ಶಿರಸಿ: ವಿದ್ಯುತ್ ಶಾರ್ಟ್ ಸರ್ಕ್ಯುಟ್ ನಿಂದ ಬೇಕರಿಗೆ ಬೆಂಕಿ ಬಿದ್ದ ಘಟನೆ ತಾಲೂಕಿನ ಕೊರ್ಲಕಟ್ಟಾದಲ್ಲಿ ನಡೆದಿದೆ.
ಮಹಂತೇಶ್ ಮಾಳಂಜಿ ಎನ್ನುವವರಿಗೆ ಸೇರಿದ್ದ ಬೇಕರಿಯಲ್ಲಿ ಈ ಅವಘಡ ನಡೆದಿದೆ. ಬೆಂಕಿ ಕೆನ್ನಾಲಿಗೆ ಬೇಕರಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿ ಭಾರೀ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ.