ಹುಟ್ಟಹಬ್ಬ ಆಚರಿಸಲು ಲಾಗ್​ಡ್ರೈವ್ ಹೊರಟಿದ್ದ ಯುವಕರ ವಾಹನ ಅಪಘಾತ, ಇಬ್ಬರು ಸಾವು

ದೇವನಹಳ್ಳಿ, ಜುಲೈ.14: ಬೆಂಗಳೂರು ಗ್ರಾ. ಜಿಲ್ಲೆಯ ಹೊಸಕೋಟೆ ಹೊರವಲಯಲ್ಲಿ ಹಿಟ್​ & ರನ್​​ಗೆ ಇಬ್ಬರು ಬಲಿಯಾಗಿದ್ದಾರೆ. ಬೆಂಗಳೂರಿನ ಕೆಂಪಾಪುರದ ಸಿದ್ಧಾರ್ಥ್​(17), ಹರ್ಷ(18) ಮೃತರು. ಬರ್ತ್​ಡೇ ಆಚರಣೆ ಮಾಡಲು ಇಬ್ಬರು ಯುವಕರು ಕಾರಿನಲ್ಲಿ ಲಾಂಗ್​ಡ್ರೈವ್ ಬಂದಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಕಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಅಪರಿಚಿತ ವಾಹನ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಹಿಟ್ ಅಂಡ್ ರನ್ ಮಾಡಿ ಹೋದ ವಾಹನಕ್ಕಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.