ಅಕಾಲಿಕ ಮಳೆಯಿಂದ ಬೆಳೆ ನಾಶ : ಗಗನಕ್ಕೇರಿದ ತರಕಾರಿಗಳ ಬೆಲೆ

ಬೆಂಗಳೂರು: ಫೆಂಗಲ್ ಚಂಡಮಾರುತದಿಂದ ರಾಜ್ಯಾದ್ಯಂತ ಮಳೆಯಾಗಿದೆ. ಇದರಿಂದ ಕಟಾವಿಗೆ ಬಂದ ತರಕಾರಿ ಮಣ್ಣು ಪಾಲಾಗಿದೆ. ಹೀಗಾಗಿ, ತರಕಾರಿ ಬೆಲೆ ಗಗನಕ್ಕೇರಿದೆ. ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದ ಬೆಳೆಗಳು ನೆಲಕಚ್ಚಿವೆ. ಇದರಿಂದ, ಅಗತ್ಯಕ್ಕೆ ತಕ್ಕಷ್ಟು ತರಕಾರಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದೆ. ಬೆಳ್ಳುಳ್ಳಿ ಕೆಜಿಗೆ 600 ರೂಪಾಯಿ ಆಗಿದ್ದರೇ, ನುಗ್ಗೆಕಾಯಿ 500 ರೂ. ಗಡಿ ತಲುಪಿದೆ. ಒಂದು ನುಗ್ಗೆಕಾಯಿ 50 ರಿಂದ 60 ರೂಪಾಯಿಗೆ ಮಾರಾಟವಾಗುತ್ತಿದೆ.

ಬೆಂಗಳೂರಿನಲ್ಲಿ ತರಕಾರಿ ಬೆಲೆ

ಟೊಮೇಟೊ ಕೆಜಿಗೆ: 60-70 ರೂ., ಬೆಳ್ಳುಳ್ಳಿ: 550-600 ರೂ., ಈರುಳ್ಳಿ: 70-80 ರೂ., ನುಗ್ಗೆಕಾಯಿ: 500ರೂ., ಬಟಾಣಿ: 180-200 ರೂ., ಮೆಣಸಿನಕಾಯಿ: 40-80 ರೂ., ಆಲೂಗಡ್ಡೆ: 50-55 ರೂ., ಬೀನ್ಸ್: 60 ರೂ., ಗಜ್ಜರಿ: 60-80ರೂ., ದೊಡ್ಡ ಮೆಣಸಿನಕಾಯಿ ಹಸಿರು: 50 ರೂ., ದೊಡ್ಡ ಮೆಣಸಿನಕಾಯಿ ಹಳದಿ, ಕೆಂಪು: 150-180 ರೂ., ಬೀಟ್ರೂಟ್: 60 ರೂ., ರಿಟೇಲ್​ನಲ್ಲಿ ಬೆಳ್ಳುಳ್ಳಿ ಕೆಜಿಗೆ: 500-550 ರೂ., ಎಪಿಎಂಸಿ ಮಾರುಕಟ್ಟೆಯಲ್ಲಿ: 400-450 ರೂ. ಮಾರಾಟವಾಗುತ್ತಿದೆ.

ಹಾಪ್ ಕಾಮ್ಸ್​​ನಲ್ಲಿ ಇಂದಿನ ದರ

ಬೆಳ್ಳುಳ್ಳಿ ಕೆಜಿ: 530 ರೂ., ನುಗ್ಗೆಕಾಯಿ: 520 ರೂ., ಬಟಾಣಿ: 130-240 ರೂ., ಗಜ್ಜರಿ: 110 ರೂ., ನಿಂಬೆಹಣ್ಣು: 100 ರೂ., ಈರುಳ್ಳಿ: 94 ರೂ., ತೊಂಡೆಕಾಯಿ: 90 ರೂ., ಟೊಮೇಟೊ: 90 ರೂ., ಶುಂಠಿ: 80 ರೂ., ಬೀನ್ಸ್​: 75 ರೂ., ಬೆಂಡೆಕಾಯಿ: 75 ರೂ., ಬೀಟ್ರೂಟ್: 70 ರೂ., ದೊಡ್ಡ ಮೆಣಸಿನಕಾಯಿ: 62 ರೂ., ಸೋರೆಕಾಯಿ: 62 ರೂ., ಆಲೂಗಡ್ಡೆ: 60 ರೂ., ಹಸಿ ಮೆಣಸಿನಕಾಯಿ: 58 ರೂ., ಪಡವಲಕಾಯಿ: 50 ರೂ., ತೆಂಗಿನಕಾಯಿ (ದಪ್ಪ): 50 ರೂ., ತೆಂಗಿನಕಾಯಿ (ಮಧ್ಯಮ) 43 ರೂ., ಬಿಳಿ ಬದನೆ: 46 ರೂ., ಹೀರೇಕಾಯಿ: 44 ರೂ., ಎಲೆಕೋಸು: 43 ರೂ., ಗುಂಡು ಬದನೆ: 42 ರೂ., ಹೂಕೋಸು: 42 ರೂ., ಹಾಗಲಕಾಯಿ: 40 ರೂ., ಸೌತೆಕಾಯಿ: 36 ರೂ., ಸೀಮೆಬದನೆಕಾಯಿ: 29 ರೂ., ಬೂದುಕುಂಬಳಕಾಯಿ: 25 ರೂ., ಸಿಹಿ ಕುಂಬಳಕಾಯಿ: 25 ರೂ ಗೆ ಮಾರಾಟವಾಗುತ್ತಿದೆ.