Daily Horoscope 08 December 2024 ದಿನ ಭವಿಷ್ಯ 08-12-2024

ಪಂಚಾಂಗ
ಸಂವತ್ಸರ: ಕ್ರೋಧಿನಾಮ
ಋತು: ಹೇಮಂತ, ಅಯನ: ದಕ್ಷಿಣಾಯನ
ಮಾಸ: ಮಾರ್ಗಶಿರ, ಪಕ್ಷ: ಶುಕ್ಲ
ತಿಥಿ: ಸಪ್ತಮಿ, ನಕ್ಷತ್ರ: ಶತಭಿಷಾ

ರಾಹುಕಾಲ: 04:27 – 05:53
ಗುಳಿಕಕಾಲ: 03:02 – 04:27
ಯಮಗಂಡಕಾಲ: 12:11 – 01:37

ಮೇಷ ರಾಶಿ: ಇಂದು ನಿಮ್ಮ ಬಹುದಿನದ ಹುಡುಕಾಟಕ್ಕೆ ವಿರಾಮ ಸಿಗುವುದು. ಉದ್ವೇಗದಿಂದ ಅನರ್ಥವು ನಡೆಯುವ ಸಾಧ್ಯತೆ ಇದೆ. ಆರ್ಥಿಕ ಉಳಿತಾಯವನ್ನು ಅನ್ಯರಿಂದ ಕೇಳಿ ಪಡೆಯುವುದು ಉಚಿತ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ. ನಿಮ್ಮ ವಿವಾಹವು ಮುಂದೆ ಮುಂದೆ ಹೋಗುವುದಕ್ಕೆ ಕಾರಣವನ್ನು ದೈವಜ್ಞರಿಂದ ಪಡೆಯಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುವರು. ‌ಶಾಂತ ವಾತಾವರಣವನ್ನು ಓದಿಗಾಗಿ ಹುಡುಕುವಿರಿ. ನೀವು ಆಡಿದ ಮಾತೇ ನಿಮಗೆ ಬೇರೆಯವರ ಮೂಲಕ ಬರಲಿದೆ. ಹಳೆಯ ವಾಹನದ ಮಾರಾಟದಿಂದ ನಿಮಗೆ ಆರ್ಥಿಕ ಲಾಭವು ಆಗುವುದು. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿ ಇರುವುದು. ನಾಯಕರಿಗೆ ಕೆಲವು ತೊಂದರೆಗಳು ಬರಬಹುದು. ನಿಮಗೆ ಕಾರ್ಯದ ಒತ್ತಡ ನಡುವೆಯೂ ನಿಮ್ಮವರಿಗೆ ಸ್ವಲ್ಪ ಸಮಯ ಕೊಡುವಿರಿ. ಹಳೆಯ ವಸ್ತುಗಳನ್ನು ಹೊಸದಾಗಿ ಮಾಡಿಕೊಂಡು ಉಪಯೋಗಿಸುವಿರಿ.

ವೃಷಭ ರಾಶಿ: ಇಂದು ಕೆಲಸಕ್ಕೆ ಬೇಕಾದ ಸುಲಭೋಪಾಯವು ಸಿಗಲಿದೆ. ನಿಮ್ಮದಲ್ಲದ ತಪ್ಪಿಗೂ ನೀವು ಕ್ಷಮೆಯನ್ನು ಕೇಳಬೇಕಾಗುವುದು. ಕುಟುಂಬದ ಸದಸ್ಯರ ಜೊತೆ ಮಾತನಾಡುವಾಗ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಉಳಿದ ಸಾಲವನ್ನು ತೀರಿಸುವಿರಿ. ಬೆನ್ನು ನೋವು ಅಧಿಕವಾಗಬಹುದು. ಸಹೋದರರ ಅಸಹಕಾರವು ನಿಮಗೆ ಹಿಂಸೆಯನ್ನು ಕೊಡುವುದು. ಅತಿಯಾದ ಅನಾರೋಗ್ಯದಿಂದ ವೈದ್ಯರ ಸಲಹೆಯನ್ನು ಪಡೆಯಿರಿ. ಸಕಾರಾತ್ಮ ಆಲೋಚನೆಗಳಿಂದ ನೀವು ಸಂತೋಷವಾಗಿ ಇರುವಿರಿ. ಇನ್ನೊಬ್ಬರ ಅನವಶ್ಯಕ ವಿಚಾರಕ್ಕೆ ನೀವು ತಲೆ ಹಾಕಬೇಡಿ. ತಂದೆಯಿಂದ ತಪ್ಪಿನ ಕೆಲಸಕ್ಕೆ ಬೈಗುಳ ಸಿಕ್ಕೀತು. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವ ಕೊಡುವಿರಿ. ಆಸ್ತಿಯ ಸಂರಕ್ಷಣೆಗೆ ಕಷ್ಡವಾದೀತು. ಮಂದಗತಿಯಲ್ಲಿ ಇರುವ ಆರ್ಥಿಕತೆಯನ್ನು ಬಲಗೊಳಿಸುವ ಪ್ರಯತ್ನವು ನಡೆಯುವುದು. ನಿಯಮಿತ ಸಮಯವನ್ನು ನೀವು ಸರಿಯಾಗಿ ಬಳಸಿಕೊಳ್ಳಿ.

