1000 ಕೋಟಿ ದಾಟಿದ ‘ಪುಷ್ಪ 2’- ಗಲ್ಲಾಪೆಟ್ಟಿಗೆಯಲ್ಲಿ ಅಲ್ಲು ಅರ್ಜುನ್ ಸಿನಿಮಾ ರಣಕೇಕೆ

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಇದೀಗ 1000 ಕೋಟಿ ರೂ. ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ. ಪ್ರಸ್ತುತ 6 ದಿನಗಳಲ್ಲಿ 1000 ಕೋಟಿ ರೂ. ಗಳಿಕೆ ಮಾಡಿದ ‘ಪುಷ್ಪ 2’ ಮುನ್ನಗ್ಗುತ್ತಿದೆ. ಈ ಕುರಿತು ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ತಿಳಿಸಿದೆ.

ಬಹುಭಾಷೆಗಳಲ್ಲಿ ‘ಪುಷ್ಪ 2’ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ. ಇದೀಗ ಈ ಚಿತ್ರ ವಿಶ್ವಾದ್ಯಂತ 1002 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನಿರ್ಮಾಣ ಸಂಸ್ಥೆ ತಿಳಿಸಿದೆ. ಈ ಮೂಲಕ ಚಿತ್ರತಂಡ ಸಕ್ಸಸ್ ಅನ್ನು ಸಂಭ್ರಮಿಸುತ್ತಿದೆ. ಸಾವಿರ ಕೋಟಿ ಸರದಾರನಾಗಿ ಪುಷ್ಪರಾಜ್ ಸಕ್ಸಸ್ ಗಳಿಸಿದ್ದಾರೆ.

ಇನ್ನೂ ಅಲ್ಲು ಅರ್ಜುನ್ ನಟನೆ ಮತ್ತು ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್ ಫ್ಯಾನ್ಸ್‌ಗೆ ಇಷ್ಟವಾಗಿದೆ. ಶ್ರೀವಲ್ಲಿಯಾಗಿ ರಶ್ಮಿಕಾ ನಟನೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಶ್ರೀಲೀಲಾ ಕಿಸ್ಸಿಕ್ ಸಾಂಗ್, ಫಹಾದ್ ಫಾಸಿಲ್ ನಟನೆ, ಪುಷ್ಪರಾಜ್ ಜೊತೆಗಿನ ತಾರಕ್ ಪೊನ್ನಪ್ಪ ಸಂಘರ್ಷ ಇವೆಲ್ಲವೂ ಸಿನಿಮಾದಲ್ಲಿ ಹೈಲೆಟ್ ಆಗಿದೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ತಾರಕ್ ನಟನೆ ಈ ಸಿನಿಮಾದಲ್ಲಿ ತಿರುವು ನೀಡಲಿದೆ. ಸುಕುಮಾರ್ ನಿರ್ದೇಶನವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಅಂದಹಾಗೆ, ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಶ್ರೀಲೀಲಾ (Sreeleela), ಡಾಲಿ, ತಾರಕ್, ಅನಸೂಯ, ಜಗಪತಿ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ.