ಬೆಂಗಳೂರು, ಆಗಸ್ಟ್.31: ಸಿಎಂ ಸಿದ್ದರಾಮಯ್ಯನವರ ಕನಸಿನ ಯೋಜನೆ ಅನ್ನಭಾಗ್ಯ ಯೋಜನೆ ಜಾರಿಗೆ ಒಂದಿಲ್ಲೊಂದು ವಿಗ್ನ ಎದುರಾಗುತ್ತಿದ್ದು, ಕೇಂದ್ರದಿಂದ ಅಕ್ಕಿ ಸಿಗುತ್ತಿದೆ. ಇದೀಗ ಖುಷಿ ಪಡುವ ಹೊತ್ತಿಗೆ ಮತ್ತೆ ಅಕ್ಕಿಯ ಕೊರತೆ ಎದುರಾಗಿದ್ದು, ಅಕ್ಕಿಗಾಗಿ ಮತ್ತೆ ಆಹಾರ ನಾಗರೀಕ ಸರಬರಾಜು ಇಲಾಖೆಯ ಸಚಿವರು ಕೇಂದ್ರ ಸಚಿವರನ್ನ ಭೇಟಿ ಮಾಡಲು ಮುಂದಾಗಿದ್ದಾರೆ.
ಅನ್ನಭಾಗ್ಯ ಯೋಜನೆಗೆ ಕೇಂದ್ರದಿಂದ 2.36 ಲಕ್ಷ ಟನ್ ಅಕ್ಕಿ ನೀಡಿದ್ರೂ ಅನ್ನಭಾಗ್ಯ ಯೋಜನೆಗೆ ಮತ್ತೆ ಅಕ್ಕಿ ಕೊರತೆ ಎದುರಾಗಿದೆ. ಈ ತಿಂಗಳು ಡಿಬಿಟಿ ಹಣದ ಬದಲು ಅಕ್ಕಿಯನ್ನೆ ಕೊಡಲು ನಿರ್ಧರಿದ್ದ ಆಹಾರ ನಾಗರೀಕ ಸರಬರಾಜು ಇಲಾಖೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಒಂದೂವರೆ ಕೋಟಿ ಬಿಪಿಎಲ್ ಫಲಾನುಭವಿಗಳ ಪೈಕಿ 13 ಲಕ್ಷದ 45 ಸಾವಿರ ಫಲಾನುಭವಿಗಳಿಗೆ ಅಕ್ಕಿಯ ಕೊರತೆ ಎದುರಾಗಿದೆ.
ಸಧ್ಯ ಕೇಂದ್ರ ಸರ್ಕಾರ 2.36 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನ ಮುಂದಿನ ಮಾರ್ಚ್ ವರೆಗೂ ಕೊಡಲು ನಿರ್ಧರಿಸಿದೆ. ಆದ್ರೆ ಇಷ್ಟು ಅಕ್ಕಿ ಕೊಟ್ರು 13 ಲಕ್ಷದ 45 ಸಾವಿರ ಜನರಿಗೆ ಅಕ್ಕಿಯ ಕೊರತೆ ಎದುರಾಗಿದ್ದು, ಮತ್ತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಚಿವರನ್ನ ಭೇಟಿಯಾಗಲು ಆಹಾರ ನಾಗಾರೀಕ ಸರಬರಾಜು ಇಲಾಖೆ ಮುಂದಾಗಿದ್ದು, 2.36 ಲಕ್ಷ ಟನ್ ಅಕ್ಕಿಯ ಜೊತೆಗೆ ಮತ್ತೆ 20% ರಷ್ಟು ಹೆಚ್ಚು ಅಕ್ಕಿಯನ್ನ ಕೇಂದ್ರ ಸರ್ಕಾರ ಕೊಟ್ರೆ ಸೆಪ್ಟೆಂಬರ್ ತಿಂಗಳಿನಿಂದಲೇ ಅನ್ನಭಾಗ್ಯದ 5 ಕೆಜಿ ಅಕ್ಕಿಭಾಗ್ಯವು ಆರಂಭವಾಗಲಿದೆ.
ಇನ್ನು, ಅಕ್ಕಿ ಕೊಡ್ತೀವಿ ಅಂತ ಹೇಳಿ ಹಣ ಆರಂಭಮಾಡಿದ್ರು. ಆದ್ರೆ ಎರಡು ತಿಂಗಳಿಂದ ಡಿಬಿಟಿ ಹಣವು ಬಂದಿಲ್ಲ. ಹೀಗಾಗಿ ಅನ್ನಭಾಗ್ಯದ ಹಣವನ್ನಾದ್ರು ಹಾಕಿ. ಈ ಹಣ ಹಾಕಿದ್ರೆ ತುಂಬ ಅನುಕೂಲವಾಗುತ್ತೆ ಅಂತ ಬಿಪಿಎಲ್ ಫಲಾನುಭವಿಗಳು ಹೇಳ್ತಿದ್ದಾರೆ.
ಒಟ್ನಲ್ಲಿ, ಮುಂದಿನ ತಿಂಗಳಿನಿಂದ ಹಣದ ಬದಲು ಅಕ್ಕಿ ಸಿಗತ್ತೆ ಅಂತ ಖುಷಿಯಾಗಿದ್ದ ಫಲಾನುಭವಿಗಳಿಗೆ ಮತ್ತೆ ಹುಸಿಯಾಗಿದ್ದು, ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಅಕ್ಕಿಯನ್ನ ಕೊಡುತ್ತಾ ಇಲ್ವಾ ಎನ್ನುವುದನ್ನ ಕಾದುನೋಡ್ಬೇಕಿದೆ.