ಮಿಥುನ ರಾಶಿ: ಸಮಯವನ್ನು ನೋಡಿ ವ್ಯವಹರಿಸಿ. ನಿಮ್ಮ ಪ್ರಧಾನಕಾರ್ಯಕ್ಕಿಂತ ಅಪ್ರಧಾನದಿಂದ ಆದಾಯವು ಅಧಿಕವಾಗಿ ಸಿಗುವುದು. ನಿಮ್ಮ ಪ್ರಭಾವವು ಎಲ್ಲರಿಗೂ ತಿಳಿಯಬಹುದು. ಸಮತೋಲಿತ ದಿನಚರಿಯನ್ನು ಅನುಸರಿಸಿ. ನಿಮ್ಮ ಶತ್ರುಗಳಿಂದ ಸೃಷ್ಟಿಯಾಗುವ ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಧಿಕಾರಿಗಳ ಜೊತೆ ವ್ಯವಹರಿಸುವಾಗ ನೀವು ಜಾಗರೂಕರಾಗಿರಬೇಕು ಮತ್ತು ಅವರನ್ನು ವಿರೋಧಿಸುವುದನ್ನು ತಪ್ಪಿಸಬೇಕು. ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಬಹುದು, ಹೀಗಾಗಿ ಅದರ ಬಗ್ಗೆ ಗಮನಕೊಡಿ. ನಿಮ್ಮ ಪ್ರಭಾವವು ಎಲ್ಲರಿಗೂ ತಿಳಿಯಬಹುದು. ಸರ್ಕಾರಿ ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ತಂದೆಯ ಸೇವೆಯನ್ನು ಮಾಡುವ ಮನಸ್ಸು ಆಗಲಿದೆ. ಬೇರೆಯವರ ಮಾತನ್ನು ಪೂರ್ಣವಾಗಿ ನಂಬಲು ನಿಮಗೆ ಆಗದು. ನೀವು ಇಂದು ಇನ್ನೊಬ್ಬರು ಹೇಳುವ ತನಕ ಕಾರ್ಯವನ್ನು ಮಾಡಲು ಕಾಯುವುದು ಬೇಡ‌.

