ಬುಧವಾರದ ದಿನ ಭವಿಷ್ಯ-25 December 2024

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶಿರ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ದಶಮೀ, ನಿತ್ಯನಕ್ಷತ್ರ:ಸ್ವಾತೀ, ಯೋಗ: ಅತಿಗಂಡ​, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 56 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 09 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:33 ರಿಂದ 13:57ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:20 ರಿಂದ 09:45 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 11:09 ರಿಂದ ಮಧ್ಯಾಹ್ನ 12:33 ರವರೆಗೆ.

ಮೇಷ ರಾಶಿ :ಇಂದು ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಸೋಲಾಗಬಹುದು. ನಿಮಗೆ ಗೊತ್ತಿಲ್ಲದೇ ಪುಣ್ಯವು ನಿಮ್ಮನ್ನು ಸೇರಿಸುವ ಸ್ಥಳಕ್ಕೆ ತಂದುಬಿಡುವುದು. ವೃತ್ತಿಯ ಸ್ಥಳದಲ್ಲಿ ನಿಮಗೆ ಕೆಲವು ಬದಲಾವಣೆಯು ಇರಲಿದೆ‌. ಸ್ನೇಹಿತನ ಮಾತಿನಿಂದ ಯಾರಿಗಾದರೂ ನೀವು ಹಣವನ್ನು ಕೊಡುವ ಸಂದರ್ಭವು ಬರಬಹುದು. ನಿಮ್ಮ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಉತ್ತಮ. ಶತ್ರುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರಲಿದೆ. ಅನಿರೀಕ್ಷಿತ ವಾರ್ತೆಯಿಂದ ನಿಮಗೆ ಬೇಸರವಾಗಬಹುದು. ಬಂಧುಗಳು ಪ್ರೀತಿಯನ್ನು ತೋರಿಸುವರು. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣ ಮಾಡುವಿರಿ. ತಾಯಿಯ ಕಡೆಯ ಬಂಧುಗಳಿಂದ ನಿಮಗೆ ಸಹಾಯವು ಸಿಗಲಿದೆ. ನೀವು ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಉಪಾಯವನ್ನು ಮಾಡುವಿರಿ. ಸುಳ್ಳು ಹೇಳುವ ಸಂದರ್ಭವೂ ಬರಬಹುದು. ಸುಲಭವಾದ ಕಾರ್ಯವನ್ನು ಮೊದಲು ಮಾಡಿ ಮುಗಿಸಿ.

ವೃಷಭ ರಾಶಿ :ಇಂದು ಬರುವ ಅಪರೂಪದ ಸಂದರ್ಭವನ್ನು ಬಳಿಸಿದರೆ ಉತ್ತಮ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ನಿಮ್ಮ ಒಳ ಜಗಳವು ಬೀದಿಗೆ ಬರಬಹುದು. ಕೆಲವರನ್ನು ನೀವು ಸರಿಯಾಗಿ ಅಂದಾಜು ಮಾಡಲಾಗದು. ಸುಮ್ಮನೇ ಯಾರ ಬೆಂಬಲಕ್ಕೂ ನಿಲ್ಲಲು ಹೋಗುವುದು ಬೇಡ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ. ಬಂಧುಗಳ ಸ್ವಭಾವವು ಇಷ್ಟವಾಗಸೇ ಅವರ ಬಗ್ಗೆ ನೀವು ಆಡಿಕೊಳ್ಳುವಿರಿ. ಯಾರ ಮೇಲಾದರೂ ದೋಷಾರೋಪ ಮಾಡುವ ಸಂಭವವಿದೆ. ಬರುವ ಆದಾಯಕ್ಕೆ ವಿಘ್ನವು ಬರಬಹುದು. ಸ್ನೇಹವು ಸಡಿಲವಾಗುವ ಸಾಧ್ಯತೆ ಇದೆ. ಪ್ರಭಾವಿ ವ್ಯಕ್ತಿಗಳ ಸಲಹೆಯಿಂದ ನೀವು ಅಂದುಕೊಂಡ ದಾರಿಯು ಸುಗಮವಾಗುವುದು. ಹಣದ ಆಮಿಷದಲ್ಲಿ‌ ಸಿಕ್ಕಿಕೊಳ್ಳುವಿರಿ. ಯಾರಾದರೂ ಭೂಮಿಯನ್ನು ವಶಪಡಿಸಿಕೊಳ್ಳಲು ಯೋಚಿಸಬಹುದು. ತಾಳ್ಮೆಯನ್ನು ಕಳೆದುಕೊಳ್ಳದೇ ಪರಿಹಾರವನ್ನು ಕಂಡುಕೊಳ್ಳಿ. ಅಧಿಕ ಓಡಾಟದಿಂದ ದಣಿವಾಗಲಿದೆ.

