರೀಕ್ಷಿಸಬಹುದು. ಮಾತನ್ನು ಸರಿಯಾಗಿ, ಸರಿಯಾದ ಸ್ಥಳದಲ್ಲಿ ಆಡಿ. ಊಹಿಸದ ಕೆಲವು ಸಂದರ್ಭಗಳು ಇಂದು ಬರಬಹುದು. ಗಣ್ಯರ ಭೇಟಿಯನ್ನು ಮಾಡುವಿರಿ. ಉದ್ಯೋಗಕ್ಕೆ ಸಂಬಂಧಿಸಿದ ಕಾನೂನಿನ ವಿಚಾರವನ್ನು ತಿಳಿದುಕೊಳ್ಳಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಭವಿಷ್ಯವನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಂಡು ಮುಂದುವರಿಯಿರಿ. ಇಂದು ನಿಮ್ಮ ರೂಪಕ್ಕೆ ಆಕರ್ಷಣೆ ಇರಲಿದೆ. ಎಲ್ಲರೂ ಪ್ರಶಂಸಿಸಬಹುದು. ವಾಹನದಲ್ಲಿ ಓಡಾಟವನ್ನು ನೀವು ನಿಲ್ಲಿಸಬೇಕಾಗಬಹುದು. ಬೇರೆಯವರ ತಪ್ಪಿನಿಂದ ನಿಮಗೆ ತೊಂದರೆಗಳು ಆಗಬಹುದು. ನೀವಾಗಿಯೇ ಕಾರ್ಯಗಳನ್ನು ಮೈಮೇಲೆ ತಂದುಕೊಳ್ಳುವಿರಿ.

ಕುಂಭ ರಾಶಿ: ಉದ್ಯೋಗಕ್ಕಾಗಿ ದೂರ ತೆರಳುವುದು ನಿಮ್ಮವರಿಗೆ ಇಷ್ಟವಾಗದು. ಬಹಳ ಕೆಲಸಗಳಿದ್ದರೂ ಎಲ್ಲವನ್ನೂ ನೀವು ಮರೆತಿರುವಿರಿ. ವಿದ್ಯೆಯು ಬೇಕಾದ ಸಮಯಕ್ಕೆ ಕೆಲಸಕ್ಕೆ ಬಾರದೇಹೋಗಬಹುದು. ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸಬಹುದು. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ನಿಮ್ಮ ಸ್ಥಿತಿಯನ್ನು ಕೆಲವರು ಆಡಿಕೊಂಡಾರು. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ದೇವತಾಕಾರ್ಯದಲ್ಲಿ ಆಸಕ್ತಿ ಕಡಿಮೆ ಇರುವುದು. ಆರ್ಥಿಕತೆಯ ಬಗ್ಗೆ ನಿಮ್ಮನ್ನು ಬಂಧುಗಳು ಪ್ರಶ್ನಿಸಬಹುದು. ನಿಮ್ಮ ನಮಗೆ ಗೊತ್ತಿರಲಿ. ಕುರುಡನಂತೆ ಹೋಗುವುದು ಬೇಡ. ಸ್ನೇಹಿತರ ಬೆಂಬಲವನ್ನು ನೀವು ನಿರಾಕರಿಸಬಹುದು. ತಾಯಿಯಿಂದ ನಿಮಗೆ ಏನಾದರೂ ಉಡುಗೊರೆಯಾಗಿ ಸಿಗಬಹುದು. ನಿಮ್ಮನ್ನು ಯಾರಾದರೂ ಗುಪ್ತವಾಗಿ ಗಮನಿಸಬಹುದು.

ಮೀನ ರಾಶಿ: ಇಂದು ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವದಿಂದ ಕಾಣುವುದು ಬೇಡ. ಮಾಧ್ಯಮದಲ್ಲಿ ಇರುವವರು ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಬೇಕಾದೀತು. ವೇಗದ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ಉದ್ಯೋಗದಲ್ಲಿ ಬರುವ ಮನಸ್ತಾಪವನ್ನು ನಿಮ್ಮೊಳಗೇ ಇಟ್ಟುಕೊಂಡು ಮುಂದುವರಿಯುವಿರಿ. ಅನಾಯಾಸವಾಗಿ ಸಿಕ್ಕ ಅವಕಾಶದಿಂದ ಗೊಂದಲ ಬರಬಹುದು. ಯಾರ ಪ್ರಭಾವವನ್ನೂ ನೀವು ಉಪಯೋಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ನಿಮ್ಮ ಕಾರ್ಯದ ಮೇಲೆ ಕಾರಣಾಂತರಗಳಿಂದ ಗಮನವು ಕಡಿಮೆ ಆಗಬಹುದು. ನಿಮ್ಮ ವಿರುದ್ಧದ ಮಾತುಗಳಿಗೆ ನೀವು ಸಿಟ್ಟಾಗುವಿರಿ. ನಿಮ್ಮ ಉತ್ಸಾಹದಲ್ಲಿ ಮಿತಿ ಮೀರುವುದು ಬೇಡ. ಕಳೆದುಕೊಂಡಿದ್ದನ್ನು ಪುನಃ ಪಡೆದುಕೊಳ್ಳಲು ಸಮಯ ಬೇಕಾಗುವುದು. ಆದಷ್ಟು ಬೇರೆ ಚಟುವಟಿಕೆಗಳ ಮೂಲಕ ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ. ಅಪರಿಚಿತವಾದ ಸ್ಥಳವೂ ನಿಮಗೆ ಬಹಳ ಆಪ್ತ ಎನಿಸುವುದು.