ಕರ್ಕಾಟಕ ರಾಶಿ: ಸ್ವಂತ ವಾಹನದಲ್ಲಿ ಪ್ರಯಾಣವನ್ನು ಸಂತೋಷದಿಂದ ಮಾಡುವಿರಿ. ನಿಮ್ಮ ಮಿತಿಯಲ್ಲಿ ಬಯಕೆಯು ಇರಲಿ. ವೃತ್ತಿಯಲ್ಲಿ ಮೇಲೇರಿದ ಅನುಭವ ಆಗಬಹುದು.‌ ಮನೆಯಲ್ಲಿಯೇ ಇದ್ದು ನಿರುಮ್ಮಳವಾಗಿ ಇರುಲಿರುವಿರಿ. ಆಸ್ತಿ ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ತಮ್ಮ ಮೇಲಧಿಕಾರಿಗಳ ಜೊತೆ ದಕ್ಷತೆಯಿಂದ ವ್ಯವಹರಿಸುವ ಜನರಿಗೆ ಉದ್ಯೋಗದಲ್ಲಿ ಬೆಳೆಯುವ ಅವಕಾಶಗಳು ಸಿಗಲಿವೆ. ಪ್ರಮುಖ ವ್ಯಕ್ತಿಗಳಿಗೆ ಕಿರಿಕಿರಿ ಮಾಡಬೇಡಿ. ಮನೆಯಲ್ಲಿಯೇ ಇದ್ದು ನೆಮ್ಮದಿ ಕಾಣುವಿರಿ. ಸಮಸ್ಯೆಗಳನ್ನು ನೀವು ಹಂಚಿಕೊಳ್ಳಲು ಹಿಂಜರಿಯುವಿರಿ. ಬಂಧುಗಳ ವಿಯೋಗವಾಗಬಹುದು. ನಿಮ್ಮ ಜೀವನದ ದಿನಚರಿಯನ್ನು ಬದಲು ಮಾಡಿಕೊಳ್ಳಿ. ದಾಂಪತ್ಯದಲ್ಲಿ ನಿಮಗೆ ವೈಮನಸ್ಯ ಉಂಟಾದರೂ ಸರಿಮಾಡಿಕೊಳ್ಳುವಿರಿ. ಯಾರಿಗಾದರೂ ಸಹಾಯ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳಬಹುದು. ಇಂದು ನಿಮ್ಮ ಮನಸ್ಸು ಉಲ್ಲಾಸದಿಂದ ಇರಲಿದೆ.

ಸಿಂಹ ರಾಶಿ: ನಿಮ್ಮ ಸ್ಥಾನಕ್ಕೆ ಕೊಡಬೇಕಾದ ಗೌರವವನ್ನು ನೀವು ಕೊಡಿ. ದೈನಂದಿನ ಬಳಕೆಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡುವವರ ಆದಾಯದಲ್ಲಿ ಅಧಿಕಲಾಭವು ಆಗುವುದು. ಆದಷ್ಟು ವಾದಗಳಿಂದ ದೂರವಿರಿ. ನಿಮ್ಮ ಕುಟುಂಬದ ಸದಸ್ಯರು ತೀರ್ಥಯಾತ್ರೆಗೆ ಹೋಗಬಹುದು. ನೀವು ಜೀವನ ಸಂಗಾತಿಯ ಬೆಂಬಲದಿಂದ ಖುಷಿಪಡುವಿರಿ. ಆರ್ಥಿಕ ದೃಷ್ಟಿಯಿಂದ ಈ ದಿನವು ಉತ್ತಮವಲ್ಲ. ನಿಮಗೆ ಸ್ನೇಹಿತರಿಂದ ಧನಸಹಾಯವಾಗುವುದು. ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸಲಾರರು. ಅದಕ್ಕೆ ಏನಾದರೂ ತೊಂದರೆ ಕೊಟ್ಟಾರು. ದೂರದ ಪ್ರಯಾಣಕ್ಕೆ ಇಂದು ಅನುಕೂಲವಲ್ಲ. ಕೆಲಸಗಳನ್ನು ಮಾಡಿಕೊಡಲು ನಿಮಗೆ ಹಣವನ್ನು ನೀಡುವರು. ಸ್ತ್ರೀಯರ ಸಹಾಯವನ್ನು ಪಡೆದು ನೀವು ಕಛೇರಿಯ ಕೆಲಸವನ್ನು ಬೇಗ ಮುಗಿಸುವಿರಿ. ನಿದ್ರೆಯ ವ್ಯತ್ಯಾಸದಿಂದ ನಿಮಗೆ ಕಿರಿಕಿರಿ. ಕಲಾವಿದರು ಹೆಚ್ಚಿನ ಆದಾಯವನ್ನು ಮಾಡಿಕೊಳ್ಳುವರು. ರಾಜಕೀಯಕ್ಕೆ ಹೋಗಲು ಆತುರದಿಂದ ಇರುವಿರಿ. ವ್ಯವಹಾರದಲ್ಲಿ ನೀವು ತೆಗೆದುಕೊಳ್ಳುವ ತ್ವರಿತ ನಿರ್ಧಾರಗಳು ಸಕಾರಾತ್ಮಕವಾಗಿರುತ್ತವೆ. ಕಳೆದ ಸಮಯವನ್ನು ಚಿಂತಿಸುವಿರಿ.

