ಭಟ್ಕಳ: ಹರ್ ಘರ್ ತಿರಂಗಾ ಹಿನ್ನೆಲೆ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟ್ ಸಂಸ್ಥೆ ಆಯೋಜಿಸಿದ್ದ ಪಥಸಂಚಲನ ಮೆರವಣಿಗೆಯನ್ನು ಶಾಸಕ ಸುನೀಲ್ ನಾಯ್ಕ ದಿ. ನ್ಯೂ. ಇಂಗ್ಲೀಷ್ ಶಾಲೆ ಮುಂಭಾಗದಲ್ಲಿ ಚಾಲನೆ ನೀಡಿದರು.
ಭಾರತ ದೇಶವು ಸ್ವಾತಂತ್ರ್ಯ ಪಡೆದು 75ನೇ ವರ್ಷ ಪೂರೈಸಿರುವ ಅಮೃತಮಹೋತ್ಸವದ ಸಂಭ್ರಮದ ಹಿನ್ನೆಲೆ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಭಟ್ಕಳ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟ್ ಸಂಸ್ಥೆ ಆಯೋಜಿಸಿತ್ತು. ದಿ. ನ್ಯೂ. ಇಂಗ್ಲೀಷ್ ಶಾಲೆಯಿಂದ ಆರಂಭವಾದ ಮೆರವಣಿಗೆ ಶಂಸುದ್ದಿನ್ ಸರ್ಕಲನಿಂದ ತಾಲೂಕಾ ಪಂಚಾಯತ ಮಾರ್ಗವಾಗಿ ಅರ್ಬನ್ ಬ್ಯಾಂಕ್ ರಸ್ತೆಯ ಮುಖಾಂತರ ಪೊಲೀಸ್ ಠಾಣೆ ಎದುರಿನಿಂದ ಪುನಃ ದಿ.ನ್ಯೂ.ಇಂಗ್ಲೀಷ್ ಶಾಲೆ ಆವರಣಕ್ಕೆ ಹೋಗಿ ಮುಕ್ತಾಯಗೊಂಡಿತು. ಮೆರವಣಿಗೆ ಉದ್ದಕ್ಕೂ ನೂರಾರು ಕರಾಟೆ ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಶೋಟೊಕಾನ್ ಕರಾಟೆಯ ಅಧ್ಯಕ್ಷರಾದ ಈಶ್ವರ ನಾಯ್ಕ, ಉಪಧ್ಯಾಕ್ಷರಾದ ಸುರೇಶ ಮೊಗೇರ, ಚಂದ್ರು ನಾಯ್ಕ, ಮನೋಜ ನಾಯ್ಕ, ನಾಗರಾಜ ದೇವಾಡಿಗ, ನಾಗಶ್ರೀ ನಾಯ್ಕ, ಗೋಪಾಲ ನಾಯ್ಕ ಹಾಗೂ ಮುಂತಾದವರು ಭಾಗವಹಿಸಿದ್ದರು.