ಗದಗದಲ್ಲಿ ಮಾನವ ಸರಪಳಿ ವೇಳೆ ಹೆಜ್ಜೇನು ದಾಳಿ

ಗದಗ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಹಿನ್ನೆಲೆಯಲ್ಲಿ ಮಾನವ ಸರಪಳಿ ವೇಳೆ ಹೆಜ್ಜೇನು ದಾಳಿ ಮಾಡಿದೆ. ಇಬ್ಬರು ಶಿಕ್ಷಕಿಯರ ಮೇಲೆ ಜೇನು ದಾಳಿ ಮಾಡಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ಘಟನೆ ನಡೆದಿದೆ. ಮುಖ, ತಲೆ, ಕೈಗೆ ಹೆಜ್ಜೇನು ಕಚ್ಚಿದ್ದು, ಗಾಯವಾಗಿದೆ. ಹೆಜ್ಜೇನು ದಾಳಿ ವೇಳೆ ಜನರೆಲ್ಲರೂ ದಿಕ್ಕಾಪಾಲಾಗಿ ಓಡಿದ್ದಾರೆ. ಶಿಗ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಸರಸ್ವತಿ ಗುಡಿಸಾಗರ, ಸರೋಜಾ ದಿಂಡೂರು ಅಸ್ವಸ್ಥಗೊಂಡ ಶಿಕ್ಷಕಿಯರು. ಮಾನವೀಯತೆ ತೋರಿದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.