ಮುಂಬೈ ಡಿಸೆಂಬರ್ 11: ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಮಂಗಳವಾರ ರೈಲ್ವೆ ನಿಲ್ದಾಣದ ಹೊರಗಿನ ಬಿಆರ್ ಅಂಬೇಡ್ಕರ್ ಪ್ರತಿಮೆ ಬಳಿ ವ್ಯಕ್ತಿಯೊಬ್ಬರು ಆ ಪ್ರತಿಮೆಯ ಕೈಯಲ್ಲಿದ್ದ ಸಂವಿಧಾನದ ಪ್ರತಿಕೃತಿಯನ್ನು ಧ್ವಂಸಗೊಳಿಸಿದ್ದರು. ಇದು ತೀವ್ರ ಹಿಂಸಾಚಾರಕ್ಕೆ ಕಾರಣವಾಗಿದೆ.
ಈ ಘಟನೆಯ ಬಗ್ಗೆ ಸುದ್ದಿ ಹರಡಿದ ನಂತರ ಸುಮಾರು 200 ಜನರು ಪ್ರತಿಮೆ ಬಳಿ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ಗುಂಪನ್ನು ಚದುರಿಸಲು ಪೊಲೀಸರು ಆಗಮಿಸುತ್ತಿದ್ದಂತೆ ಗೊಂದಲದ ಗೂಡಾಗಿ ಕಲ್ಲು ತೂರಾಟ ನಡೆಸಲಾಯಿತು. ಇದು ಶೀಘ್ರದಲ್ಲೇ ಹಿಂಸಾಚಾರವನ್ನು ಪ್ರಚೋದಿಸಿತು. ಜನರು ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ, ವಾಹನದ ಹಿಂದೆ ಓಡುತ್ತಿರುವ ಫೋಟೋಗಳ ವೈರಲ್ ಆಗಿವೆ.