ಮಿಥುನ ರಾಶಿ :ಹಿರಿಯರ ಭರವಸೆಯ ಮಾತುಗಳೇ ನಿಮಗೆ ಧೈರ್ಯವನ್ನು ಕೊಡಬಹುದು. ಉನ್ನತ ಶಿಕ್ಷಣವನ್ನು ಪಡೆಯಲು ನೀವು ಸಫಲರಾಗಬಹುದು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ತಲೆಕೊಡಬೇಕಾದೀತು. ನಿಮಗೆ ಸಿಗುವ ಸೂಚನೆಗಳನ್ನು ಗಮನಿಸಿಕೊಂಡು ವ್ಯವಹಾರಾದಿಗಳನ್ನು ಮಾಡಿ. ಯಂತ್ರಜ್ಞರು ಇಂದು ಒತ್ತಡದಲ್ಲಿ ಇರುವರು. ಭೂಮಿಯ ವ್ಯವಹಾರದಲ್ಲಿ ಲಾಭವಾಗಲು ತಿರುಗಾಟವನ್ನು ಮಾಡಬೇಕಾಗಬಹುದು. ತುರ್ತು ಹಣವು ಬೇಕಾಗಿದ್ದು ಸಾಲವನ್ನು ಮಾಡಲು ನಿಮಗೆ ಭಯವಾಗಬಹುದು. ನಿಮ್ಮ ಸ್ವಂತ ಕೆಲಸಕ್ಕಾಗಿ ವಿರಾಮ ಸಿಗದು. ಬಹಳ ದಿನಗಳ ಅನಂತರ ಕುಟುಂಬದ ಜೊತೆ ಸೇರಿಕೊಳ್ಳಲಿದ್ದು ಸ್ಮರಣೀಯ ಕ್ಷಣಗಳನ್ನು ಕಳೆಯುವಿರಿ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನಿಮ್ಮ ಕೌಶಲವನ್ನು ಪ್ರದರ್ಶಿಸಲು ಅವಕಾಶವಿದೆ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ.

ಕರ್ಕಾಟಕ ರಾಶಿ :ಸಂಗಾತಿಗೆ ಸಮಜಾಯಿಷಿ ನೀಡುವ ಭರದಲ್ಲಿ ಮತ್ತೇನನ್ನೋ ಹೇಳಬಹುದು. ದುರಸ್ತಿ ಕಾರ್ಯಗಳಿಗೆ ಸಂಪತ್ತನ್ನು ಖಾಲಿಮಾಡಬೇಕಾಗಬಹುದು. ಕಾನೂನಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳುವಿರಿ. ಆಸ್ತಿಯನ್ನು ಮಾಡುವ ಚಿಂತನೆ ಅಧಿಕವಾಗಿರುವುದು. ಹಠದ ಸ್ವಭಾವವು ಎಲ್ಲರ ಪ್ರೀತಿಯಿಂದ ನಿಮ್ಮನ್ನು ದೂರಮಾಡಬಹುದು. ನಿಮ್ಮವರ ಮೇಲೆ‌ ಅನುಮಾನ ಸಕಾರಣಕ್ಕೆ ಆಗಿರಲಿ. ಇಂದು ಹಣಕಾಸಿನ ವ್ಯವಹಾರ ಮಾಡಲು ಧೈರ್ಯವು ಸಾಕಾಗದು. ಮಕ್ಕಳ‌ ಒತ್ತಾಯಕ್ಕೆ ಇಂದು ಪ್ರಯಾಣವನ್ನು ಮಾಡುವಿರಿ. ಸಭ್ಯರ ಮಧ್ಯ ಅಪಮಾನವಾಗಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿ, ಗೊಂದಲ ಬೇಡ.‌ ಹೆದರಿಸಿ ವಸ್ತುವನ್ನು ಪಡೆಯುವಿರಿ. ನಿಮ್ಮ ಇಷ್ಟವಾದ ವಸ್ತುವು ಕಣ್ಮೆಯಾರಿಗಿರುವುದು ಇಂದು ಗೊತ್ತಾಗುವುದು. ಆರ್ಥಿಕ ಸಹಾಯವನ್ನು ಇನ್ನೊಬ್ಬರಿಂದ ಪಡೆಯುವಿರಿ. ಕೇಳುವ ರೀತಿ ಸರಿಯಾಗಿರಲಿ. ನಿಮ್ಮ ಭಾವವನ್ನು ಬಂಧಿಸಿಟ್ಟರೂ ಅದು ಗೊತ್ತಾಗುವುದು.

