ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್‌ಗೆ ಅಮೆರಿಕದಲ್ಲಿ ಸರ್ಜರಿ ನಡೆಯಲಿದ್ದು, ಈ ಕುರಿತು ಧ್ರುವ ಸರ್ಜಾ ರಿಯಾಕ್ಟ್ ಮಾಡಿದ್ದಾರೆ. ಶಿವಣ್ಣ ನಮ್ಮ ಇಂಡಸ್ಟ್ರಿಗೆ ಗಾಡ್ ಫಾದರ್, ಅವರ ಆರೋಗ್ಯ ಸುಧಾರಿಸಲಿ ಎಂದು ನಟ ಮಾತನಾಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಧ್ರುವ ಸರ್ಜಾ (Dhruva Sarja) ಮಾತನಾಡಿ, ಲಿವಿಂಗ್ ಲೆಜೆಂಡ್ ಶಿವಣ್ಣಗೆ ಆಪರೇಷನ್ ನಡೆಯುತ್ತಿದೆ. ಆ ಭಗವಂತ ನನಗೆಷ್ಟು ಆಯಸ್ಸು ಕೊಟ್ಟಿದ್ದಾನೋ ಅಷ್ಟೂ ಅವರಿಗೆ ಕೊಡಲಿ ಎಂದಿದ್ದಾರೆ. ಅವರು ನಮ್ಮ ಇಂಡಸ್ಟ್ರಿಗೆ ಗಾಡ್ ಫಾದರ್, ಅವರ ಆರೋಗ್ಯ ಸುಧಾರಿಸಲಿ ಎಂದು ಮಾತನಾಡಿದ್ದಾರೆ.
ಇದೇ ವೇಳೆ ಡೈರೆಕ್ಟರ್ ಪ್ರೇಮ್ ಮಾತನಾಡಿ, ಯುಎಸ್‌ನಲ್ಲಿ ಶಿವಣ್ಣನ ಆಪರೇಷನ್ ಇದೆ. ಅವರಿಗೆ ಒಳ್ಳೆಯದಾಗಲಿ. ಅವರು ಮತ್ತೆ ಎನರ್ಜಿಟಿಕ್ ಆಗಿ ಬರಬೇಕು ಎಂದಿದ್ದಾರೆ. ಇದೇ ವೇಳೆ ದರ್ಶನ್ ಜೊತೆಗಿನ ಸಿನಿಮಾ ಕುರಿತು ಮಾತನಾಡಿ, ಅವರೊಂದಿಗೆ ಸಿನಿಮಾ ಮಾಡೇ ಮಾಡ್ತೀನಿ. ಅದರಲ್ಲೇನು ಡೌಟ್ ಇಲ್ಲ ಎಂದರು.
ಅಂದಹಾಗೆ, ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಲಿರುವ ಶಿವರಾಜ್‌ಕುಮಾರ್‌ಗೆ ಅಲ್ಲಿ ಭಾರತ ಮೂಲದ ಮುರುಗೇಶ್ ನೇತೃತ್ವದ ತಜ್ಞವೈದ್ಯರ ತಂಡದಿಂದ ಚಿಕಿತ್ಸೆ ನಡೆಯಲಿದೆ. ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್ ನೆಕ್ಸ್ಟ್ ಜನರೇಶನ್ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯಾಗಿದ್ದು, ವೈದ್ಯಕೀಯ ಆರೈಕೆ, ಸಂಶೋಧನೆ, ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ.
ವಿಶ್ವಮಾನ್ಯತೆ ಪಡೆದ ಆಂಕೋಲಾಜಿಸ್ಟ್‌ಗಳೆಂದು ಕರೆಯಲಾಗುವ ತಜ್ಞ ವೈದ್ಯರ ತಂಡ ಇದೆ. ಇವರು ಜಗತ್ತಿನ ಉನ್ನತ ಕ್ಯಾನ್ಸರ್ ಕೇಂದ್ರಗಳಿಂದ ನೇಮಕಗೊಂಡ ವೈದ್ಯರುಗಳಾಗಿದ್ದು, ಇಲ್ಲಿ ಶಸ್ತ್ರ ಚಿಕಿತ್ಸೆಯಿಂದ ಗುಣವಾಗುವ ಪ್ರಮಾಣ ಹೆಚ್ಚಿದೆ. ಈ ಕಾರಣಕ್ಕೆ ಹಲವು ದೇಶಗಳಿಂದ ಚಿಕಿತ್ಸೆಗೆ ಇಲ್ಲಿಗೆ ಆಗಮಿಸುತ್ತಿದ್ದಾರೆ. ಅತ್ಯಾಧುನಿಕ ಸುಧಾರಿತ ಲೇಸರ್ ತಂತ್ರಜ್ಞಾನ ಒಂದೇ ಸ್ಥಳದಲ್ಲಿ ಲಭ್ಯವಿದ್ದು ಪ್ರತಿಯೊಂದು ವಿಧದ ಕ್ಯಾನ್ಸರ್ ಚಿಕಿತ್ಸೆಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಕಾರಣಕ್ಕೆ ಶಿವರಾಜ್‌ಕುಮಾರ್ ಭರ್ತಿ ಒಂದು ತಿಂಗಳುಗಳ ಕಾಲ ಅಲ್ಲೇ ಚಿಕಿತ್ಸೆ ಪಡೆದು ಸ್ವದೇಶಕ್ಕೆ ಮರಳಲಿದ್ದಾರೆ.