ರಾಜ್ಯದಲ್ಲಿ ಮೂರನೆ ಮುಖ್ಯಮಂತ್ರಿ ಎಂಬುವುದು ಕಾಂಗ್ರೆಸ್ ಭ್ರಮೆ – ಶಿವರಾಮ ಹೆಬ್ಬಾರ್

ಮುಂಡಗೋಡ: ರಾಜ್ಯದಲ್ಲಿ ಮೂರನೆ ಮುಖ್ಯಮಂತ್ರಿ ಎಂಬುವುದು ಕಾಂಗ್ರೆಸ್ ನ ಭ್ರಮೆಯಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

ಶನಿವಾರ ಪಟ್ಟಣ ಪಂಚಾಯತ ಆವರಣದಲ್ಲಿ ಮಾತನಾಡಿ, ಕರ್ನಾಟಕದಲ್ಲಿ ನಮ್ಮ ನಾಡಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಯಾರೆಲ್ಲ ಬ್ರಹ್ಮಲೋಕದಲ್ಲಿ ತೇಲಾಡುತ್ತಿದ್ದಾರೆ ಅವರೆಲ್ಲ ನಿದ್ದೆಯ ಬಂಪರನಲ್ಲಿ ಮಾತನಾಡುತ್ತಿದ್ದಾರೆ. ಯಾವ ಕಾರಣಕ್ಕೂ ಮುಖ್ಯಮಂತ್ರಿ ಬೊಮ್ಮಾಯಿ ಬದಲಾವಣೆಯ ಪ್ರಶ್ನೆಯೇ ಇಲ್ಲಾ. ಈಗಾಗಲೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ನಾಯಕರು ಬಸವರಾಜ್ ಬೊಮ್ಮಾಯಿ ಮುಂದೆವರೆಯುವ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ ಎಂದು ಹೇಳಿದರು.