ಸಿಂಹ ರಾಶಿ :ಸಣ್ಣ ವ್ಯವಹಾರವಾದರೂ ಅಚ್ಚುಕಟ್ಟುತನ ಮುಖ್ಯವಾಗುವುದು. ಅಧಿಕಾರಿಗಳಿಗೆ ಸಮಸ್ಯೆ ಎದುರಾಗುವುದು. ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿಯಿಂದ ಅನುಭವಿಸುವುದು ಅವಶ್ಯಕ. ಪಕ್ಷಪಾತ ಸ್ವಭಾವದಿಂದ ಒಂಟಿಯಾಗುವ ಸಾಧ್ಯತೆ ಇದೆ. ನಿಮ್ಮನ್ನು ನೋಡು ದೃಷ್ಟಿಯು ಇದರಿಂದ ಬದಲಾದೀತು. ನೂತನ ಉದ್ಯಮಕ್ಕೆ ಹೆಚ್ಚು ಆದ್ಯತೆ ಇರಲಿದೆ. ಕುಟುಂಬದಲ್ಲಿ ನಿಮ್ಮ ಪ್ರತಿ ಮಾತನ್ನು ಅನೇಕ ಅರ್ಥದಲ್ಲಿ ಗ್ರಹಿಸಬಹುದು. ಮೇಲಧಿಕಾರಿಗಳ ಜೊತೆ ನಿಮ್ಮ ಒಡನಾಟವನ್ನು ಚೆನ್ನಾಗಿಟ್ಟುಕೊಳ್ಳಿ. ನಿಮ್ಮ ಇಂದಿನ ಗುರಿಯನ್ನು ಸ್ಪಷ್ಟ ಮಾಡಿಕೊಂಡಿರಿ. ಎಲ್ಲರ ಜೊತೆ ಕುಳಿತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಕೆಲವು ರಾಜಕೀಯ ವ್ಯಕ್ತಿಗಳ ಪ್ರೇರಣೆಯಿಂದ ನೀವೂ ರಾಜಕೀಯಕ್ಕೆ ಬರುವಿರಿ. ನಿಮ್ಮದೇ ಕೆಲಸವಾದರೂ ನಿಮಗೆ ಅದರ ಸಂಪೂರ್ಣ ಯಶಸ್ಸು ಸಿಗದು. ಮುಖಪ್ರೇಕ್ಷಕತ್ವ ಒಳ್ಳೆಯದಲ್ಲ. ಕೆಲವು ತೊಂದರೆಗಳನ್ನು ನೀವು ತೆಗೆದುಕೊಳ್ಳುವುದು ಅನಿವಾರ್ಯ.

