ಹೊನ್ನಾವರ ಡಿಸೆಂಬರ್ 19: ಹೊನ್ನಾವರ ತಾಲೂಕಾ ದಂಡಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ತಹಶೀಲ್ದಾರ್ ರವಿರಾಜ್ ದೀಕ್ಷಿತ್ ಅವರನ್ನು ಕಾರವಾರ ಮುನ್ಸಿಪಲ್ ತಹಶೀಲ್ದಾರ ಸ್ಥಾನಕ್ಕೆ ಸ್ಥಳ ನಿಯುಕ್ತಿಗೊಳಿಸಲಾಗಿದೆ. ರವಿರಾಜ್ ದೀಕ್ಷಿತ್ ಇವರ ಸ್ಥಾನಕ್ಕೆ ಪ್ರವೀಣ ಎಸ್ ಕರಾಂಡೆ ಅವರನ್ನು ನೇಮಕಗೊಳಿಸಲಾಗಿರುವ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶವಾಗಿದೆ.

ಕಳೆದ ಎರಡ್ಮೂರು ತಿಂಗಳಿನಿಂದ ದೀಕ್ಷಿತ್ ಅವರ ವರ್ಗಾವಣೆ ವಿಚಾರ ಮುನ್ನಲೆಯಲ್ಲಿತ್ತು. ಕೆಡಿಪಿ ಸಭೆಯಲ್ಲಿ ಸಚಿವ ಮಂಕಾಳ ವೈದ್ಯರು ತಹಶೀಲ್ದಾರರ ಕಾರ್ಯವೈಖರಿ ಬಗ್ಗೆ ಭೇಸರ ವ್ಯಕ್ತಪಡಿಸಿದ್ದರು. ತದನಂತರ ದೀಕ್ಷಿತ್ ತಮ್ಮ ಕರ್ತವ್ಯದಲ್ಲಿ ಎಚ್ಚೆತ್ತುಕೊಂಡು ಸಾರ್ವಜನಿಕ ಕುಂದುಕೊರತೆ ಆಲಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಕಳೆದ 15 ದಿನದ ಹಿಂದೆ ಮತ್ತೆ ತಹಶೀಲ್ದಾರರ ವರ್ಗಾವಣೆ ಬಗ್ಗೆ ವಿಷಯ ಚರ್ಚೆಯಲ್ಲಿತ್ತು. ಇದೀಗ ಅಧಿಕೃತ ವರ್ಗಾವಣೆ ಆದೇಶ ಬಂದಿದ್ದು ಎಲ್ಲಾ ಗೊಂದಲಗಳಿಗೆ ತೆರೆಎಳೆದಂತಾಗಿದೆ.