ಕನ್ಯಾ ರಾಶಿ: ಕಾಳಜಿ ಮಾಡದಿರುವುದು ನಿಮಗೆ ಅಪಮಾನಮಕ್ಕಳನ್ನು ಒಳ್ಳೆಯ ಅಭ್ಯಾಸಕ್ಕೆ ತೊಡಗಿಸುವ ಯೋಚನೆ ಬರುವುದು. ಒಳಗೊಂದು ಹೊರಗೊಂದು ಸ್ವಭಾವವನ್ನು ತೋರಿಸುವುದು ಬೇಡ. ಪ್ರೇಮ ವ್ಯವಹಾರಗಳಲ್ಲಿ ತೊಡಗಿರುವ ಜನರು ತಮ್ಮ ಸಂಗಾತಿಯ ಭಾವನೆಗಳನ್ನು ಬೆಂಬಲಿಸುವರು. ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕು. ಮಕ್ಕಳ ಪ್ರಗತಿಯನ್ನು ನೀವು ನಿರೀಕ್ಷಿಸಿದ್ದು ಇಂದು ಸಾಫಲ್ಯವಾಗುವುದು. ಅತಿಯಾದ ವಿಶ್ವಾಸದಿಂದ ವಂಚನೆಯಾಗಲಿದೆ. ದೈಹಿಕ ಸೌಂದರ್ಯವನ್ನು ಹೆಚ್ಚುಮಾಡಿಕೊಳ್ಳುವಿರಿ. ಸಾಲದ ವಿಚಾರವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡಬೇಕಾದೀತು. ಅದೃಷ್ಟವನ್ನು ನಂಬಿ ನಿಮ್ಮ ಪ್ರಯತ್ನವು ಇಲ್ಲದೆಯೂ ಇರಬಹುದು. ಉದ್ಯೋಗದ ಕಾರಣದಿಂದ ನೀವು ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ಅಧ್ಯಯನವನ್ನು ನಿರ್ಲಕ್ಷಿಸಬಹುದು. ಮನಶ್ಚಾಂಚಲ್ಯವನ್ನು ಮೀರಲಾಗದು.

ತುಲಾ ರಾಶಿ: ನಿಮ್ಮ ಮನಸ್ಸು ಹಲವು ದ್ವಂದ್ವಗಳಿಂದ ಏಕಾಂತದಲ್ಲಿ ಇರುವ ಮನಸ್ಸಾಗುವುದು. ಅನುಭವಿಗಳ ಮುಂದೆ ಮೌನವಾಗಿರುವುದು ಲೇಸು. ಚೆನ್ನಾಗಿ ಯೋಚಿಸಿದ ನಿರ್ಧಾರಗಳು ದೀರ್ಘಕಾಲದವರೆಗೆ ಪರಿಣಾಮಕಾರಿಯಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಸಾಧ್ಯ. ಆಸ್ತಿ ವ್ಯವಹಾರಗಳು ನಿಮಗೆ ಲಾಭವನ್ನು ನೀಡುವುದು. ಉದ್ಯೋಗಸ್ಥರಿಗೆ ಪ್ರಗತಿಯ ಸಾಧ್ಯತೆಗಳಿವೆ. ಆರ್ಥಿಕವಾದ ಸಮಾನರಲ್ಲಿ ನಿಮ್ಮ ಸಖ್ಯವು ಇರಲಿದೆ. ನಿರಂತರ ಕಾರ್ಯದಿಂದ ನಿಮಗೆ ಫಲವು ಲಭ್ಯವಾಗುವುದು. ಮಕ್ಕಳ ನಡುವಿನ ಕಲಹವನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವಿರಿ. ದಾಂಪತ್ಯದಲ್ಲಿ ಬಿರಕು ಬಂದು ಮನೆಯಿಂದ ದೂರ ಇರುವಿರಿ. ದೈವದ ಬಗ್ಗೆ ಭಕ್ತಿಯ ಕೊರತೆ ಇರಲಿದೆ. ಸಂಬಂಧವನ್ನು ಉಳಿಸಿಕೊಳ್ಳಲು ಸಮಯವನ್ನೂ ಕೊಡಬೇಕಾದೀತು. ನಿಮಗೆ ಇಂದಿನ ಕಾರ್ಯದಿಂದ ಪಾಪಪ್ರಜ್ಞೆಯು ಕಾಡಬಹುದು. ಮನಸ್ಸನ್ನು ನಿರ್ಲಿಪ್ತಗೊಳಿಸಲು ಪ್ರಯತ್ನಿಸುವಿರಿ. ಸೌಹಾರ್ದತೆಯ ಚರ್ಚೆಯಿಂದ ಒಳ್ಳೆಯದಾಗುವುದು. ವೈಯಕ್ತಿಕ ಸಮಸ್ಯೆಗಳನ್ನು ವ್ಯವಹಾರಕ್ಕೆ ತಂದುಕೊಳ್ಳುವುದು ಬೇಡ.‌

