ಬೆಂಗಳೂರು: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಿಲ್ ಮಂಡನೆ ವಿಚಾರವಾಗಿ ಇವತ್ತು ಕ್ಯಾಬಿನೆಟ್‌ನಲ್ಲಿ ಮತ್ತೆ ಚರ್ಚೆಗೆ ಬರುವ ಸಾಧ್ಯತೆ ಇದೆ.
ಕಳೆದ ವಾರ ಕ್ಯಾಬಿನೆಟ್ ಒಪ್ಪಿಗೆಗೆ ತಾತ್ಕಾಲಿಕ ತಡೆ ನೀಡಿ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದರು. ಹಾಗಾಗಿ ಸಂಜೆ ನಡೆಯುವ ಕ್ಯಾಬಿನೆಟ್‌ನಲ್ಲಿ ಕಾನೂನು ತಜ್ಞರ ವರದಿ ಬಗ್ಗೆ ಸವಿಸ್ತಾರವಾಗಿ ಚರ್ಚೆ ಸಾಧ್ಯತೆ ಇದೆ.
ಅಂದಹಾಗೆ ಮ್ಯಾನೇಜ್ಮೆಂಟ್ ಹುದ್ದೆ, ನಾನ್-ಮ್ಯಾನೇಜ್ಮೆಂಟ್ ಹುದ್ದೆಗಳ ಮೀಸಲಾತಿ ಪರಿಶೀಲನೆ ಬಗ್ಗೆ ಚರ್ಚೆ ನಡೆಯಬಹುದು. ರಾಜ್ಯ ಸರ್ಕಾರದ ಬಿಲ್ ಮಂಡನೆಗೆ ಮುಂದಾಗಿದ್ದಕ್ಕೆ ಹಲವು ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದರು. ದೇಶದಲ್ಲೆಡೆ ಸದ್ದು ಮಾಡಿದ ಕಾರಣಕ್ಕಾಗಿ ಸರ್ಕಾರ ತಾತ್ಕಾಲಿಕ ತಡೆ ನಡೆ ಅನುಸರಿಸಿತ್ತು.
ಆದರೆ, ರಾಜ್ಯ ಸರ್ಕಾರದ ನಡೆಗೆ ಕನ್ನಡ ಸಂಘಟನೆಗಳು ಕೂಡ ಆಕ್ರೋಶ ವ್ಯಕ್ತಪಡಿಸಿದ್ದವು. ಹಾಗಾಗಿ ಸಾಧಕ-ಬಾಧಕಗಳನ್ನ ಚರ್ಚಿಸಿ ಮತ್ತೆ ಬಿಲ್ ಪುನರ್‌ಪರಿಶೀಲನೆ ಮಾಡಿ, ಇದೇ ಅಧಿವೇಶನದಲ್ಲಿ ಬಿಲ್ ಮಂಡಿಸಬೇಕೋ..? ಬೇಡ್ವೋ..? ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.