ಕನ್ಯಾ ರಾಶಿ :ಎಲ್ಲದಕ್ಕೂ ಪೂರ್ವಸಿದ್ಧತೆ ಬಹಳ ಮುಖ್ಯ. ಕಾರ್ಯದಲ್ಲಿ ಇಂದು ನಿಮ್ಮಿಂದಲೇ ತಪ್ಪಾಗುವುದು. ಇದರಿಂದ ಉತ್ತಮ ಕಲಿಕೆಯೂ ನಿಮಗೇ ಆಗುವುದು. ಸ್ನೇಹಿತರ ವಿವಾಹವನ್ನು ನೀವೇ ಮುಂದೆ ನಿಂತು ಮಾಡಿಸುವಿರಿ. ಮಾನಸಿಕವಾಗಿ ಯಾರನ್ನೂ ಕೊಲ್ಲುವುದು ಬೇಡ. ಸ್ನೇಹಿತರ ಮೇಲೆ ಕೂಗಾಡುವಷ್ಟು ಸಲುಗೆ ಬೇಡ. ಉದ್ಯೋಗದಲ್ಲಿ ಒತ್ತಡವನ್ನು ನಿವಾರಿಸಿಕೊಳ್ಳಲು ಯಾರದ್ದಾದರೂ ಸಹಾಯವನ್ನು ಪಡೆಯುವಿರಿ. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ. ನಿಮ್ಮ ವಿರುದ್ಧ ನಡೆಸುವ ತಂತ್ರಗಾರಿಕೆಯು ಹೊಸ ವಿಧಾನದಲ್ಲಿ ಇರಲಿದೆ. ಕಲಾವಿದರ ಬೆಳವಣಿಗೆ ಅವರಿಗೇ ಮುಳ್ಳಾದೀತು. ಹಿರಿಯರ ಜೊತೆ ಕಳೆದ ಸಮಯವು ನಿಮಗೆ ಉಪಯೋಗಕ್ಕೆ ಬರಲಿದೆ. ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಸರಿ‌ಮಾಡಿಕೊಳ್ಳಿ. ಹಣಕಾಸಿನ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು. ಪ್ರೀತಿಯಿಂದ ಆಡಿದ ಮಾತು ಇಂದು ಉಪಯೋಗಕ್ಕೆ ಬರುವುದು.

ತುಲಾ ರಾಶಿ :ಬಂಧನದಿಂದ ಕುರುಡಾಗಿ ದಾರಿ ತಪ್ಪುವಿರಿ. ಇಂದು ನಿಮ್ಮ ಮಾತುಗಳು ಕೆಲವರಿಗೆ ವಿರೋಧದಂತೆ ಭಾಸವಾಗಬಹುದು. ಕಛೇರಿಯ ಕಾರ್ಯವು ಕುಂಟುತ್ತ ಸಾಗುವುದು. ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತುಗಳು ಬರಬಹುದು. ಧಾರ್ಮಿಕ‌ ಕಾರ್ಯದಲ್ಲಿ ಅಡಚಣೆ ಆಗಬಹುದು. ಕೆಲವು ವಿಚಾರದಲ್ಲಿ ನಿಮಗೆ ಸೂಕ್ಷ್ಮತೆಯು ಇರಬೇಕಾಗುವುದು. ನಿಮ್ಮದೇ ಆದ ದಾರಿಯಲ್ಲಿ ನೀವು ಸಾಗುವಿರಿ. ಕ್ಷಮಾದಾನವೂ ಇಂದು ಅಸ್ತ್ರವಾಗಬಹುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಕೊಡುವುದು ಕಷ್ಟವಾಗಬಹುದು. ದೂರ ಊರಿಗೆ ಕುಟುಂಬ ಸಹಿತವಾಗಿ ಪ್ರಯಾಣವನ್ನು ಮಾಡುವಿರಿ. ಸ್ಥಿರಾಸ್ತಿಯ ವಿಚಾರವಾಗಿ ನೆರೆಯವರ ಜೊತೆ ಕಲಹವಾಗಬಹುದು. ಆಮಿಷಕ್ಕೆ ಒಳಗಾಗಿ ಸಿಕ್ಕಿಬೀಳಬಹುದು. ವಿದೇಶೀ ವ್ಯಾಪಾರದಿಂದ ಅಲ್ಪ ಲಾಭವಾಗಲಿದೆ. ಉದ್ಯೋಗದಲ್ಲಿ ನಿಮಗೆ ಮನಸ್ಸು ಖಿನ್ನವಾಗುವುದು.