ಜಾಫಾದಲ್ಲಿ ಉಗ್ರರಿಂದ ಮನ ಬಂದಂತೆ ಗುಂಡಿನ ದಾಳಿಗೆ 8 ಬಲಿ

ಟೆಲ್‌ ಅವಿವ್‌: ಮಂಗಳವಾರ ತಡರಾತ್ರಿ ಮಧ್ಯ ಇಸ್ರೇಲ್‌ನ ಟೆಲ್ ಅವಿವ್‌ನ ಜಾಫಾ ಪಟ್ಟಣದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ.

ಈ ಇಬ್ಬರು ದಾಳಿಕೋರರು ಮನ ಬಂದಂತೆ ಗುಡು ಹಾರಿಸಿದ್ದಾರೆ. ಇಬ್ಬರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ. ಈ ಇಬ್ಬರು ವೆಸ್ಟ್‌ಬ್ಯಾಂಕ್‌ನ ಹೆಬ್ರಾನ್‌ನಿಂದ ಆಗಮಿಸಿದ್ದರು ರಂದು ರಕ್ಷಣಾ ಪಡೆ ತಿಳಿಸಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ 8 ಮಂದಿ ಮೃತಪಟ್ಟಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಟ್ರಾಫಿಕ್ ಕ್ರಾಸಿಂಗ್ ಬಳಿ ಗುಂಡಿನ ದಾಳಿ ನಡೆದ ನಂತರ ಹೆಚ್ಚಿನ ಸಾವುನೋವುಗಳು ಸಂಭವಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ನಿಲ್ದಾಣದಲ್ಲಿ ಇಬ್ಬರು ಮನಬಂದಂತೆ ಗುಂಡು ಹಾರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.