ಹೊನ್ನಾವರ ಅ.22 : ಹೊನ್ನಾವರ ತಾಲೂಕಿನ ಅರೇಅಂಗಡಿ ಗ್ರಾಮದ ಹೈಸ್ಕೂಲ್ ಮುಂಭಾಗಲ್ಲಿರುವ ಶೆಡ್ಡಿನ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಹೊನ್ನಾವರ ಪೋಲಿಸರು ಆರೋಪಿತಳಿಂದ 1786 ರೂ ಬೆಲೆಯ ವಿವಿಧ ಮಾದರಿಯ ಮದ್ಯ ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು 50 ವರ್ಷದ ಲಲಿತಾ ಅಶೋಕ ಹುಲಸ್ವಾರ ಎಂದು ತಿಳಿದು ಬಂದಿದೆ. ಹೊನ್ನಾವರ ತಾಲೂಕಿನ ಅರೇಅಂಗಡಿ ಗ್ರಾಮದ ಹೈಸ್ಕೂಲ್ ಎದುರಿಗೆ ಇರುವ ಪಾನಬೀಡಾ ಅಂಗಡಿ ಹಿಂದಿನ ಶೆಡ್ಡಿನ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹೊನ್ನಾವರ ಪೋಲಿಸರು ಠಾಣೆಯ ಪಿಎಸ್ಐ ರಾಜಶೇಖರ ವಂದಲಿ ನೇತೃತ್ವದ ತಂಡ ದಾಳಿ ಮಾಡಿ ಆರೋಪಿತಳ ತಾಬಾದಿಂದ ಒಟ್ಟೂ 1786 ರೂ ಬೆಲೆಯ ವಿವಿಧ ಮಾದರಿಯ ಮದ್ಯವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ವೇಳೆ ಪಿ,ಎಸ್,ಐ ರಾಜಶೇಖರ ವಂದಲಿ, ಎಎಸ್ಐ ಭಗವತಿ ಕಾಸ್ಮಾಡಿ, ಹಾಗೂ ಸಿಬ್ಬಂದಿಗಳಾದ, ಸುರೇಶ ಮುರಡಿ, ರವಿ ನಾಯ್ಕ, ಸಾವಿತ್ರಿ ಗೋಪಾಲಪುರದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ರು. ಇವರ ಈ ಕಾರ್ಯಕ್ಕೆ ಉ.ಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಎಂ ನಾರಾಯಣ ಅಭಿನಂದನೆ ಸಲ್ಲಿಸಿದ್ದಾರೆ.