‌ ಇಂದು ನೀವು ಹಣವನ್ನು ಉಳಿಸಿಕೊಳ್ಳಲು ಸಮಸ್ಯೆಯೇ ಆಗಬಹುದು. ಪ್ರೇಮದಿಂದ ದುಃಖವಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ :ಮಕ್ಕಳ‌ ಮೇಲೆ ಸಲ್ಲದ ಕೋಪ ಬೇಡ. ನಿಮ್ಮ ಸ್ಥಗಿತಗೊಂಡ ಕಾರ್ಯಗಳಿಗೆ ಅನ್ಯರಿಂದ ಪ್ರೇರಣೆ ಸಿಗುವುದು. ಮಕ್ಕಳ ಪ್ರೀತಿಯಲ್ಲಿ ನೀವು ಕಳೆದುಹೋಗುವಿರಿ. ಉದ್ಯೋಗಕ್ಕಾಗಿ ನೀವು ವಿದೇಶಕ್ಕೆ ತೆರಳುವ ಆಸೆ ಇರಲಿದೆ. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ. ಮಕ್ಕಳಿಂದ‌ ನಿಮಗೆ ಅಸಮಾಧಾನ ಇರಲಿದೆ. ನಿಮ್ಮ ಹಳೆಯ ಸಮಸ್ಯೆಯನ್ನು ಸರಿಮಾಡಿಕೊಳ್ಳುವಿರಿ. ದೇಹದೊಳಗೆ ಆದ ಗಾಯವು ಹೊರಗೆ ಕಾಣಿಸಿಕೊಳ್ಳುವುದು. ವಾಹನ ವಿಚಾರವಾಗಿ ಮನೆಯಲ್ಲಿ ಕಲಹವಾಗುವುದು. ಸಂಗಾತಿಯ ಮಾತಿಗೆ ಏನಾದರೂ ಪ್ರತಿಕ್ರಿಯೆಯನ್ನು ನೀಡಿ. ಎಲ್ಲರೆದುರು ಸಭ್ಯರಂತೆ ತೋರುವಿರಿ. ಸಾಮಾಜಿಕ ಕಾರ್ಯದಿಂದ ನಿಮಗೆ ಹೆಸರು ಬರಲಿದೆ. ನಂಬಿಕೆಗಳನ್ನು ಮೀರಿ ಏನನ್ನೂ ಮಾಡಲಾರಿರಿ. ನಿಮ್ಮ ಉತ್ಸಾಹವನ್ನು ಶತ್ರುಗಳು ನಿರುತ್ಸಾಹಗೊಳಿಸುವೆರು. ಬೇರೆಯವರ ಮೂಲಕ ಇಂದಿನ ಕೆಲಸವನ್ನು ಮಾಡಿ ಮುಗಿಸುವಿರಿ.

ಧನು ರಾಶಿ :ಭವಿಷ್ಯವು ನಿಮ್ಮ ಕಣ್ಣಿಗೆ ಶೂನ್ಯವೆನಿಸಬಹುದು. ಒಳ್ಳೆಯ ಸುದ್ದಿಯನ್ನು ನಾಲ್ಕು ಜನರ ಜೊತೆ ಹಂಚಿಕೊಳ್ಳುವಿರಿ. ಇಂದು ಕಛೇರಿಯಲ್ಲಾಗಲಿ ನಿಮ್ಮ ಮಾತನ್ನು ಬೆಂಬಲಿಸತ್ತಾರೆ. ಸ್ತ್ರೀಯರು ಇಂದಿನ ವ್ಯಾಪಾರದಲ್ಲಿ ಅಧಿಕ ಲಾಭವನ್ನು ಗಳಿಸುವರು. ಚಿಂತಕರ ಜೊತೆ ಮಂಥನ ಮಾಡುವುದಕ್ಕೆ ಈ ದಿನ ಆಗುವುದು. ಎಷ್ಟೋ ಕಾಲದ ಅನಂತರ ನೀವು ಮಿತ್ರನನ್ನು ಭೇಟಿಯಾಗುವಿರಿ. ಅನ್ನಿಸಿದ್ದನ್ನು ನೇರವಾಗಿ ಹೇಳುವುದು ಬೇಡ. ಸಮಯಕ್ಕಾಗಿ ಕಾದು ನೋಡಿ. ದಿನಚರಿಯನ್ನು ಬದಲಾಯಿಸಿಕೊಳ್ಳುವುದು ಬೇಕಾಗಬಹುದು. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಜಾಣತನದಿಂದ ಇಂದಿನ ಕಾರ್ಯವನ್ನು ಮಾಡುವಿರಿ. ಹಣಕಾಸಿನ ವ್ಯವಸ್ಥೆಯನ್ನು ಸರಿ ಮಾಡಿಕೊಳ್ಳುವುದು ಸೂಕ್ತ. ಅರ್ಧ ಪ್ರಯಾಣ ಮಾಡಿ‌ ಮನೆಗೆ ಹಿಂದಿರುಗುವಿರಿ. ಕೆಲವೊಮ್ಮೆ ಸುಮ್ಮನಿರುವುದೂ ದೊಡ್ಡ ಕೆಲಸವನ್ನು ಮಾಡಿಸುತ್ತದೆ.

