
ಬೆಂಗಳೂರು, ಏಪ್ರಿಲ್ 24: ಭಾರತದಲ್ಲಿ ನಿನ್ನೆ ಭಾರೀ ಇಳಿಕೆಯಾಗಿದ್ದ ಚಿನ್ನದ ಬೆಲೆ ಇವತ್ತು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಆಗಿದೆ. ಆಭರಣ ಚಿನ್ನದ ಬೆಲೆ ಗ್ರಾಮ್ಗೆ 10 ರೂನಷ್ಟು ಕಡಿಮೆ ಆಗಿದೆ. ಆದರೆ, ವಿದೇಶಗಳಲ್ಲಿ ಚಿನ್ನದ ಬೆಲೆ ಇವತ್ತೂ ತೀವ್ರ ಮಟ್ಟದಲ್ಲಿ ಕುಸಿದಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ನಿನ್ನೆಯಿಂದ ಚಿನಿವಾರ ಮಾರುಕಟ್ಟೆಯಲ್ಲಿ ಪ್ರಾಫಿಟ್ ಬುಕಿಂಗ್ ನಡೆಯುತ್ತಿರಬಹುದು. ಅಂದರೆ, ಹೂಡಿಕೆದಾರರು ಲಾಭಕ್ಕಾಗಿ ಚಿನ್ನ ಮಾರುತ್ತಿರಬಹುದು. ಹೀಗಾಗಿ, ಬೆಲೆ ಇಳಿಕೆ ಆಗಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆಯ ಸ್ಥಿರತೆ ಮುಂದುವರಿದಿದೆ ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 90,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 98,240 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 90,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,100 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 24ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,050 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 98,240 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,680 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,050 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 98,240 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 90,050 ರೂ
- ಚೆನ್ನೈ: 90,050 ರೂ
- ಮುಂಬೈ: 90,050 ರೂ
- ದೆಹಲಿ: 90,200 ರೂ
- ಕೋಲ್ಕತಾ: 90,050 ರೂ
- ಕೇರಳ: 90,050 ರೂ
- ಅಹ್ಮದಾಬಾದ್: 90,100 ರೂ
- ಜೈಪುರ್: 90,200 ರೂ
- ಲಕ್ನೋ: 90,200 ರೂ
- ಭುವನೇಶ್ವರ್: 90,050 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 4,700 ರಿಂಗಿಟ್ (91,760 ರುಪಾಯಿ)
- ದುಬೈ: 3,680 ಡಿರಾಮ್ (85,830 ರುಪಾಯಿ)
- ಅಮೆರಿಕ: 995 ಡಾಲರ್ (85,830 ರುಪಾಯಿ)
- ಸಿಂಗಾಪುರ: 1,365 ಸಿಂಗಾಪುರ್ ಡಾಲರ್ (88,920 ರುಪಾಯಿ)
- ಕತಾರ್: 3,695 ಕತಾರಿ ರಿಯಾಲ್ (86,820 ರೂ)
- ಸೌದಿ ಅರೇಬಿಯಾ: 3,740 ಸೌದಿ ರಿಯಾಲ್ (85,410 ರುಪಾಯಿ)
- ಓಮನ್: 388 ಒಮಾನಿ ರಿಯಾಲ್ (86,320 ರುಪಾಯಿ)
- ಕುವೇತ್: 300.60 ಕುವೇತಿ ದಿನಾರ್ (84,020 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 10,100 ರೂ
- ಚೆನ್ನೈ: 11,100 ರೂ
- ಮುಂಬೈ: 10,100 ರೂ
- ದೆಹಲಿ: 10,100 ರೂ
- ಕೋಲ್ಕತಾ: 10,100 ರೂ
- ಕೇರಳ: 11,100 ರೂ
- ಅಹ್ಮದಾಬಾದ್: 10,100 ರೂ
- ಜೈಪುರ್: 10,100 ರೂ
- ಲಕ್ನೋ: 10,100 ರೂ
- ಭುವನೇಶ್ವರ್: 11,100 ರೂ
- ಪುಣೆ: 10,100



