ಮೊದಲ ಎಸೆತದಲ್ಲೇ ನೀರಜ್‌ ಚೋಪ್ರಾ ಫೈನಲ್‌ಗೆ ಜಂಪ್‌

ಪ್ಯಾರಿಸ್: ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ ಪ್ಯಾರಿಸ್ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಮಂಗಳವಾರ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ 89.34 ಮೀ ಎಸೆದು ನೀರಜ್‌ ಫೈನಲ್‌ಗೆ ಜಂಪ್‌ ಆಗಿದ್ದಾರೆ. ವಿಶ್ವ ಚಾಂಪಿಯನ್ ಮೇನಲ್ಲಿ ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ 88.36 ಮೀ. ಎಸೆದಿದ್ದರು.