BBK 11: ‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆ ಯಾವಾಗ?- ಇಲ್ಲಿದೆ ಅಪ್‌ಡೇಟ್

ನ್ನಡದ ‘ಬಿಗ್ ಬಾಸ್ ಸೀಸನ್ 11’ರ ಆಟ 93ನೇ ದಿನಕ್ಕೆ ಕಾಲಿಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್’ ಆಟಕ್ಕೆ ತೆರೆ ಬೀಳಲಿದೆ. ಹಾಗಾದ್ರೆ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಯಾವಾಗ? ಎಂಬ ಪ್ರೇಕ್ಷಕರ ಕಾತರಕ್ಕೆ ಇಲ್ಲಿದೆ ಉತ್ತರ.

ಬಿಗ್ ಬಾಸ್‌ಗೆ 17 ಮಂದಿ ಸ್ಪರ್ಧಿಗಳು ಕಾಲಿಟ್ಟಿದ್ದರು. ಪ್ರತಿ ವಾರ ಒಬ್ಬೊಬ್ಬ ಸ್ಪರ್ಧಿಗಳು ದೊಡ್ಮನೆ ಆಟದಿಂದ ಎಲಿಮಿನೇಟ್ ಆಗಲಿದ್ದಾರೆ. ಕಳೆದ ವಾರಾಂತ್ಯ ಐಶ್ವರ್ಯಾ ಶಿಂಧೋಗಿ ಔಟ್ ಆದರು. ಈಗ ಮನೆಯಲ್ಲಿ 9 ಸ್ಪರ್ಧಿಗಳಿದ್ದಾರೆ. ಮೋಕ್ಷಿತಾ ಪೈ, ತ್ರಿವಿಕ್ರಮ್, ಭವ್ಯಾ ಗೌಡ, ಉಗ್ರಂ ಮಂಜು, ಧನರಾಜ್, ರಜತ್, ಗೌತಮಿ, ಹನುಮಂತ, ಚೈತ್ರಾ ಕುಂದಾಪುರ ದೊಡ್ಮನೆಯಲ್ಲಿದ್ದಾರೆ.

9 ಸ್ಪರ್ಧಿಗಳ ನಡುವೆ ಉಳಿವಿಗಾಗಿ ಫೈಟ್ ನಡೆಯುತ್ತಿದೆ. ಹೀಗಿರುವಾಗ ಇನ್ನೂ 2 ವಾರಗಳ ಕಾಲ ಬಿಗ್ ಬಾಸ್ ಆಟ ಮುಂದುವರೆಯಲಿದೆ ಎನ್ನಲಾಗಿದೆ. 11ರ ಸೀಸನ್ ‘ಬಿಗ್ ಬಾಸ್’ ಹೊಸ ಅದ್ಯಾಯದೊಂದಿಗೆ ಶುರು ಆಗಿತ್ತು. ಈ ಬಾರಿ ಟಿರ್‌ಆರ್‌ಪಿ ವಿಚಾರದಲ್ಲೂ ‘ಬಿಗ್ ಬಾಸ್’ ಅಗ್ರ ಸ್ಥಾನದಲ್ಲಿದೆ. ಹಾಗಾಗಿ 125 ದಿನಗಳ ಕಾಲ ಶೋ ನಡೆಸಬೇಕು ಎಂಬ ಪ್ಲ್ಯಾನ್‌ನಲ್ಲಿದೆ ಬಿಗ್‌ ಬಾಸ್‌ ಟೀಮ್‌ ಎಂದು ಹೇಳಲಾಗುತ್ತಿದೆ. ಒಂದು ವೇಳೆ, ಇದು ನಿಜವೇ ಆಗಿದ್ದಲ್ಲಿ ಬಿಗ್ ಬಾಸ್ ನೋಡುವ ಪ್ರೇಕ್ಷಕರಿಗೆ ಖುಷಿ ಆಗೋದು ಗ್ಯಾರಂಟಿ.

ಇನ್ನೂ ಈ ಹಿಂದೆ ಶೋಗೆ ಉತ್ತಮ ರೆಸ್ಪಾನ್ಸ್‌ ಬಂದ ಹಿನ್ನೆಲೆ 100ಕ್ಕೂ ಹೆಚ್ಚು ದಿನ ಬಿಗ್‌ ಬಾಸ್‌ ಆಟವನ್ನು ಮುಂದುವರೆಸಿದ್ದು ಇದೆ. ಹಾಗಾಗಿ ತಂಡದ ಕಡೆಯಿಂದ ಅಧಿಕೃತ ಅಪ್‌ಡೇಟ್‌ ಸಿಗುವವರೆಗೂ ಕಾಯಬೇಕಿದೆ.

ಇನ್ನೂ ಕಳೆದ 11 ಸೀಸನ್ ಬಿಗ್ ಬಾಸ್ ಅನ್ನು ನಿರೂಪಣೆ ಮಾಡಿರುವ ಸುದೀಪ್ (Sudeep) ಅವರು ಮುಂದಿನ ಸೀಸನ್ ನಿರೂಪಣೆ ಮಾಡಲ್ಲ ಎಂದು ಅಧಿಕೃತವಾಗಿ ಹೇಳಿರೋದು ಫ್ಯಾನ್ಸ್‌ಗೆ ಬೇಸರ ಮೂಡಿಸಿದೆ. ಈ ನಿರ್ಧಾರವನ್ನು ಬದಲಿಸಿ ಗುಡ್ ನ್ಯೂಸ್ ಕೊಡುತ್ತಾರಾ? ಎಂದು ಸುದೀಪ್ ಫ್ಯಾನ್ಸ್ ಕಾಯುತ್ತಿದ್ದಾರೆ.