ಮುಂಡಗೋಡ: ತಾಲೂಕಿನ ಸನವಳ್ಳಿ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದು ಹರಿಯುತ್ತಿದೆ.
ಸತತವಾಗಿ ಸುರಿದ ಮಳೆಯಿಂದ ಮಳಗಿಯ ಧರ್ಮಾ ಜಲಾಶಯ, ಬಾಚಣಕಿ ಜಲಾಶಯ ಹಾಗೂ ಅತ್ತಿವೇರಿ ಜಲಾಶಯಗಳು ಭರ್ತಿಯಾಗಿದೆ. ಭಾನುವಾರ ಸನವಳ್ಳಿ ಜಲಾಶಯ ಭರ್ತಿಯಾಗಿದೆ.
ಸನವಳ್ಳಿ ಜಲಾಶಯವು ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಜಲಾಶಯವಾಗಿದೆ ಹಾಗೂ ಆ ಭಾಗದ ನೂರಾರು ಎಕರೆ ಜಮೀನುಗಳಿಗೆ ವ್ಯವಸಾಯಕ್ಕೆ ಇದರ ನೀರು ಹರಿಯುತ್ತದೆ. ಜಲಾಶಯ ತುಂಬಿ ಕೋಡಿ ಹರಿಯುತ್ತಿರುವುದರಿಂದ ಪಟ್ಟಣದ ಜನತೆ ಹಾಗೂ ಸನವಳ್ಳಿ ಗ್ರಾಮದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಕೋಡಿ ಬಿದ್ದ ಸ್ಥಳಗಳಕ್ಕೆ ಸಾರ್ವಜನಿಕರು ತೆರಳಿ ವೀಕ್ಷಿಸುತ್ತಿದ್ದಾರೆ.