ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, 60% ಕಮಿಷನ್ ಆರೋಪಕ್ಕೆ ದಾಖಲಾತಿ ಕೊಡಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟರು. ಅದ್ಯಾರೋ ಹಂಗಾಮಿ ಅಧ್ಯಕ್ಷರು ಹೇಳಿಕೆ ಕೊಟ್ಟಿದ್ದಾರೆ ಅದಕ್ಕಿಂತ ದಾಖಲಾತಿ ಬೇಕಾ? ಸಿದ್ದರಾಮಯ್ಯ ಮಹಾನ್ ನಾಯಕರು ಪೇ ಸಿಎಂ ಎಂದು ಪೋಸ್ಟರ್ ಅಂಟಿಸಲು ಹೋಗಿದ್ರು. ಅವರು ಇಲ್ಲಿಯವರೆಗೆ ಯಾವ ದಾಖಲೆ ಇಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಕೆಂಪಣ್ಣ ಹೇಳಿದ್ರು ಕೆಂಪಣ್ಣ ಹೇಳಿದ್ರು ಅಂತ ಸಿದ್ದರಾಮಯ್ಯ ಹೇಳ್ತಾರೆ. ಈಗ ಕಂಟ್ರಾಕ್ಟರ್‌ಗಳು 60% ಬಗ್ಗೆ ಹೇಳ್ತಿಲ್ವಾ? ಅದಕ್ಕಿಂತ ಸಾಕ್ಷಿ ಬೇಕಾ? ಈ ಆಟ ಸರ್ಕಾರ ಬಿಟ್ಟು ಬಿಡಬೇಕು ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮಗ ಸೋತಿರೋದಕ್ಕೆ ಹತಾಶರಾಗಿ ಹೆಚ್‌ಡಿಕೆ 60% ಕಮಿಷನ್ ಆರೋಪ ಮಾಡ್ತಿದ್ದಾರೆ ಎಂಬ ಸಚಿವ ಕೃಷ್ಣಭೈರೇಗೌಡ ಹೇಳಿಕೆ ವಿಚಾರವಾಗಿ, ಮಗ ಸೋತಿರೋದಕ್ಕೆ ಹತಾಶೆಯಾಗಿದ್ದೇನೋ. ಇಲ್ಲವೋ ಅದನ್ನ ಬಿಟ್ಟು ಬಿಡಿ. ಮೊದಲು 60% ಕಮೀಷನ್‌ಗೆ ಉತ್ತರ ಹೇಳಪ್ಪ. ಕಂದಾಯ ಇಲಾಖೆ ಏನು ಸ್ವಚ್ಚವಾಗಿ ನಡೆಯುತ್ತಿದೆಯಾ? ಬೆಂಗಳೂರು AC ಪೋಸ್ಟ್‌ಗೆ ಎಷ್ಟು ದುಡ್ಡು ತಗೋತೀರಾ? ಎಷ್ಟು ಫಿಕ್ಸ್ ಮಾಡಿಕೊಂಡಿದ್ದೀರಾ? ಆ ಹಣ ಯಾರ್ ಯಾರಿಗೆ ಹೋಗುತ್ತೆ? ಏನ್ ಏನ್ ನಡೆಸ್ತೀರಾ ನಮಗೆ ಗೊತ್ತಿಲ್ವಾ? ಎಂದು ಕಂದಾಯ ಇಲಾಖೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದ ಆರೋಪಿಸಿದ್ದಾರೆ.