ಮಕರ ರಾಶಿ :ಬಲವಂತದಿಂದ ನಿಮ್ಮ ಕೆಳಗಿರುವವರ ಬಳಿ ಕೆಲಸವನ್ನು ಮಾಡಿಸಲಾಗದು. ನಿಮ್ಮ ವೈಯಕ್ತಿಕ ತೊಂದರೆಯನ್ನು ಎಲ್ಲಿಯೂ ಹೇಳಿಕೊಳ್ಳುವ ಮನಸ್ಸಾಗದು. ನೀವು ಇಂದು ಸ್ವಂತ ವಾಹನವನ್ನು ಬಾಡಿಗೆ ಕೊಡುವಿರಿ. ಇರುವ ಸಾಲವನ್ನು ತೀರಿಸಿಕೊಳ್ಳಲುಬೇಕಾದ ಯೋಜನೆ ಮಾಡಿ. ಪ್ರೇಮವನ್ನು ಮತ್ತಾವುದೋ ರೀತಿಯಲ್ಲಿ ಪಡೆಯುವಿರಿ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ಸಂಬಂಧಿಕರನ್ನೇ ಪಾಲುದಾರಿಕೆಯಲ್ಲಿ ಇಟ್ಟಕೊಳ್ಳುವಿರಿ. ಸರ್ಕಾರದಿಂದ ಆಗಬೇಕಾದ ಕಾರ್ಯಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಭೂಮಿಯ ವ್ಯವಹಾರದಿಂದ ಲಾಭವಿಲ್ಲದಿದ್ದರೂ ಅದನ್ನೇ‌ ನಡೆಸಲು ಇಷ್ಟಪಡುವಿರಿ. ಸುಖವಾದ ಜೀವನಕ್ಕೆ ಸರಳ‌ ಸೂತ್ರವನ್ನು ಬಳಸಿ. ನ್ಯಾಯಾಲಯದಲ್ಲಿ ನಿಮ್ಮ ದಾಯಾದಿ ಕಲಹವನ್ನು ಇತ್ಯರ್ಥ ಮಾಡಿಕೊಂಡು ಮುಂದಿನ ಕ್ರಮದತ್ತ ಆಲೋಚಿಸಿ.