ವೃಶ್ಚಿಕ ರಾಶಿ: ನಿವೃತ್ತಿಯನ್ನು ಘೋಷಿಸಿ ನೆಮ್ಮದಿಯಿಂದ ಇರುವುವುದು ಉತ್ತಮ. ಭೂಮಿಯ ಖರೀದಯಲ್ಲಿ ವಂಚನೆ ಆಗಬಹುದು. ಇಂದು ನಿಮ್ಮ ಬಗ್ಗೆ ಕಪೋಲಕಲ್ಪಿತ ಸುದ್ದಿಗಳು ಹರಡಬಹುದು. ವ್ಯವಹಾರಗಳ ವಿಷಯದಲ್ಲಿ ನಿಮ್ಮನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ. ನೀವು ಜನಪ್ರಿಯತೆಯನ್ನು ಗಳಿಸುವಿರಿ. ಪ್ರೇಮಿಗಳಿಗೆ ಈ ಸಮಯವು ಶುಭವಲ್ಲ. ನಿಮ್ಮನ್ನು ಸ್ಥಾನದಿಂದ‌ ಕೆಳಗೆ ಹಾಕಲು ನೋಡಬಹುದು. ಸಿಟ್ಟಿಗೆ ಕಾರಣವಿಲ್ಲದಿದ್ದರೂ ಸಿಟ್ಟಾಗುವಿರಿ. ಮೇಲಧಿಕಾರಿಗಳ ಬೆಂಬಲವು ನಿಮಗೆ ಸಿಕ್ಕರೂ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ನಿಮಗೆ ನಾನಾ ರೀತಿಯ ಸೌಲಭ್ಯಗಳು ಸಿಗಲಿದೆ. ಚೋರಭೀತಿಯು ನಿಮಗೆ ಕಾಡಬಹುದು. ಭೂಮಿಯ ವ್ಯವಹಾರದಿಂದ ಸಂಬಂಧಗಳು ಹಾಳಾಗುವುದು. ನೀವು ಕೆಲವು ಸಮಸ್ಯೆಯನ್ನು ಅನಿರೀಕ್ಷಿತವಾಗಿ ಎದುರಿಸಬೇಕಾಗುವುದು. ನಿಮ್ಮ ಆಸ್ತಿಯ ದಾಖಲೆಗಳನ್ನು ಸರಿಯಾಗಿ ಇಟ್ಟಕೊಳ್ಳಬೇಕಾಗುವುದು. ಪ್ರೇಮ ಸಂಬಂಧದ ಕೋಪದಿಂದ ನೀವು ಭಾವನಾತ್ಮಕ ದೂರವಾಗುವಿರಿ.

