ಮುಳುಗು ತಜ್ಞ ಈಶ್ವರ್‌ ಮಲ್ಪೆ ಇಬ್ಬರು ಮಕ್ಕಳು ಕೇರಳ ಆಸ್ಪತ್ರಗೆ ದಾಖಲು- ಚಿಕಿತ್ಸೆಗೆ ನೆರವಾದ ಕೇರಳದ ವಿವಿಧ ಸಂಘ ಸಂಸ್ಥೆಗಳು

ಕಾರವಾರ : ಶಿರೂರು ಗುಡ್ಡಕುಸಿತದ ಕಾರ್ಯಚರಣೆಯಲ್ಲಿ ತನ್ನ ಪ್ರಾಣದ ಹಂಗನ್ನು ತೊರೆದು ನಾಪತ್ತೆಯಾಗಿದ್ದವರ ಪತ್ತೆಗಾಗಿ ಗಂಗಾವಳಿ ನದಿಯಲ್ಲಿ ಕಾರ್ಯ ನಡೆಸಿರುವ ಈಶ್ವರ ಮಲ್ಪೆ ಅವರ ಇಬ್ಬರೂ ಮಕ್ಕಳಿಗೆ ಕೇರಳದ ವಿವಿಧ ಸಂಘ ಸಂಸ್ಥೆಗಳು ಮುಂದೆ ಬಂದಿದ್ದು, ಕೇರಳದ ಕೋಯಿಕ್ಕೋಡ್‌ನ ಮಲ್ಟಿ ಸ್ಪೆಶಾಲಿಟಿ ಮೈತ್ರಿ ಆಸ್ಪತ್ರೆಯಲ್ಲಿ ಈಶ್ವರ ಮಲ್ಪೆ ಅವರ ಇಬ್ಬರೂ ಮಕ್ಕಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಅನಾರೋಗ್ಯಕ್ಕೆ ಒಳಗಾಗಿರುವ ಮಲ್ಪೆ ಅವರ ಮಕ್ಕಳಾದ ಕಾರ್ತಿಕ್ ಹಾಗೂ ಬ್ರಾಪ್ತಿ ಇವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿತ್ತು. ದೊಡ್ಡಮಟ್ಟದ ಚಿಕಿತ್ಸೆ ಬೇಕಾಗಿರುವುದರಿಂದ ಚಿಕಿತ್ಸೆ ಹಣ ಸಂಗ್ರಹಿಸುವುದು ಕಷ್ಟವಾಗಿತ್ತು. ಶಿರೂರು ಗುಡ್ಡಕುಸಿಯದಲ್ಲಿ ನಾಪತ್ತೆಯಾಗಿದ್ದ, ಕೇರಳ ಮೂಲದ ಅರ್ಜುನ್ ಪತ್ತೆಗಾಗಿ ಈಶ್ವರ ಮಲೈ ಅವರು ಪಟ್ಟಿರುವ ಶ್ರಮಕ್ಕೆ ಕೇರದಲ್ಲಿ ಮಲ್ಪೆ ಅವರ ಅಭಿಮಾನಿಗಳು ಹೆಚ್ಚಾಗಿದ್ದಾರೆ.

ಇದರಿಂದ ಈಶ್ವರ ಮಲ್ಪೆ ಅವರ ಮಕ್ಕಳ ಆರೋಗ್ಯ ಸ್ಥಿತಿಯನ್ನ ವಿಚಾರಿಸಿದ ಕೇರಳದ ಸಂಘ ಸಂಸ್ಥೆಗಳು ಹಣ ಸಂಗ್ರಹಿಸಿ ಇದೀಗ ಈಶ್ವರ ಮಲ್ಪೆ ಅವರ ಇಬ್ಬರೂ ಮಕ್ಕಳ ಚಿಕಿತ್ಸೆಗೆ ಮುಂದಾಗಿದೆ. ಆ ಇಬ್ಬರ ಚಿಕಿತ್ಸೆ ಯಶಸ್ವಿಯಾಗಿಲಿ ಎನ್ನುವುದು ನಮ್ಮ ಹಾರೈಕೆ.