ಕುಂಭ ರಾಶಿ :ಉನ್ನತ ಶಿಕ್ಷಣವು ಕೈ ತಪ್ಪುವ ಸಾಧ್ಯತೆ ಇದೆ. ಆತುರದಲ್ಲಿ ಏನಾದರೂ ನಿರ್ಧಾರವನ್ನು ತೆಗದುಕೊಳ್ಳಬೇಡಿ. ನಿಮ್ಮ ನಿರೀಕ್ಷೆಯು ಹುಸಿಯಾಗುವುದು. ಧನಸಂಪಾದನೆಯ ಚಿಂತೆ ಇರಲಿದೆ. ಆಲಸ್ಯದಿಂದ ನಿಮ್ಮ ಸಾಮರ್ಥ್ಯವು ಕಡಿಮೆ ಆಗಲಿದೆ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಇನ್ನೊಬ್ಬರ ಮೇಲೆ ದೂರು ಹಾಕಲು ಮುಜುಗರವಾಗದು. ಸಂಗಾತಿಯಿಂದ ಅಧಿಕ ಸಂಪತ್ತನ್ನು ನಿರೀಕ್ಷಿಸುವಿರಿ. ತಾಯಿಯ ಪ್ರೀತಿಯು ನಿಮಗೆ ಸಿಗಲಿದೆ. ಏಕಮುಖವಾದ ನಿರ್ಧಾರದಿಂದ ಸಫಲತೆಯು ಇರದು.‌ ಸಣ್ಣ ವಿಚಾರಗಳಿಗೂ ಸಿಟ್ಟಾಗುವುದನ್ನು ಕಡಿಮೆ ಮಾಡಿ. ಅಪರಿಚಿತರ ಸಹವಾಸವು ನಿಮ್ಮಲ್ಲಿ ಬೇಡದ ಭಾವವನ್ನು ಕೊಡಬಹುದು. ಎಲ್ಲವನ್ನೂ ಒಬ್ಬರೇ ಮಾಡುವ ಉತ್ಸಾಹವು ಇದ್ದರೂ ಮತ್ತೊಬ್ಬರ ಸಹಕಾರವನ್ನು ಪಡೆದು ಕಾರ್ಯವನ್ನು ಪೂರ್ಣಗೊಳಿಸಿ. ಇರುವುದನ್ನು ಹಾಗೇ ಹೇಳುವುದರಿಂದ ತೊಂದರೆಯಾಗಬಹುದು.

ಮೀನ ರಾಶಿ :ನಿಮ್ಮ ಮನೋವೈಶಾಲ್ಯದಿಂದ ಎಂಥಹವರನ್ನೂ ಗೆಲ್ಲುವಿರಿ. ನೆಮ್ಮದಿ ಬೇಕಾದರೆ ಕೆಲವನ್ನು ಬಿಡುವುದು ಅನಿವಾರ್ಯವಾಗಬಹುದು. ಇಂದು ನಿಮಗೆ ಧಾರ್ಮಿಕ ಕಾರ್ಯಗಳಿಂದ ನಿಮ್ಮ ಹಣದ‌ ಸಂಪಾದನೆಯಾಗಲಿದೆ. ಮನೋವಿಕಾರಕ್ಕೆ‌ ಆಸ್ಪದ ಕೊಡುವುದು ಬೇಡ. ನಿಮಗೆ ಸೂಚಿತ ದಿಕ್ಕಿನಲ್ಲಿ‌ ತೆರಳಿ ಕಾರ್ಯವನ್ನು ಸಾಧಿಸಿಕೊಳ್ಳಿ. ಸುಮ್ಮನೇ ಒತ್ತಡವಿದ್ದಂತೆ ತೋರಿಸುವಿರಿ. ಕೆಲವು ಸಾಧನೆಗೆ ನಿಯಂತ್ರಣ ಅವಶ್ಯಕ. ಅತಿಥಿಗಳ ಸತ್ಕಾರವನ್ನು ಮಾಡುವಿರಿ. ಸಂಗಾತಿಯ ಜೊತೆ ಸರಸದಿಂದ ಕಾಲ ಕಳೆಯುವಿರಿ. ಮಕ್ಕಳ‌ ಕಾರ್ಯವು ಹೆಮ್ಮೆ ಎನಿಸುವುದು. ನಿಮಗೆ ಯಾರಾದರೂ ಉತ್ಸಾಹವನ್ನು ತುಂಬುವವರ ಅವಶ್ಯಕತೆ ಇದೆ. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ಕಳೆದ ವ್ಯರ್ಥ ಕಾಲವನ್ನು ಮತ್ತೆ ಸೇರಿಸಲಗಾದು ಎಂದು ವ್ಯಥೆಪಡುವುದು ಬೇಡ. ಮುಂದಿನದ್ದರ ಬಗ್ಗೆ ಆಲೋಚಿಸಿ. ನಿಮ್ಮ ಮಾತಿನಿಂದ ಕುಟುಂಬದ ಕೆಲವು ಸಮಸ್ಯೆಯು ದೂರಾಗುವುದು.