ಧನು ರಾಶಿ: ಜವಾಬ್ದಾರಿಯ ಸ್ಥಾನದಲ್ಲಿ ನಿಂತು ಕಾರ್ಯವನ್ನು ಮಾಡುವಿರಿ. ಇಂದು ಅನಾರೋಗ್ಯದಿಂದ ಚೇತರಿಕೆಯು ಕಾಣಿಸುವುದು. ಮಾನಸಿಕ ಅಸ್ಥಿರತೆಯಿಂದ ಜೊತೆಗಾರರಿಗೆ ಕಷ್ಟವಾಗಲಿದೆ. ವಾಹನದಿಂದ ಅಪಘಾತವು ಆಗಬಹುದು. ನಿಮ್ಮ ಮಾತನ್ನು ನಿಯಂತ್ರಣ ತಪ್ಪಿ ಆಡುವಿರಿ. ಖುಷಿಯ ಸಂದರ್ಭದಲ್ಲಿ ನಿಮ್ಮ ನೋವನ್ನು ಕುಟುಂಬವು ಹಂಚಿಕೊಳ್ಳಬಹುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸ್ವಲ್ಪ ಸಮಸ್ಯೆ ಆಗಬಹುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಯಾರ‌ ಮಾತನ್ನೋ ಕೇಳಿ ನೀವು ಸಮಸ್ಯೆಯನ್ನು ತಂದುಕೊಳ್ಳುವಿರಿ. ಕಣ್ಣಿನ ತೊಂದರೆ ಹೆಚ್ಚಾದೀತು. ವಿವಾಹ ಸಂಬಂಧದಿಂದ ನಿಮಗೆ ಕಿರಿಕಿರಿ ಎನಿಸಬಹುದು. ಕೆಲಸದಲ್ಲಿ ಮಂದಗತಿಯು ಇರಲಿದೆ. ಬಂಧುಗಳನ್ನು ನೀವು ದೂರ ಮಾಡಿಕೊಳ್ಳುವಿರಿ. ಉದ್ಯೋಗವನ್ನೇ ನಂಬಿಕೊಂಡಿದ್ದರೆ ನಿಮಗೆ ಆತಂಕವು ಸೃಷ್ಟಿಯಾಗಬಹುದು. ವಿದ್ಯಾರ್ಥಿಗಳು ಅಧ್ಯಯನದಿಂದ ದೂರವಾಗುತ್ತಾರೆ. ವ್ಯಾಪಾರವನ್ನು ಹೆಚ್ಚಿಸಲು ಸೂಕ್ತ ವಿಧಾನಗಳನ್ನು ಅಳವಡಿಸಿಕೊಳ್ಳಿ.

ಮಕರ ರಾಶಿ: ಹೊಸ ಗೆಳೆತನ ಆರಂಭವಾಗುವುದು. ದಾಂಪತ್ಯದಲ್ಲಿ ಸಂತೋಷವಿರಲು ಹೊಸತನ ಬೇಕಾದೀತು. ನೀವು ಪ್ರಭಾವಿ ವ್ಯಕ್ತಿಗಳ ಸಂಪರ್ಕ ಮಾಡುವಿರಿ. ನೀವು ಹೊಸ ಪಾಲುದಾರಿಕೆಗೆ ಪ್ರವೇಶಿಸಬಹುದು ಮತ್ತು ನಿಮ್ಮ ಲಾಭವನ್ನು ಹೆಚ್ಚಿಸಬಹುದು. ಪ್ರಯತ್ನಕ್ಕೆ ಫಲ ಸಿಗದೇ ದುಃಖಿಸುವಿರಿ. ಮಾನಸಿಕ ಖಿನ್ನತೆಯಿಂದ ಹೊರಬರಲು ಸ್ನೇಹಿತರು ಸಹಾಯ ಮಾಡುವರು. ಸಂಗಾತಿಯ ನಡುವಿನ ವಾಗ್ವಾದವು ವಿಕೋಪಕ್ಕೆ ಹೋಗಬಹುದು. ಪ್ರೀತಿಯು ಇರಬೇಕಾದ ಸ್ಥಳದಲ್ಲಿ ನಿಮಗೆ ಪ್ರತಿಷ್ಠೆಯು ಕಾಣಿಸಿಕೊಳ್ಳುವುದು. ನೀವು ಅಂದುಕೊಂಡಿದ್ದು ಮಾತ್ರವೇ ಸತ್ಯವಾಗದು. ನಿಮ್ಮ‌ ಪ್ರಾಮಾಣಿಕ ಪ್ರಯತ್ನಕ್ಕೆ ಫಲವು ದೊರೆಯದೇ ನೋಯುವಿರಿ. ವಾಹನ ಸಂಚಾರದಲ್ಲಿ ನಿಮಗೆ ಭಯವಾಗಬಹುದು. ಆರ್ಥಿಕವಾಗಿ ನೀವು ಬಲವಾಗಿತ್ತಿರುವುದು ನಿಮಗೆ ಹೆಮ್ಮೆಯ ವಿಚಾರವಾಗುವುದು. ಕಠಿಣ ಪರಿಶ್ರಮದ ಹೊರತಾಗಿ ಸರಿಯಾದ ಫಲಿತಾಂಶವನ್ನು ಸಾಧಿಸಲಾಗುವುದಿಲ್ಲ. ಸಂಶೋಧನೆಯ ಚಟುವಟಿಕೆಗಳಲ್ಲಿ ಯಶಸ್ಸಿದೆ.

