ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಶುಭ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 51 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 05 ನಿಮಿಷಕ್ಕೆ, ರಾಹು ಕಾಲ ಸಂಜೆ 04:41 ರಿಂದ 08:05ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:28 ರಿಂದ 01:52 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 03:17 ರಿಂದ 04:41 ರವರೆಗೆ.
ಮೇಷ: ಸಾಮಾಜಿಕ ಸ್ಥಾನಮಾನ ಹೆಚ್ಚಾಗುತ್ತದೆ, ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬಬೇಡಿ, ಸಹೋದರಿಯ ಜೀವನದಲ್ಲಿ ಏರುಪೇರು.
ವೃಷಭ: ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ, ಛಾಯಾಗ್ರಹಕರಿಗೆ ಶುಭ, ಕುಟುಂಬದವರೊಂದಿಗೆ ಕಾಲಹರಣ.
ಮಿಥುನ: ವಾಸಸ್ಥಳ ಬದಲಾವಣೆಯಿಂದ ಮಾನಸಿಕ ಕಿರಿಕಿರಿ, ವಿವಾಹ ಪ್ರಯತ್ನದಲ್ಲಿ ಯಶಸ್ಸು, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕರ್ಕಾಟಕ: ಯಂತ್ರೋಪಕರಣ ವ್ಯಾಪಾರಿಗಳಿಗೆ ಶುಭ, ದೂರದಲ್ಲಿರುವ ಹಿತೈಷಿಗಳಿಂದ ಸಹಾಯ, ಮನೆಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಉಂಟಾದೀತು.
ಸಿಂಹ: ಆಸ್ತಿ ವಿವಾದ ಬಗೆಹರಿಯುತ್ತದೆ, ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ, ಕಣ್ಣಿನ ತೊಂದರೆ ಉಂಟಾಗಬಹುದು.
ಕನ್ಯಾ: ಕಲಾವಿದರಿಗೆ ಹೆಚ್ಚಿನ ಬೇಡಿಕೆ, ಸಂಗಾತಿಯೊಂದಿಗೆ ದೂರ ಪ್ರಯಾಣ ಸಾಧ್ಯತೆ, ಮನೆಗೆ ಅತಿಥಿಗಳ ಆಗಮನ.
ತುಲಾ: ಮಕ್ಕಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ, ನಿರ್ಮಾಪಕರಿಗೆ ಹಣದ ಮುಗ್ಗಟ್ಟು, ಆಪ್ತರ ಸಲಹೆಯಿಂದ ಆತ್ಮವಿಶ್ವಾಸ ವೃದ್ಧಿ.
ವೃಶ್ಚಿಕ: ಸಹನೆಯಿಂದ ಸಕಲ ಕಾರ್ಯ ಸಾಧ್ಯ, ಜನಸೇವಾ ಕಾರ್ಯಗಳಲ್ಲಿ ಆಸಕ್ತಿ, ವ್ಯವಹಾರದಲ್ಲಿ ನಷ್ಟ ಸಾಧ್ಯತೆ.
ಧನಸ್ಸು: ಸಂಸಾರದಲ್ಲಿ ಹೊಂದಾಣಿಕೆಯಿಂದ ಒಳಿತು, ನಿರ್ಧಾರಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ, ಕುಶಲಕರ್ಮಿಗಳಿಗೆ ಉದ್ಯೋಗ ಸಿಗಲಿದೆ.
ಮಕರ: ಮಾತು ತೂಕ ತಪ್ಪದಿರಲಿ, ಸಣ್ಣ ಉದ್ಯಮಿಗಳ ಆದಾಯ ಹೆಚ್ಚಳ, ನೆರೆಯವರೊಡನೆ ಒಳ್ಳೆಯ ಸಂಬಂಧ.
ಕುಂಭ: ಕಿರಿಯರಿಗೆ ಮಾರ್ಗದರ್ಶನ, ನಾಟ್ಯ ಕಲಾವಿದರಿಗೆ ವಿಶೇಷ ಬೇಡಿಕೆ, ಕೋರ್ಟ್ ಕೇಸಿನಲ್ಲಿ ಅಪಜಯ.
ಮೀನ: ವಿದೇಶದಲ್ಲಿ ನೆಲೆಸಲು ಯೋಜನೆ, ಭೂವ್ಯವಹಾರದಿಂದ ಉತ್ತಮ ಲಾಭ, ಪ್ರೀತಿಸಿದವರಿಂದ ದೂರವಾಗಬಹುದು.