ಈ ಸಲ ಕಪ್​ ನಮ್ದೆನಾ?: ಹೀಗಿದೆ ನೋಡಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ

Full List of RCB Players: 2025ರಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)​ ಟೂರ್ನಿಗೆ ಆರ್​ಸಿಬಿ ತನ್ನ ತಂಡವನ್ನು ಪ್ರಕಟಿಸಿದೆ. ಈ ಬಾರಿ ಉಳಿಸಿಕೊಂಡಿರುವ ಮತ್ತು ಕೈಬಿಟ್ಟಿರುವ ಆಟಗಾರರು ಇದರಲ್ಲಿದ್ದಾರೆ. ಪ್ರಸಕ್ತ ಸಾಲಿನ ಹರಾಜಿಗೆ 83 ಕೋಟಿ ರೂಪಾಯಿಗಳ ಬಜೆಟ್‌ನೊಂದಿಗೆ ಆಗಮಿಸಿದ್ದ, ಆರ್‌ಸಿಬಿ ಅನೇಕ ಉತ್ತಮ ಆಟಗಾರರನ್ನು ಪಡೆದಿದೆ.

ಐಪಿಎಲ್ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನ.24 ಮತ್ತು 25ರ ಎರಡು ದಿನಗಳ ಕಾಲ ನಡೆಯಿತು. ಮೆಗಾ ಹರಾಜು ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಹರಾಜಿನಲ್ಲಿ ಹಿರಿಯ ಮತ್ತು ಪ್ರತಿಭಾವಂತ ಆಟಗಾರರ ಖರೀದಿ ಪ್ರಕ್ರಿಯೆ ನಡೆಯುತ್ತದೆ. ಈ ಬಾರಿ ಮೆಗಾ ಹರಾಜಿನಲ್ಲಿ ಎಲ್ಲರ ಕಣ್ಣುಗಳು ಜನಪ್ರಿಯ ಐಪಿಎಲ್ ತಂಡ ಆರ್‌ಸಿಬಿ ಮೇಲಿತ್ತು.

ಹರಾಜಿಗೆ ಮೊದಲು ಆರ್‌ಸಿಬಿ ಕೇವಲ ಮೂವರು ಆಟಗಾರರನ್ನು ಉಳಿಸಿಕೊಂಡಿತ್ತು. ಇದರಲ್ಲಿ ವಿರಾಟ್ ಕೊಹ್ಲಿ ಸೇರಿದ್ದು ಅವರನ್ನು 21 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು. ಐಪಿಎಲ್ ಇತಿಹಾಸದಲ್ಲಿ 20 ಕೋಟಿ ರೂ.ಗಿಂತ ಹೆಚ್ಚು ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದರು. ಮುಂದಿನ ಸೀಸನ್‌ನಿಂದ ಕೊಹ್ಲಿ ಮತ್ತೆ ತಂಡದ ಕ್ಯಾಪ್ಟನ್‌ ಆಗಬಹುದು ಎಂಬ ವರದಿಗಳಿವೆ. ಇನ್ನುಳಿದಂತೆ, ರಜತ್ ಪಾಟಿದಾರ್ ಅವರನ್ನು 11 ಕೋಟಿ ರೂ. ಮತ್ತು ಯಶ್ ದಯಾಳ್ ಅವರನ್ನು 4 ಕೋಟಿ ರೂ.ಗೆ ಆರ್‌ಸಿಬಿ ಉಳಿಸಿಕೊಂಡಿದೆ.

ಮೆಗಾ ಹರಾಜಿನಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ರಸಿಖ್ ದಾರ್ ಮತ್ತು ಸುಯ್ಯಾಶ್ ಶರ್ಮಾ ಅವರನ್ನು ಆರ್‌ಸಿಬಿ ಖರೀದಿಸಿದೆ. 8 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 19 ಆಟಗಾರರು ಇದರಲ್ಲಿದ್ದಾರೆ. ಈಗ ತಂಡದಲ್ಲಿ ಒಟ್ಟು 25 ಆಟಗಾರರಿದ್ದು, 22 ಆಟಗಾರರ ಪಟ್ಟಿ ಇಂತಿದೆ.

ಕ್ರಮ ಸಂಖ್ಯೆಆಟಗಾರರುಖರೀದಿಸಿದ ಮೌಲ್ಯ(ರೂಪಾಯಿಗಳಲ್ಲಿ)
1ವಿರಾಟ್ ಕೊಹ್ಲಿ21 ಕೋಟಿ
2ರಜತ್ ಪಾಟಿದಾರ್11 ಕೋಟಿ
3ಯಶ್ ದಯಾಳ್5 ಕೋಟಿ
4ಲಿಯಾಮ್ ಲಿವಿಂಗ್ಸ್ಟೋನ್8.75 ಕೋಟಿ
5ಫಿಲ್ ಸಾಲ್ಟ್11.50 ಕೋಟಿ
6ಜಿತೇಶ್ ಶರ್ಮಾ11.00 ಕೋಟಿ
7ಜೋಶ್ ಹ್ಯಾಜಲ್‌ವುಡ್12.50 ಕೋಟಿ
8ರಸಿಖ್ ದಾರ್6 ಕೋಟಿ
9ಸುಯ್ಯಾಶ್ ಶರ್ಮಾ2.60 ಕೋಟಿ
10ಕೃನಾಲ್ ಪಾಂಡ್ಯ6.75 ಕೋಟಿ
11ಭುವನೇಶ್ವರ್ ಕುಮಾರ್10.75 ಕೋಟಿ
12ಸ್ವಪ್ನಿಲ್ ಸಿಂಗ್50 ಲಕ್ಷ
13ಟಿಮ್ ಡೇವಿಡ್3 ಕೋಟಿ
14ರೊಮಾರಿಯೋ ಶೆಫರ್ಡ್1.5 ಕೋಟಿ
15ನುವಾನ್ ತುಷಾರ್​1.4 ಕೋಟಿ
16ಜೇಕಬ್ ಬೆತೆಲ್​2.6 ಕೋಟಿ
17ಮನೋಜ್ ಭಾಂಡಗೆ30 ಲಕ್ಷ
18ದೇವದತ್ ಪಡಿಕ್ಕಲ್2 ಕೋಟಿ
19ಸ್ವಸ್ತಿಕ್ ಚಿಕಾರ30 ಲಕ್ಷ
20ಲುಂಗಿ ಎನ್​ಗಿಡಿ1 ಕೋಟಿ
21ಅಭಿನಂದನ್ ಸಿಂಗ್30 ಲಕ್ಷ
22ಮೋಹಿತ್ ರಾಠಿ30 ಲಕ್ಷ