ಕುಂಭ ರಾಶಿ: ಮಾತಾಡುವ ಅವಕಾಶವನ್ನು ಮಿತವಾಗಿ ಬಳಸಿ. ಅನಾಯಾಸದಿಂದ ಬರುವ ಹಣವನ್ನು ದುರುಪಯೋಗ‌ ಮಾಡುವಿರಿ.‌ ಒತ್ತಡದಿಂದ ಕಾರ್ಯವನ್ನು ಮಾಡುವುದು ನಿಮಗೆ ಅಭ್ಯಾಸವಾಗಿದೆ. ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲವನ್ನೂ ಉತ್ತಮವಾಗಿ ಮಾಡುವಿರಿ. ಸಜ್ಜನರ ಸೇವೆಯಿಂದ ತೃಪ್ತಿಯಾಗುವುದು. ಅಧಿಕವಾದ ಖರ್ಚುಗಳು ನಿಮಗೆ ಲೆಕ್ಕಕ್ಕೆ ಸಿಗದು. ಕೂಡಿಟ್ಟ ಹಣದಿಂದ ನಿಮಗೆ ಇಂದು ಪ್ರಯೋಜನವಾದೀತು. ಮುಂದಾಗುವುದನ್ನು ಊಹಿಸಿಕೊಳ್ಳುವುದು ಸಾಧ್ಯವಾಗುವುದು. ಅನಿರೀಕ್ಷಿತ ಸುದ್ದಿಯು ನಿಮ್ಮ‌ ಮನಸ್ಸಿಗೆ ಘಾಸಿಯನ್ನು ಮಾಡಬಹುದು. ‌ಮತ್ತೆ ಮತ್ತೆ ಒಂದೇ ಘಟನೆಗಳು ನಿಮಗೆ ಬೇಸರ ತರಿಸಬಹುದು. ಆರ್ಥಿಕ‌ಭದ್ರತೆಯ ಕಡೆ ಅಧಿಕ ಗಮನವನ್ನು ಕೊಡಿ. ನಿಮ್ಮ ಅಸಹಾಯಕತೆಯನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ಕೆಲವನ್ನು ಬಿಟ್ಟರೂ ಬಿಡಲಾಗದು.

ಮೀನ ರಾಶಿ: ಇಂದು ಕಾಯುವಿಕೆ ನಿಮಗೆ ಆಗದು. ಎಲ್ಲವನ್ನು ಕ್ಷಣದಲ್ಲಿ ಮಾಡುವ ಆತುರ ಇರುವುದು. ಅಸಾಧಾರಣ ಸೋಲು ನಿಮಗೆ ಹೆಮ್ಮೆಯನ್ನು ತರುವುದು. ಇಂದು ನಿಮ್ಮ ಕುಟುಂಬವು ಸಂತೋಷವಾಗಿ ಇರುವುದನ್ನು ಕಣ್ತುಂಬಿಕೊಳ್ಳುವಿರಿ. ಕೆಲಸದಲ್ಲಿ ಸಾವಧಾನತೆ ಇರಲಿ. ನಿಮಗೆ ಸಿಗುವ ಬಡ್ತಿಯಲ್ಲಿ ಸುಧಾರಣೆ ಇರಲಿದೆ. ಸಹಬಾಳ್ವೆ ಕಷ್ಟವಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನವನ್ನು ಜೋಪಾನವಾಗಿ ನಡೆಸಬೇಕಾದೀತು.‌ ಕೆಲವು ಘಟನೆಗಳು ನಿಮಗೆ ಭ್ರಾಂತಿಯನ್ನು ತರಿಸಬಹುದು. ನೀರೀಕ್ಷಿಸಿದಂತೆ ಎಲ್ಲವೂ ನಡೆಯದೇ ಇರಬಹುದು. ಉತ್ತಮ‌ವಾದ ಸಮಯವನ್ನು ಎದುರು ನೋಡುವಿರಿ. ಹಣದ ಒಳ ಹರಿವು ನಿಮಗೆ ನೆಮ್ಮದಿಯನ್ನು ಕೊಟ್ಟೀತು. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