ಹಳ್ಳದಲ್ಲಿ ಕೊಚ್ಚಿಹೋದ ಹಸು

ಯಲ್ಲಾಪುರ: ಮೇಯಲು ಹೋದ ಹಸು ಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಮಜ್ಜಿಗೆಹಳ್ಳದಲ್ಲಿ ನಡೆದಿದೆ. ಟಕ್ಕು ಆರ್.ಟಿ ಎಂಬವರಿಗೆ ಸೇರಿದ ಹಸು ಇದಾಗಿದ್ದು, ಮೇಯಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಹಳ್ಳದಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದೆ. ಹಳ್ಳ ದಿಂದ ಸ್ವಲ್ಪ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.